ಮುಂಬೈ ಕರ್ನಾಟಕದ ಕುತಂತ್ರ ನೀತಿಗೆ ಸಂಘಟಿತ ಹೋರಾಟ

ಕಲಬುರಗಿ: ಸರಕಾರ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ನಾಮಕೇ ವಾಸ್ತೆ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿ  ಅಖಂಡ ಕರ್ನಾಟಕ ರಾಜ್ಯ ರಚನೆಯ ನಂತರ ರಾಜಾರೋಷವಾಗಿ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಹೈದಾರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ಅನುದಾನದ ಮಂಜೂರಾತಿಯಲ್ಲಿ ಅನ್ಯಾಯ, ಮಂಜೂರಾದ ಯೋಜನೆಗಳಿಗೆ ಅನುಷ್ಠಾನ ಮಾಡದೇ ಇರುವುದು, ಘೋಷಣೆ ಮಾಡಿದಂತಹ ಯೋಜನೆಗಳನ್ನು ಅನುಷ್ಠಾನ ಮಾಡದೇ ಇರುವುದು. ಇದ್ದಂತಹ ಕಚೇರಿ ಕೇಂದ್ರಗಳನ್ನು ಬೇರೆಡೆ ಸ್ಥಳಾಂತರ ಮಾಡಿರುವುದು ಮತ್ತು ಮಾಡುತ್ತಿರುವುದು ನೋಡಿದರೆ ಸಾಕಾರ ಕಲ್ಯಾಣ ಕರ್ನಾಟಕದಂತಹ ವಿಶಾಲ ಪ್ರದೇಶದ ಜನರಿಗೆ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆ ಅಧಿಕೃತವಾಗಿಯೇ ಮಾಡುತ್ತಿದೆ.

17.16 ಕೋಟಿ ಕಾಮಗಾರಿಗೆ ಶಾಸಕಿ ಕನೀಜ್ ಫಾತೀಮಾ ಚಾಲನೆ

ಇಂತಹ ಘಟನೆಗಳು ನಡೆದರೂ ಸಹ ನಮ್ಮ ಆಡಳಿತ ಪಕ್ಷದ ಬಿ.ಜೆ.ಪಿ. ನಾಯಕರು ಮೌನಕ್ಕೆ ಶರಣಾಗಿರುವುದು ಖೇದಕರವಾದ ವಿಷಯವಾಗಿದ್ದು, ವಿರೋಧ ಪಕ್ಷದ ಕಾಂಗ್ರೆಸ್‌ನ ಕೆಲವು ನಾಯಕರನ್ನು ಹೊರತುಪಡಿಸಿ ದರೆ ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಕಾಂಗ್ರೆಸ್ ಪಕ್ಷ ಸಮರ್ಥವಾಗಿ ವಿರೋಧ ಮಾಡದೇ ಕೈಕಟ್ಟಿಕೊಂಡು ಕುಳಿತಿರುವುದು ಶೋಚನಿಯವಾದ ಸಂಗತಿಯಾಗಿದೆ ಎಂದು ದಸ್ತಿ ಕೀಡಿಕಾರಿದ್ದಾರೆ.

