ಕಲಬುರಗಿ: ನಾಳೆ 5 ರಂದು 12:00 ಗಂಟೆಗೆ ನಗರದ ಗಂಜ್ ಎಪಿಎಂಸಿ ಆವರಣದಲ್ಲಿ “ಬೆಂಬಲ ಬೆಲೆ ಖಾತ್ರಿಗೊಳಿಸಿ” ಅಭಿಯಾನದ ಭಾಗವಾಗಿ ರೈತರು, ವರ್ತಕರು, ಕೂಲಿಕಾರರು, ಹಮಾಲಿಗಳು ಸೇರಿದಂತೆ ಇತರರೊಂದಿಗೆ ಸಂಯುಕ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಖ್ಯಾತ ಚಿಂತಕರು ರೈತ ಹೋರಾಟಗಾರರಾದ ಯೋಗೇಂದ್ರ ಯಾದವ್(ದೆಹಲಿ) ಅವರು ಭಾಗವಹಿಸಿ ಉದ್ಘಾಟನೆಯ ಮೂಲಕ ಸಂವಾದ ನಡೆಸಲಿದೆ.
ಪಿಂಜಾರ್ ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆ ಆಗ್ರಹಿಸಿ ಧರಣಿ
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಅಮರನಾಥ ಪಾಟೀಲ್ ವಹಿಸಲಿದ್ದು, ಮಾಜಿ ಶಾಸಕ ಬಿ ಆರ್ ಪಾಟೀಲ್ ಪ್ರಸ್ತಾವಿಕವಾಗಿ ಮಾತನಾಡಲಿದ್ದಾರೆ. ರಾಜ್ಯ ರೈತ ಸಂಘದ ಮುಖಂಡರಾದ ಚಾಮರಸ ಮಾಲಿ ಪಾಟೀಲ್ ಬಡಗಲಪುರ ನಾಗೇಂದ್ರ, ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಯು ಬಸವರಾಜ್ ಎ, ಐಕೆಎಸ್ ರಾಜ್ಯ ಉಪಾಧ್ಯಕ್ಷರಾದ ಬಾಬುರಾವ್ ಹೊನ್ನಾ, ಆರ್.ಕೆ.ಎಸ್ ರಾಜ್ಯ ನಾಯಕರಾದ ಎಚ್ ವಿ ದಿವಾಕರ್ ಈ ಸಂದರ್ಭದ್ಲಿ ಮಾತನಾಡಲಿದ್ದಾರೆ.
ಪ್ರಾಂತ ರೈತ ಸಂಘದ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ ಕಾರ್ಯಕ್ರಮ ನಿರೂಪಿಸಲಿದ್ದು, ಮುಖಂಡರಾದ ಶೌಕತ್ ಅಲಿ ಆಲೂರ್ ಸ್ವಾಗತಿಸಲಿದ್ದಾರೆ. ಎಸ್ ಆರ್ ಕೊಲ್ಲೂರು ಹೊಂದಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಲಿದ್ದಾರೆ.