ರಸ್ತೆ ಅಗಲಿಕರಣದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ: ರಾಜಾ ಪಿಡ್ಡನಾಯಕ ಆರೋಪ

0
64

ಸುರಪುರ: ಇಲ್ಲಿಯ ನಗರಸಭೆಯಲ್ಲಿ ಬಜೆಟ್ ಪೂರ್ವದ ಸಾಮಾನ್ಯ ಸಭೆಯನ್ನು ನಡೆಸಲಾಯಿತು.ಸಾಮನ್ಯ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಸದಸ್ಯರು ಕುಡಿಯುವ ನೀರು ಚರಂಡಿ ಸ್ವಚ್ಛತೆ ಮತ್ತಿತರೆ ವಿಷಯಗಳ ಕುರಿತು ಪೌರಾಯುಕ್ತರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡನಾಯಕ (ತಾತಾ) ಮಾತನಾಡಿ, ನಗರದ ರಂಗಂಪೇಟಯ ವಾರ್ಡ ೨೬ ನೇ ವಾರ್ಡಿನಲ್ಲಿ ಕೈಗೊಳ್ಳಾದ ರಸ್ತೆ ಅಗಲಿಕರಣದಲ್ಲಿ ಸಾಮಾನ್ಯ ಜನರ ಮನೆಗಳನ್ನು ಒಡೆದು ಕೆಲ ಪ್ರಭಾವಿ ವ್ಯಕ್ತಿಗಳ ಮನಗೆಳನ್ನು ಹಾಗೆ ಬಿಡಲಾಗಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕಕ್ಕೆ ಹೆಗ್ಗಳಿಕೆ ತಂದ ಕೃಷಿ ವಿಜ್ಞಾನ ಕೇಂದ್ರ,

ರಸ್ತೆ ಅಗಲಿಕರಣದ ಪ್ರದೇಶದಲ್ಲಿ ಈಗಿರುವ ರಸ್ತೆಯ ಮೇಲೆನೆ ಮರಳಿ ಸಿ.ಸಿ ರಸ್ತೆ ನಿರ್ಮಿಸಲು ಟೆಂಡರ್ ಆಗಿದೆ ಅದರಲ್ಲಿ ಇದು ಅವೈಜ್ಞಾನಿಕವಾದದ್ದು ಮೂದಲೆ ತಗ್ಗು ಪ್ರದೇಶದಲ್ಲಿ ಈ ಅಗಲಿಕರಣ ಕಾರ್ಯವಾಘಿದೆ ಮಳೆ ಬಂದರೆ ಸಾಕು ನಗರದ ನೀರು ರಸ್ತೆಯ ಮೇಲೆ ಹರಿಯುತ್ತವೆ ಹೊಸ ರಸ್ತೆ ನಿರ್ಮಿಸುವ ಮುನ್ನ ಹಳೆಯ ರಸ್ತೆಯನ್ನು ಡಿಗ್ಗಿಂಗ್‌ಮಾಡಿ ಅದರ ಮೇಲೆ ಹೊಸ ರಸ್ತೆ ನಿರ್ಮಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಲ್ಲರಿವ ಬಹುತೇಕ ಮನೆಗಳಿಗೆ ಮಳೆ ಬಂದರೆ ನೀರು ನುಗ್ಗುತ್ತವೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ಈಗಾಗಲೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಪೌರಾಯುಕ್ತ ಜೀವನಕುಮಾರ ಸ್ಪಷ್ಟನೆ ನೀಡಿದರು.

