ಆಳಂದ: ಭಾವಿ ಭಾರತವನ್ನು ಬೆಳಗಲಿರುವ ಯುವಕರು ದೇಶಪ್ರೇಮ ಬೆಳಸಿಕೊಳ್ಳಲು ಮುಂದಾಗಬೇಕು ಎಂದು ಎಸ್ ಆರ್ ಜಿ ಫೌಂಡೇಶನ್ ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ ಕರೆ ನೀಡಿದರು.
ಬುಧುವಾರ ಆಳಂದ ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ವೆಂಕಯ್ಯ ಕೂಸಯ್ಯ ಗುತ್ತೇದಾರ ಪದವಿ ಕಾಲೇಜಿನಲ್ಲಿ ಭಾರತ ಸೇವಾ ದಳ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಜಂಟಿಯಾಗಿ ಹಮ್ಮಿಕೊಂಡ ಯುವಕ- ಯುವತಿಯರಿಗಾಗಿ ಕೊರೋನಾ ಜಾಗೃತಿ ಹಾಗೂ ಸೇವಾದಳ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶರೀರವನ್ನು ಉತ್ತಮ ಆಹಾರ ಸೇವಿಸುವುದರಿಂದ ದೈಹಿಕವಾಗಿ ಸದೃಢವಾಗಿ ಕಾಪಾಡಬಹುದು ಅದಕ್ಕಾಗಿ ಯುವಕರು ಪೌಷ್ಠಿಕಯುಕ್ತವಾದ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ತಪ್ಪದೇ ಸೇವಿಸಬೇಕು ಎಂದರು.
ಶಿವಾಜಿ ಮಹಾರಾಜರ ಜಯಂತಿ ಮತ್ತು ನಾಟಕ ಪ್ರದರ್ಶನ
ಪ್ರಕೃತಿ ಜೊತೆ ಸಾಗುವುದು ಇಂದಿನ ಅಗತ್ಯವಾಗಿದೆ. ಸಂಸ್ಕೃತಿಯನ್ನು ತಲೆಮಾರುಗಳಿಂದ ತಲೆಮಾರುಗಳಿಗೆ ವರ್ಗಾಯಿಸಿಕೊಂಡು ಬರುವ ಹೊಣೆಗಾರಿಕೆಯೂ ನಮ್ಮ ಮೇಲಿದೆ ಅದಕ್ಕಾಗಿ ನಾವು ಜವಾಬ್ದಾರಿ ಹೊರಲು ಸಿದ್ದರಿರಬೇಕು ಎಂದು ನುಡಿದರು.
ಉನ್ನತ ವಿಚಾರ, ಉದಾತ್ತ ಧೋರಣೆಗಳು ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಈ ನಿಟ್ಟಿನಲ್ಲಿ ಸದಾವಕಾಲ ಸದ್ವಿಚಾರ, ಸತ್ ಚಿಂತನೆಗಳನ್ನು ಮೈಗೂಡಿಸಿಕೊಂಡು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯ ಕಲ್ಯಾಣಿ ಸಾವಳಗಿ, ಸೂರ್ಯಕಾಂತ ತಟ್ಟಿ ಮಾತನಾಡಿದರು. ವೈದ್ಯ ಡಾ. ಸುಶಾಂತ ಸಂಗಾ, ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ನಂದಿಕೋಲಮಠ ಮಾತನಾಡಿ, ಕೊರೋನಾ ರೋಗದ ಕುರಿತು ಎಚ್ಚರಿಕೆವಹಿಸಬೇಕಾದ ಅಂಶಗಳ ಮಾಹಿತಿ ವಿದ್ಯಾರ್ಥಿಗಳಿಗೆ ನೀಡಿದರು. ಮಾತನಾಡಿದರು. ರಾಜ್ಯ ಸಂಪನ್ಮೂಲ ಶಿಕ್ಷಕ ಚೆನ್ನಮಲ್ಲಯ್ಯ ಕಠಾರಿಮಠ ಭಾರತ ಸೇವಾದಳದ ಕುರಿತು ಮಾಹಿತಿ ನೀಡಿದರು.
ಮೆಗಾ ಉದ್ಯೋಗ ಮೇಳ: 200 ಉದ್ಯೋಗ ಆಕಾಂಕ್ಷಿಗಳಿಗೆ ಒಲಿದ ಉದ್ಯೋಗಗಳು
ಕಾರ್ಯಕ್ರಮದಲ್ಲಿ ಎಂ ಎಸ್ ಜಗದೀಶ, ಸೇವಾದಳ ತಾಲೂಕಾ ಅಧ್ಯಕ್ಷ ಸಿದ್ದಾರೂಢ ಸಮತಾ ಜೀವನ, ನೀಲಕಂಠಪ್ಪ, ಲಕ್ಷ್ಮೀಕಾಂತ ರ‍್ಯಾಕಾ, ಪ್ರಾಚಾರ್ಯ ಅಶೋಕರೆಡ್ಡಿ, ಪ್ರಾಂಶುಪಾಲ ಡಾ. ಅಪ್ಪಾಸಾಬ ಬಿರಾದಾರ, ಮುಖ್ಯ ಶಿಕ್ಷಕಿ ಜ್ಯೋತಿ ವಿಶಾಕ್, ಚಂದ್ರಕಾಂತ ಕಲಶೆಟ್ಟಿ, ರಾಣಪ್ಪ ಸಂಗನ, ಗುಂಡೇರಾವ ಹಳಿಮನಿ, ಮಲ್ಲಿನಾಥ ಮುನ್ನೊಳ್ಳಿ ಭಾಗವಹಿಸಿದ್ದರು.
ಸಂಪನ್ಮೂಲ ಶಿಕ್ಷಕ ಅಪ್ಪಾಸಾಬ ತೀರ್ಥೆ ಸ್ವಾಗತಿಸಿದರೆ, ಜಿಲ್ಲಾ ಸಂಘಟಕ ಚಂದ್ರಕಾಂತ ಜಮಾದಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕಾ ಅಧಿನಾಯಕ ಶರಣಬಸಪ್ಪ ವಡಗಾಂವ ನಿರೂಪಿಸಿದರು.