ದಶಕಗಳ ಕನಸಾಗಿರುವ ಕಲಬುರಗಿಯ ರೈಲ್ವೆ ವಿಭಾಗಿಯ ಕಚೇರಿ, ನೀಮ್ಝ್ , ೩೭೧(ಜೆ)ನೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ, ಪ್ರತ್ಯೇಕ ಸಚಿವಾಲಯದ ಸ್ಥಾಪನೆ, ೩೭೧ನೇ ಕಲಮಿಗೆ ಸಂಬಂಧಿಸಿದ ಕಚೇರಿಗಳು ಕಲಬುರಗಿಗೆ ಸ್ಥಳಾಂತರ ಮಾಡುವುದು, ಬೀದರದಲ್ಲಿ ಸಿ.ಪೆಡ್ ಸ್ಥಾಪನೆ, ಕೊಪ್ಪಳದಲ್ಲಿ ಉಡಾನ್ ಯೋಜನೆಯಡಿ  ಏರ್ ಪೋರ್ಟ ಸ್ಥಾಪನೆ, ಕಲಬುರಗಿ ಎರಡನೆಯ ರಿಂಗ್ ರಸ್ತೆ ಕಾಮಗಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಾಮಗಾರಿ ಸೇರಿದಂತೆ ಅನೇಕ ಯೋಜನೆಗಳು ಕನಸಾಗಿಯೇ ಉಳಿದಿವೆ. ನಮಗೆ ಮಂಜೂರಾದ ಐ.ಐ.ಟಿ., ಧಾರವಾಡಕ್ಕೆ ಸ್ಥಳಾಂತರ, ನವಿಕರಿಸಬಹುದಾದ ಇಂಧನ ಅಭಿವೃದ್ಧಿ ಇಲಾಖೆಯ ಕಚೇರಿ ಸ್ಥಳಾಂತರ, ಜವಳಿ ಪಾರ್ಕ ಬೇರೆಡೆಗೆ ಸ್ಥಳಾಂತರ, ಮಂಜೂರಾಗಬೇಕಾದ ಏಮ್ಸ ಹುಬ್ಬಳ್ಳಿಗೆ ಸ್ಥಳಾಂತರವಾಗುವ ಕುತಂತ್ರ, ಅದರಂತೆ ಬೀದರ್ ನ ಪಶು ವಿಶ್ವವಿದ್ಯಾಲಯ ಒಡೆದು ಶಿವಮೊಗ್ಗಾಕ್ಕೆ ಸ್ಥಳಾಂತರ ಮಾಡುವುದು. ಹೀಗೆ ರಾಜಾರೋಷವಾಗಿ ನಮಗೆ ಅನ್ಯಾಯವಾಗುತ್ತಿದ್ದರೂ ಸಹ ನಮ್ಮ ನಾಯಕರು ಮತದಾರರು ಕೊಟ್ಟಿರುವ ಪರಮಾಧಿಕಾರ ಏಕೆ ಚಲಾಯಿಸುತ್ತಿಲ್ಲ ಎಂಬುದು ನಮ್ಮ ಭಾಗದ ಜನಮಾನಸಕ್ಕೆ ಬಹಳ ದುಃಖದ ವಿಷಯವಾಗಿದೆ.

ಜೆಡಿಎಸ್‌ಗೆ ದಶವಂತ ರಾಜೀನಾಮೆ

ಒಂದು ಕಡೆ ಮೈಸೂರು ಕರ್ನಾಟಕದ ನಾಯಕರು ಮಲತಾಯಿ ಧೋರಣೆ ಮಾಡಿದರೆ, ಮತ್ತೊಂದು ಕಡೆ ಮುಂಬೈ ಕರ್ನಾಟಕದ ನಾಯಕರು ನಮಗೆ ಮಂಜೂರಾದ ಯೋಜನೆಗಳನ್ನು ತಮ್ಮ ರಾಜಕಿಯ ಪ್ರಭಾವವನ್ನು ಬಳಸಿಕೊಂಡು ಹುಬ್ಬಳ್ಳಿ-ಧಾರವಾಡಕ್ಕೆ ಸ್ಥಳಾಂತರ ಮಾಡಿಕೊಳ್ಳುತ್ತಿದ್ದಾರೆ.