ನಂತರ ಹಿರಿಯ ಸದಸ್ಯ ವೇಣುಮಾದವ ನಾಯಕ ಮಾತನಾಡಿ ಕರವಸೂಲಿಗೆ ಕಂದಾಯ ನೀರಿಕ್ಷಕರುಗಳು ತೆರಳದೆ ಕಾಲಹರಣ ಮಾಡುತ್ತಿದ್ದಾರೆ ಈರೀತಿಯಾದರೆ ಅನುದಾನದ ಕೊರತೆಯಾಗಿ ಅಭಿವೃದ್ದಿ ಕಾರ್ಯ ಕುಟಿಂತವಾಗುತ್ತದೆ ಇದನ್ನು ಗಂಭೀರವಾಗಿ ತೆಗದುಕೊಂಡು ಕಂದಾಯ ನೀರಿಕ್ಷಕರು ಯಾವುದೆ ಕುಂಟುನೆಪ ಹೇಳದೆ ಕರ ವಸೋಲಿಮಾಡಬೇಕು ಕರವಸೋಲಿಕಾರ್ಯದಲ್ಲಿ ನಿಮಗೆ ತೊಂದರೆಯಾದರೆ ಆಯಾ ವಾರ್ಡಿನ ಸದಸ್ಯರೂ ಕೂಡಾ ತಮ್ಮ ಜೊತೆಗೆ ಬಂದು ಸಮಸ್ಯ ಬಗೆಹರಿಸುತ್ತಾರೆ ನೀವು ಕರ ವಸೋಲಿಗೆ ತೆರಳದೆ ಕರ ವಸೂಲಿಯಾಗುತ್ತಿಲ್ಲಾ ಅಂದರೆ ಹೇಗೆ ಎಂದು ಪ್ರಶ್ನಿಸಿದರು. ಈಗಾಲೆ ಕರ ನೀಡದೆ ಇರುವವರ ಪಟ್ಟಿಮಾಡಿ ಅವರಿಗೆ ಅಂತಿಮವಾಗಿ ನೋಟಿಸ ನೀಡಲಾಗಿದೆ ಎಂದು ಪೌರಾಯುಕ್ತ ಸಮಜಾಯಿಸಿ ನೀಡಿದರು.

ನಾಳೆ ಖ್ಯಾತ ಹೋರಾಟಗಾರರ ಯೋಗೇಂದ್ರ ಯಾದವ್ ಕಲಬುರಗಿಗೆ

ಖಾತೆ ವರ್ಗಾವಣೆ, ಖಾತಾ ನಕಲು, ಆಸ್ತಿ ಮತ್ತು ಪಿತ್ರಾಜಿರ್ತ ಆಸ್ತಿ ವರ್ಗಾವಣೆ ಇನ್ನಿತರ ಶುಲ್ಕಗಳ ಏರಿಸಿರುವುದನ್ನು ಸರ್ವಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮೊದಲೆ ಕರೊನಾದಿಂದಾಗಿ ಎಲ್ಲಾ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಇತಂಹ ಸಮಯದಲ್ಲಿ ಏಕಾಏಕಿ ನಗರಸಭೆಯವರು ಆಸ್ತಿ ವರ್ಗಾವಣೆ ಹತ್ತುಪಟ್ಟು ಹೆಚ್ಚಿಸಿ ಶುಲ್ಕಗಳ ಪರಿಷ್ಕರಣೆ ಮಾಡುವುದು ಬೇಡ ಮಾಡುವುದಾದರೆ ಆಸ್ತಿ ವರ್ಗಾವಣೆಯ ಶುಲ್ಕವನ್ನು ಸಾವಿರ ರೂಪಾಯಿ ವಿಧಿಸಬೇಕು ಮತ್ತು ಆಸ್ತಿ ತೆರಿಗೆ ಈಗಿರುವ ಶುಲ್ಕಕಿಂತ ಶೇ.೪ ಹೆಚ್ಚಿಸಬೇಕು ಎಂದು ಸವರ್ಸಸದಸ್ಯರು ಸಭೆಯಲ್ಲಿ ನೀರ್ಣಯಿಸಲಾಯಿತು.

