ವಿದ್ಯಾರ್ಥಿಗಳಿಗೆ ವಿಜ್ಞಾನ ಮಾರ್ಗದರ್ಶನ

0
84

ವಾಡಿ: ಪಟ್ಟಣದ ಬಂಜಾರಾ ಮಹಿಳಾ ಶಿಕ್ಷಣ ಸಂಸ್ಥೆಯ ಶ್ರೀಗುರು ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ವಿದ್ಯಾರ್ಥಿಗಳು ಸರ್ ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿದರು.

ಮೊಬೈಲ್‍ನಲ್ಲಿ ಮತದಾರರ ಗುರುತಿನ ಚೀಟಿ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ 

Contact Your\'s Advertisement; 9902492681

ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ವಿಜ್ಞಾನದ ಬೋಧನೆ ಮಾಡುವ ಮೂಲಕ ಮಾತನಾಡಿದ ವಿಜ್ಞಾನ ಶಿಕ್ಷಕ ಗುಂಡಪ್ಪ ಭಂಕೂರ, ಪಾರದರ್ಶಕ ಮಾಧ್ಯಮದಲ್ಲಿ ಬೆಳಕಿನ ಕಣಗಳ ಚದುರುವಿಕೆಯ ಹಿನ್ನೆಲೆಯ ಸಂಶೋಧನೆ ಮಾಡಿದ್ದಕ್ಕಾಗಿ ಸರ್ ಸಿ.ವಿ.ರಾಮನ್ ಅವರನ್ನು ನೋಬೆಲ್ ಪುರಸ್ಕಾರದಿಂದ ಗೌರವಿಸಲಾಯಿತು. ಆಕಾಶ ಮತ್ತು ಸಮುದ್ರ ಬಣ್ಣ ಏಕೆ ನೀಲಿ ಎಂಬುದಕ್ಕೆ ಬೆಳಕಿನ ಚದುರುವಿಕೆ ಕಾರಣ ಎಂದು ರಾಮನ್ ವಿವರಿಸಿದ್ದರು. ವಿದ್ಯಾರ್ಥಿಗಳು ವಿಜ್ಞಾನ ಅಧ್ಯಯನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ವಿಜ್ಞಾನ ಪ್ರಾಯೋಗಿಕ ಶಿಕ್ಷಣದ ಜತೆಗೆ ವೈಜ್ಞಾನಿಕ ಮನೋಭಾವ ಹೊಂದಬೇಕು ಎಂದು ಹೇಳಿದರು.

ಮುಂಬೈ ಕರ್ನಾಟಕದ ಕುತಂತ್ರ ನೀತಿಗೆ ಸಂಘಟಿತ ಹೋರಾಟ

ವಿಜ್ಞಾನ ವಿಷಯದ ಕುರಿತು ಚಿತ್ರಕಲೆ, ಕಿರು ನಾಟಕ ಮತ್ತು ಪ್ರಾಯೋಗಿಕ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಶಿಕ್ಷಕ ರಾಘವೆಂದ್ರ ಗುಡಾಳ, ಮಲ್ಲಮ್ಮ ಎಸ್.ನಾಯಕ, ಶಿಕ್ಷಕರಾದ ಚಂದ್ರಶೇಖರ ಕಲ್ಯಾಣಿ, ಸಿದ್ಧಲಿಂಗ ತಂಬೂರಿ, ಸುನಿತಾ ರಾಠೋಡ, ಪ್ರೀಯದರ್ಶಿನಿ ಕರದಾಳ, ಸವಿತಾ ರಾಠೋಡ, ವಿಜಯಲಕ್ಷ್ಮೀ ಹಳ್ಳಿ, ಸುರೇಶ ರಾಠೋಡ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here