ಮುಂಬೈ ಕರ್ನಾಟಕದ ನಾಯಕರು ಅದರಲ್ಲೂ ವಿಶೇಷವಾಗಿ ಪ್ರಸ್ತುತ ಸಚಿವರಾದ ಉಮೇಶ ಕತ್ತಿಯವರು ಆಡಳಿತ ಪಕ್ಷದಲ್ಲಿದ್ದರೂ ಸಹ ಈ ಹಿಂದೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ನಮಗೆ ಪ್ರತ್ಯೇಕ ರಾಜ್ಯ ಬೇಕು, ಬೆಳಗಾವಿಯಲ್ಲಿರುವ ವಿಧಾನಸೌಧವನ್ನು ಉಪಯೋಗಿಸಿಕೊಂಡು, ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಮಾಡಿಕೊಳ್ಳುತ್ತೇವೆ ಎಂಬ ದಿಟ್ಟತನದ ಹೇಳಿಕೆ ನೀಡಿದರು. ಆದರೆ, ನಮ್ಮ ನಾಯಕರು ಆಗಿರುವ ಅನ್ಯಾಯಕ್ಕೆ ಸಹಜಪ್ರತಿಕ್ರಿಯೆಯೂ ಸಹ ನೀಡದೇ ಇರುವುದು ಯಾವ ನ್ಯಾಯ? ಅದರಲ್ಲೂ ವಿರೋಧ ಪಕ್ಷದ ಬಹುತೇಕ ನಾಯಕರು ಸಹ ಮೌನ ವಹಿಸಿರುವುದು ಕಲ್ಯಾಣ ಕರ್ನಾಟಕದ ಜನಮಾನಸಕ್ಕೆ ಅತೀವ ನೋವು ಉಂಟಾಗಿದೆ ಎಂದು ತಿಳಿಸಿದ್ದಾರೆ.

ಮೊಬೈಲ್‍ನಲ್ಲಿ ಮತದಾರರ ಗುರುತಿನ ಚೀಟಿ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ 

ಸಮಿತಿ ಇದನ್ನು ಮನಗಂಡು ಫೆಬ್ರುವರಿ ೧೨ ರಂದು ಕಲಬುರಗಿ ಜಿಲ್ಲೆಯ ಸರ್ವ ಪಕ್ಷಗಳ ಮುಖಂಡರ ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿರುವಂತೆ ನಮಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಮತ್ತು ಬರುವ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮತ್ತು ಒತ್ತು ನೀಡಲು ಒತ್ತಾಯಿಸಿ ಕಲ್ಯಾಣ ಕರ್ನಾಟಕದ ಸರ್ವ ಪಕ್ಷಗಳ ಜಿಲ್ಲಾವಾರು ಅಧ್ಯಕ್ಷರು, ಸರ್ವ ಪಕ್ಷಗಳ ಶಾಸಕರು, ಬೆಂಗಳೂರಿನ ಶಾಸಕರ ಭವನದಲ್ಲಿ ಸಭೆ ನಡೆಸಿ ಮುಖ್ಯಮಂತ್ರಿಗಳಲ್ಲಿ ನಿಯೋಗ ತೆಗೆದುಕೊಂಡು ಹೋಗಲು ನಿರ್ಧಾರ ಕೈಗೊಂಡಿರುವಂತೆ ಜಿಲ್ಲಾ ಬಿ.ಜೆ.ಪಿ.ಘಟಕ ಅದರಲ್ಲೂ ವಿಶೇಷವಾಗಿ ಬಿ.ಜೆ.ಪಿ.ಯ ಜಿಲ್ಲಾ ಅಧ್ಯಕ್ಷರಾದ ಶಿವರಾಜ ಪಾಟೀಲ ರದ್ದೆವಾಡ ಅವರು ಅಧಿವೇಶನದ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ಹತ್ತಿರ ನಿಯೋಗ ತೆಗೆದುಕೊಂಡು ಹೋಗಲು ಮುತುವರ್ಜಿ ವಹಿಸಿ ಅನೇಕ ನಾಯಕರ ಸಂಪರ್ಕ ಮಾಡುತ್ತಿರುವ ಬಗ್ಗೆ ಸಮಿತಿಗೆ ತಿಳಿಸಿರುತ್ತಾರೆ.

ಈ ಬಗ್ಗೆ ಎಲ್ಲಾ ಪಕ್ಷದ ನಾಯಕರು ಸಂಘಟಿತ ರಾಜಕಿಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಆಗುತ್ತಿರುವ ಅನ್ಯಾಯದ ಬಗ್ಗೆ ಸಂಘಟಿತ ಹೋರಾಟಕ್ಕೆ ಪಕ್ಷಾತೀತವಾಗಿ ಮುಂದಾಗಲು ಸಮಿತಿ ಎಲ್ಲಾ ಪಕ್ಷದ ನಾಯಕರಲ್ಲಿ ಒತ್ತಾಯಿಸಿದೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

6 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

8 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

15 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

15 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

16 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago