ಶಿವಾಜಿ ಮಹಾರಾಜರ ಜಯಂತಿ ಮತ್ತು ನಾಟಕ ಪ್ರದರ್ಶನ

ಭಾಲ್ಕಿ: ಒಬ್ಬ ರಾಜನಾಗಿ ಮಹಾಪುರಷರ ಮಾದರಿಯಲ್ಲಿ ಜನಸೇವೆ ಮಾಡಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜ ಅವರಿಗೆ ಸಲ್ಲುತ್ತದೆ. ಹಾಗಾಗಿ ರಾಜಮಹಾರಾಜರ ಸಮೂಹದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ವಿಶೇಷ ಎದ್ದು ಕಾಣುತ್ತಾರೆ. ಅವರ ಜಯಂತಿ ಆಚರಿಸುವುದೆಂದರೆ, ಒಬ್ಬ ಮಹಾಪುರಷರ ಜಯಂತಿ ಆಚರಿಸಿದಂತೆ ಎಂದು ಪೂಜ್ಯ ಗುರುಬಸವ ಪಟ್ಟದ್ದೇವರು ನುಡಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನ ಭಾಲ್ಕಿ ಆಶ್ರಯದಲ್ಲಿ ಶ್ರೀ ಶಿವಕುಮಾರ ಕಲಾಸಂಘ ಸಾಣೇಹಳ್ಳಿ ಶಿವಸಂಚಾರ ಕಲಾವಿದರಿಂದ ಜೀವ ಇದ್ದರೆ ಜೀವನ ನಾಟಕ ಪ್ರದರ್ಶನ ಉದ್ಘಾಟನೆ ಸಮಾರಂಭದ ದಿವ್ಯಸನ್ನಿಧಾನವಹಿಸಿ ಪೂಜ್ಯ ಶ್ರೀಗಳು ಒಂದು ನಾಟಕದ ಪ್ರದರ್ಶನ ಒಂದು ತಿಂಗಳು ಪ್ರವಚನಕ್ಕೆ ಸಮವಾಗಿರುತ್ತದೆ ಮತ್ತು ಅಷ್ಟು ಪ್ರಭಾವಿಯಾಗಿರುತ್ತದೆ ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ಮೆಗಾ ಉದ್ಯೋಗ ಮೇಳ: 200 ಉದ್ಯೋಗ ಆಕಾಂಕ್ಷಿಗಳಿಗೆ ಒಲಿದ ಉದ್ಯೋಗಗಳು

ಪೂಜ್ಯ ಮಹಾಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಸ್ಥಳೀಯ ಕಿಸಾನ್ ಶಿಕ್ಷಣ ಪ್ರಸಾರಕ ಮಂಡಳಿ ಅಧ್ಯಕ್ಷ ಅನೀಲ ಸಿಂಧೆ ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿದರು. ಸೋಮನಾಥಪ್ಪ ಅಷ್ಟೂರೆ ಅಧ್ಯಕ್ಷತೆ ವಹಿಸಿದ್ದರು. ರಾಜು ಜುಬರೆ ಶಿವಾಜಿ ಮಹಾರಾಜ ಕುರಿತು ಉಪನ್ಯಾಸ ನೀಡಿದರು. ಜನಾರ್ಧನ ಬಿರಾದಾರ ಮತ್ತು ದಯಾನಂದ ಸೂರ್ಯವಂಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಜಾಗತಿಕ ರಾಯಭಾರಿ ಯುನಿವರ್‌ಸಿಟಿ ಆಫ್ ಮೇರಿಲ್ಯಾಂಡ್ ಬಾಲ್ಡಿಮೋರ ಅಮೇರಿಕಾದ ಕೀರ್ತನಾ ದಾದಾರಾವ ಕೋಳೆಕರ ಅವರಿಗೆ ವಿಶೇಷ ಗೌರವ ಸನ್ಮಾನ ಜರುಗಿತು.

ಕಿವಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ

ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಡಾ.ಯುವರಾಜ ಜಾಧವ, ರಾಜಪ್ಪ ಪಾಟೀಲ, ಸೂರ್ಯಕಾಂತ ಸುಂಟೆ, ಶಿವಕುಮಾರ ಕಲ್ಯಾಣೆ, ಬಸವರಾಜ ಪಾಟೀಲ, ದತ್ತು ಹೊನ್ನಾ, ದಿಲೀಪ ಸುಂಟೆ, ಕಿರಣ ಖಂಡ್ರೆ, ಓಂಪ್ರಕಾಶ ರೊಟ್ಟೆ, ಪ್ರತಾಪ ಪಾಟೀಲ, ಪಂಚಶೀಲ ಪಾಟೀಲ, ಬಾಬುರಾವ ಹುಣಜೆ, ದಿಲೀಪ ಜೋಳದಾಪಕೆ ಇದ್ದರು. ವೀರಣ್ಣ ಕುಂಬಾರ ಸ್ವಾಗತಿಸಿದರು. ದಿಲೀಪ ಥಮಕೆ ನಿರೂಪಿಸಿದರು. ಬಾಬು ಬೆಲ್ದಾಳ ವಂದಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

3 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

5 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

12 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

12 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

12 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

23 hours ago