ನಂತರ ಪೌರಾಯುಕ್ತ ಜೀವನ ಕುಮಾರಾ ಮಾತನಾಡಿ ಜಿಲ್ಲಾಧಿಕಾರಿಗಳ ನಗರದ ವಾರ್ಡಗಳಲ್ಲಿರುವ ಬಡಾವಣೆಗಳಲ್ಲಿ ನೀರಿನ ಸಮಸ್ಯ ಸರಿದೋಗಿಸಲು ಕೆಕೆಆರ್ ಡಿಬಿ ಯೋಜನೆ ಅಡಿಯಲ್ಲಿ ಅನುದಾನವಿದೆ ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ದೇಶನ ಣಿಡಿದರು ಅದರಂತೆ ಅತೀ ಮುಖ್ಯವಾಗಿ ಸಮಸ್ಯೆ ಇರುವ ವಾರ್ಡಗಳನ್ನು ಪಟ್ಟಿ ಮಾಡಲಾಗಿದೆ ಒಟ್ಟು ೧೮ ವಾರ್ಡಿನಲ್ಲಿ ೬೭ ಲಕ್ಷ ರೂಪಾಯಿಗಳ ಕಿರು ನೀರು ಸರಬರಾಜಿಗಾಗಿ ಯೋಜನೆಯನ್ನು ರೋಪಿಸಲಾಗಿದೆ. ಈ ಪ್ರಸ್ತಾವನೆಯನ್ನು ಸದಸ್ಯರ ಗಮನಕ್ಕೆ ತಂದು ಪ್ರಸ್ತಾವನೆ ಕಳಿಸಲು ಒಪ್ಪಿಗೆ ಪಡೆದರು.

ಪಿಂಜಾರ್ ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆ ಆಗ್ರಹಿಸಿ ಧರಣಿ

ಇದೇ ಸಮಯದಲ್ಲಿ ಕನ್ನಡ ಸಾಹಿತ್ಯ ಭವನ, ಉಪ್ಪಾರ ಸಮಾಜದ ಸಮುದಾಯ ಭವನ, ಕಟ್ಟಡ ಕೋಲಿಕಾರ್ಮಿಕರ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಒಪ್ಪಿಗೆ ಪಡೆಯಲಾಯಿತು. ಮತ್ತು ರಂಗಂಪೇಟಯ ರಸ್ತೆ ಅಗಲಿಕರಣದಲ್ಲಿ ಸಂಪೂರ್ಣ್‌ವಾಗಿ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾದ ೫೬ ಕುಟುಂಬಗಳಿಗೆ ಸರ್ವೇ ೧೮೬ ರಲ್ಲಿ ನೀವೇಶನ ಒದಗಿಸಲು ಸಭೆಯಲ್ಲಿ ನಿರ್ಣಯತೆಗೆದುಕೊಳ್ಳಾಲಾಯಿತು.

ನಗರಸಭೆ ಅಧ್ಯಕ್ಷೆ ಸುಜಾತ ವೇನುಗೋಪಾಲ ಜೇವರ್ಗಿ, ಉಪಾಧ್ಯಕ್ಷ ಮಹೇಶ ಪಾಟೀಲ, ಸದಸ್ಯರಾದ ಸೋಮನಾಥ ಡೊಣ್ಣಿಗೇರಿ, ಜುಮ್ಮಣ್ಣ ಕೆಂಗುರಿ, ನರಸಿಂಹ ಪಂಚಮಗಿರಿ, ನಾಸೀರ ಕುಂಡಾಲೆ, ವಿಷ್ಣು ಗುತ್ತೆದಾರ, ಕಮುರುಲ್, ಶೃಈಫ ಅಹ್ಮದ್, ಮಾನಪ್ಪ ಚಳ್ಳಿಗಿಡ, ಮಲ್ಲೇಶಿ, ಸುವರ್ಣ ಸಿದ್ರಾಮ ಎಲಿಗಾರ ಸೇರಿದಂತೆ ಇತರ ಸದಸ್ಯರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here