ಬೆಂಗಳೂರ: ಅಲೆಮಾರಿ ಪಿಂಜಾರ, ನದಾಫ, ಮನ್ಸೂರಿ, ದುದೇಕುಲ ಸಮುದಾಯಕ್ಕೆ ಪಿಂಜಾರ ಅಭಿವೃದ್ದಿ ನಿಗಮ ಸ್ಥಾಪನೆ ಅವಶ್ಯವಾಗಿದೆ. ಉಳಿದ ಸಮುದಾಯಕ್ಕೆ ನೀಡಿದಂತಹ ಸವಲತ್ತುಗಳಲ್ಲಿ ಅಲೆಮಾರಿ ಜನಾಂಗದಲ್ಲಿ ಬರುವಂತಹ ಪಿಂಜಾರ ನದಾಫ ಸಮುದಾಯದ ಪ್ರಮುಖ ಬೇಡಿಕೆ ಈಡೇರಿಸಬೇಕೆಂದು ಕೊಡೇಕಲ್ ಭಾವೈಕ್ಯೆತೆ ಶ್ರೀ ದಾವಲಮಲಿಕ್ ದರ್ಗಾದ ಧರ್ಮದರ್ಶಿಗಳಾದ ಪೂಜ್ಯ ಶ್ರೀ ದಾವಲಮಲಿಕ್ ಅಜ್ಜನವರು ಹೇಳಿದರು.
ಅವರು ನಗರದಲ್ಲಿ ಗುರುವಾರ ಕರ್ನಾಟಕ ಪಿಂಜಾರ ನದಾಫ ಮನ್ಸೂರಿ ಸಂಘಗಳ ಮಹಾಮಂಡಳ, ಕರ್ನಾಟಕ ರಾಜ್ಯ ದುದೇಕುಲ ಪಿಂಜಾರಿ ನದಾಫ ಸಂಘ ಬೆಂಗಳೂರು ಹಾಗೂ ರಾಜ್ಯದಲ್ಲಿರು ಪಿಂಜಾರ ನದಾಫ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮೌರ್ಯ ಸರ್ಕಲ್‍ನಲ್ಲಿ ಪಿಂಜಾರ ಅಭಿವೃದ್ದಿ ಹಾಗೂ ವಿವಿಧ ಬೇಡಿಕೆಗಳಿಗಾಗಿ ಹಮ್ಮಿಕೊಂಡು ಬೃಹತ್ ಪ್ರತಿಭಟನೆಯಲ್ಲಿ ಸಾನಿದ್ಯ ವಹಿಸಿ ಮಾತನಾಡಿದರು.
ಕರ್ನಾಟಕ ಪಿಂಜಾರ್/ನದಾಫ/ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾದ್ಯಕ್ಷ ಡಾ. ಅಬ್ದುಲರಝಾಕ ನದಾಫ ಮಾತನಾಡಿ ಸುಮಾರು 38 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಪಿಂಜಾರ,ನದಾಫ್ ಸಮುದಾಯ ಹತ್ತಿಯಿಂದ ಗಾದಿ, ಗುಡಾರ, ಹಗ್ಗ ತಯಾರಿಸುವ ವಿಶಿಷ್ಟ ಉತ್ಪಾದನಾ ಚಟುವಟಿಕೆಯ ಮೂಲಕ ಆರ್ಥಿಕ ಲಕ್ಷಣಗಳನ್ನುಳಗೊಂಡಿದೆ. ಸಾಂಸ್ಕøತಿಕವಾಗಿಯೂ ಶತಮಾನಗಳ ಚಾರಿತ್ರಿಕ ಅನುಭವ ಇರುವ ಸಮಾಜ ಇಂದು ಅತ್ಯಂತ ಹಿಂದುಳಿದಿರುವುದು ದುರಾದೃಷ್ಟಕರ. ರಾಜ್ಯದ ವಿವಿಧೆಡೆ ಹರಿದು-ಹಂಚಿಹೋಗಿರುವ ಈ ಸಮುದಾಯಕ್ಕೆ ಅತ್ತ ಉದ್ಯೋಗವೂ ಇಲ್ಲ, ಇತ್ತ ಆಹಾರ ಭದ್ರತೆಯೂ ಇಲ್ಲದೆ, ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ ಇದನ್ನ ಅರಿತು ಪಿಂಜಾರ ಮಹಾಮಂಡಳ ಹಾಗೂ ವಿವಿಧ ಸಂಘಟನೆಗಳ ಮುಖಾಂತರ ಪಿಂಜಾರ ಅಭಿವೃದ್ದಿ ನಿಗಮ ಸ್ಥಾಪನೆಗಾಗಿ ಹೋರಾಟ ಮಾಡುತ್ತಾ ಬಂದಿರುತ್ತೇವೆಂದು ಹೇಳಿದರು.
ಜಿಮ್ಸ್‍ನಲ್ಲಿರುವ ಸೌಲಭ್ಯಗಳನ್ನು ಪಡೆದುಕೊಳ್ಳಿ: ಡಾ. ಕವಿತಾ ಪಾಟೀಲ್
ಹಿಂದುಳಿದ ವರ್ಗಗಳ ಆಯೋಗವು 2010 ರಲ್ಲಿ ಡಾ.ಸಿ.ಎಸ್. ದ್ವಾರಕನಾಥರವರು ಸಲ್ಲಿಸಿದ ವರದಿಯಲ್ಲಿ ಪಿಂಜಾರ ಅಭಿವೃದ್ದಿ ನಿಗಮ ಸ್ಥಾಪನೆಗೆ ಒತ್ತು ನೀಡಿದೆ. ನಮ್ಮ ಅಲೆಮಾರಿ ಪಿಂಜಾರ್, ನದಾಫ್, ಮನ್ಸೂರಿ, ದುದೇಕುಲ ಜನಸಂಖ್ಯೆಗೆ ಸದ್ಯ ಪ್ರ ವರ್ಗ 1 ಕ್ಕೆ ಮೀಸಲಾತಿ ಸೌಲಭ್ಯಗಳು ರಾಜ್ಯದಲ್ಲಿ ಸರಕಾರಿ ಆದೇಶ ವಿದ್ದರು ಎಲ್ಲ ಜಿಲ್ಲೆಯಲ್ಲಿ ಸಿಗುತ್ತಿಲ್ಲ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿರುವುದರಿಂದ ರಾಜ್ಯದಲ್ಲಿ ಸಮಾಜದವರಿಗೆ ಪ್ರವರ್ಗ 1 ಮೀಸಲಾತಿ ನೀಡಲು ತಾಲೂಕಾ ದಂಡಾಧಿಕಾರಿಗಳಿಗೆ ಆದೇಶ ನೀಡಬೇಕೆಂದರು.
ಡಾ. ದ್ವಾರಕನಾಥ ವರದಿ ಆಧರಿಸಿ ಈಗಾಗಲೇ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆಗೊಂಡಿದೆ. ಅಷ್ಟೇ ಅಲ್ಲ, ಲಂಬಾಣಿ ತಾಂಡಾ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ ಸೇರಿದಂತೆ ಅತ್ಯಂತ ಕಡಿಮೆ ಜಾತಿಗೊಂದು ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ. ಆದರೆ, ಇತ್ತೀಚಿಗೆ ವೀರಶೈವ ಲಿಂಗಾಯತ, ಮರಾಠ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿ ಮೂಲ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಪಿಂಜಾರ,ನದಾಫ್,ಮನ್ಸೂರಿ,ದುದೇಕುಲ ಸಮುದಾಯವು ಅತ್ಯಂತ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಆಗ್ರಹಿಸಿದರು.
40 ಲಕ್ಷ ಸಿಸಿ ರಸ್ತೆ ಕಾಮಗಾರಿಗೆ ಶಾಸಕಿ ಕನೀಜ್ ಫಾತೀಮಾ ಚಾಲನೆ
ಈಗಾಗಲೇ ಪಿಂಜಾರ ಅಭಿವೃದ್ದಿ ನಿಗಮ ಸ್ಥಾಪಿಸಲು ರಾಜ್ಯದ ನಲವತ್ತಕ್ಕೂ ಹೆಚ್ಚು ಶಾಸಕರು, ಉಪಸಭಾಪತಿ, ಸಚಿವರು, ಸಂಸದರು, ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ನಿರ್ದೇಶಕರು ಪಿಂಜಾರ ನಿಗಮ ಮಂಡಳಿಗಾಗಿ ಸಮಾಜದ ಅಭಿವೃದ್ದಿಗೆ ಅನುಕೂಲ ಮಾಡಿಕೊಡಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಶಾಸಕರ ಸಹಿಯುಳ್ಳ ಲಿಖಿತ ಪತ್ರವನ್ನು ನೀಡಿ ಸರಕಾರದ ಗಮನಕ್ಕೂ ತರಲಾಗಿದೆ. ತಕ್ಷಣ ಸದನದಲ್ಲಿ ಪಿಂಜಾರ ಅಭಿವೃದ್ದಿ ನಿಗಮ ಸಮುದಾಯದ ಬೇಡಿಕೆ ಈಡೇರಿಸಬೇಕೆಂದು ಹೇಳಿದರು.
ಬಾವಾಸಾಬ ಪರಸನಳ್ಳಿ ಮಾತನಾಡಿ ರಾಜ್ಯದಲ್ಲಿರುವ ಪಿಂಜಾರ, ನದಾಫ, ಮನ್ಸೂರಿ, ದುದೇಕುಲ ಸಮಾಜ ಹತ್ತಿಯಿಂದ ಗಾದಿ, ಗುಡಾರ, ಹಗ್ಗ ತಯಾರಿಸುವ ಕುಲಕಸುಬ ಮಾಡುತ್ತಿದ್ದರುವ ಹಾಸಿಗೆ ಕೂಲಿ ಕಾರ್ಮಿಕರಿಗೆ ಇವತ್ತಿನವರಿಗೂ ಸರಕಾರದಿಂದ ಕಾರ್ಮಿಕ ಇಲಾಖೆಯಿಂದ ಸಿಗುವ ಸೌಕರ್ಯ ಕುಟುಂಬಕ್ಕೆ ಕಾರ್ಮಿಕ ಕಾರ್ಡ, ಮಕ್ಕಳಿಗೆ ಸ್ಕಾಲರ್ಷಿಪ್‍ಗಳ, ಕಾರ್ಮಿಕರ ಪರಿಹಾರ ನಿಧಿಗಳ ಸದುಪಯೋಗ ದೊರೆಯುತ್ತಿಲ್ಲ. ಸಮುದಾಯದ ವಿದ್ಯಾರ್ಥಿನಿಯರಿಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವಸತಿ ನಿಲಯಗಳನ್ನು ಸ್ಥಾಪನೆ ಮಾಡಬೇಕು. ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪಿಂಜಾರ ಅಭಿವೃದ್ದಿ ನಿಗಮದ ಆದೇಶವನ್ನು ನೀಡಬೇಕೆಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯೂರಿಯೂರಪ್ಪನವರು ಡಾ.ಸಿ.ಎಸ್.ದ್ವಾರಕನಾಥರವರ ವರದಿ ಆದರಿಸಿ ವರದಿಯ ಶಿಫಾರಸನ್ನು ಸಮುದಾಯದ ಜಲ್ವಂತ ಸಮಸ್ಯೆಕ್ಕೆ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಬೇಡಿಕೆಗಳನ್ನು ತಕ್ಷಣ ಈಡೇರಿಸಿ ಆದೇಶ ಹೊರಡಿಸಬೇಕೆಂದು ರಾಜ್ಯದಲ್ಲಿರುವ ಪಿಂಜಾರ ನದಾಫ ಇಪ್ಪತ್ತಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮನವಿ ಸಲ್ಲಿಸಿದರು. ಇದಕ್ಕೂ ಮುಂಚೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಮಾಜದ ಭಾಂದವರು ಆನಂದ ಸರ್ಕಲ್‍ನಿಂದ ಮೌರ್ಯ ಸರ್ಕಲ್‍ವರಿಗೆ ಶಾಂತಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರು ಬಂಡೆಪ್ಪ ಕಾಶಂಪುರ ಹಾಗೂ ನಜ್ಮಾ ನಜೀರ್ ಬೆಂಬಲ ಸುಚಿಸಿದರು.
ಈ ಸಂದರ್ಭದಲ್ಲಿ ಅಲಿಫೀರಾ, ದಸ್ತಾಗೀರ ಮುಲ್ಲಾ, ಮಹಮ್ಮದ ಗೌಸ್‍ಕೆ ಸನ್ನಿಕ್, ಖಜಾಂಬರ್ ನದಾಫ, ಸೋಪಿಸಬ್ ಡಿ, ಬಾವಸಾಬ್ ನದಾಫ, ಖಾಸಿಂ ನದಾಫ ಬೇವಿನಾಳ, ಹುಸೇನಸಾಬ ಗಾದಿ, ಫಕೀರಸಾಬ ನದಾಫ, ಹಸನ ಅಂಜಳ, ರಸೂಲ್ ದಾದಾಫೀರ, ಡಿಕೆ ಕುಮಾರ್, ಬಾಬು, ಅನು, ಸಾಧಿಕ್, ಸಾಬು ಸೇರಿದಂತೆ ನೂರಾರು ಸಮಾಜ ಬಾಂಧವರು ಪಾಲ್ಗೋಂಡಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
View Comments
radiologist Ygztvl https://newfasttadalafil.com/ - Cialis Dianabol Nolvadex Ktupft Cialis Apraxia and aphasia Fjmetz https://newfasttadalafil.com/ - tadalafil cialis from india Woiijn