ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಮನವಿ

0
27

ಸುರಪುರ: ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ನಗರಸಭೆ ವತಿಯಿಂದ ನಿವೇಶನ ಒದಗಿಸುವಂತೆ ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿ ಹಾಗು ಉಪಾಧ್ಯಕ್ಷ ಮಹೇಶ ಪಾಟೀಲ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಮುಖಂಡರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರು,ನಮ್ಮ ಸುರಪುರ ಎಂದರೆ ಅದು ಐತಿಹಾಸಿಕ ಹಿನ್ನೆಲೆಯುಳ್ಳ ಹಾಗು ಅನೇಕ ಜನ ಶರಣರು ಮಹಾತ್ಮರು ಜನಸಿದ ನೆಲೆವೀಡಾಗಿದೆ,ಶ್ರೀವೇಣುಗೋಪಾಲ ಸ್ವಾಮಿ ತಿಂಥಣಿಯ ಮೌನೇಶ್ವರ ಮುದನೂರಿನ ದಾಸಿಮಯ್ಯ ಕೆಂಭಾವಿಯ ಬೋಗಣ್ಣ ಹಾವಿನಾಳದ ಕಲ್ಲಯ್ಯ ದೇವಾಪುರದ ಲಕ್ಷ್ಮೀಶ ಹೀಗೆ ಅನೇಕ ಜನ ವಚನಕಾರರು ಕವಿಗಳು ಬಾಳಿದ ಈ ನೆಲದಲ್ಲಿ ಕನ್ನಡ ಸಾಹಿತ್ಯಕ್ಕೆ ಅನೇಕ ಕೊಡುಗೆಯನ್ನು ನೀಡಿದ್ದಾರೆ.

Contact Your\'s Advertisement; 9902492681

ಶಾಸಕ ಮತ್ತಿಮೂಡ್ ಜನ್ಮದಿನ: ಪಕ್ಷದ ಮುಖಂಡರ ಭೇಟಿ

ಇಂತಹ ಪುಣ್ಯಭೂಮಿಯಲ್ಲಿ ಸಾಹಿತ್ಯ ಪರಿಷತ್ ಭವನ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.ಈಗಾಗಲೆ ಯಾದಗಿರಿಯಲ್ಲಿ ಶಹಾಪುರದಲ್ಲಿ ಸಾಹಿತ್ಯ ಪರಿಷತ್ ಭವನ ನಿರ್ಮಾಣಗೊಂಡಿವೆ ಆದರೆ ಸುರಪುರದಲ್ಲಿ ಇಲ್ಲಿಯವರೆಗೆ ಭವನ ನಿರ್ಮಾಣವಾಗಿಲ್ಲ.ಆದ್ದರಿಂದ ಈಗ ಭವನ ನಿರ್ಮಾಣ ಅವಶ್ಯಕವಾಗಿದ್ದು ನಗರಸಭೆಯಿಂದ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಅಧ್ಯಕ್ಷರು ಹಾಗು ಉಪಾಧ್ಯಕ್ಷರು ನಗರಸಭೆಯಿಂದ ಸಾಧ್ಯವಾಗಿಸುವುದಾಗಿ ಭರವಸೆಯನ್ನು ನೀಡಿದರು.

ಮೆಗಾ ಉದ್ಯೋಗ ಮೇಳ: 200 ಉದ್ಯೋಗ ಆಕಾಂಕ್ಷಿಗಳಿಗೆ ಒಲಿದ ಉದ್ಯೋಗಗಳು

ಈ ಸಂದರ್ಭದಲ್ಲಿ ಮುಖಂಡರಾದ ವೇಣುಗೋಪಾಲ ಜೇವರ್ಗಿ ಹಾಗು ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಶಾಂತಪ್ಪ ಬೂದಿಹಾಳ ಬೀರಣ್ಣ ಬಿ.ಕೆ.ಆಲ್ದಾಳ ಯಲ್ಲಪ್ಪ ಹುಲಿಕಲ್ ನ್ಯಾಯವಾದಿ ಎಮ್.ಎಸ್.ಹಿರೇಮಠ ಮುದ್ದಪ್ಪ ಅಪ್ಪಾಗೋಳ ಹೆಚ್.ರಾಠೋಡ ಕನಕಪ್ಪ ವಾಗಣಗೇರಾ ಶರಣಬಸಪ್ಪ ಯಳವಾರ ಎ.ಕಮಲಾಕರ ಅರಳಿಗಿಡ ಶಕುಂತಲಾ ಎಸ್.ಜಾಲವಾದಿ ರಾಜು ಕುಂಬಾರ ರಾಘವೇಂದ್ರ ಭಕ್ರಿ ಗಿರಿಧರ ಹೂಗಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here