ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗುತಿಗೆ ಅವ್ವ ಪ್ರಶಸ್ತಿ

0
89

ಕಲಬುರಗಿ: ಕೇಂದ್ರ ಸರಕಾರ ಕೊಡಮಾಡುವ ಈ ವರ್ಷದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತಾಯಿ ಬಿ.ಮಂಜಮ್ಮ ಜೋಗುತಿ ಅವರಿಗೆ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದ ವತಿಯಿಂದ ಈ ವರ್ಷದ ಅವ್ವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಪೂಜ್ಯ ಗೋದುತಾಯಿ ಅವ್ವ ಅವರ ೫೦ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಮಹಾವಿದ್ಯಾಲಯದಲ್ಲಿ ಮಾರ್ಚ ೬ ರಿಂದ ಮಾರ್ಚ ೧೪ ರವರೆಗೆ ಒಂದು ವಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಿ. ೬ ರಂದು ನಡೆಯುವ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥೆಯ ಚೇರಮನ್ ಮತ್ತು ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಪೂಜ್ಯ ಡಾ.ದಾಕ್ಷಾಯಿಣಿ ಎಸ್. ಅಪ್ಪಾ ಅವರು ದಿವ್ಯ ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ವೈದ್ಯ ಡಾ.ಜಯಮ್ಮ ಗಂಜಲಖೇಡ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ವಹಿಸಲಿದ್ದಾರೆ. ಕರೋನಾ ಸಂದರ್ಭದಲ್ಲಿ ಸೇವೆಗೈದ ಹನ್ನೊಂದು ಜನ ಮಹಿಳಾ ವೈದ್ಯರನ್ನು ಮತ್ತು ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್‌ನ ಕು. ಮಾಲಾ ಧನ್ನೂರ ಮತ್ತು ಕು. ಮಾಲಾ ಕಣ್ಣಿ ಅವರನ್ನು ಸನ್ಮಾನಿಸಲಾಗುವುದು.

Contact Your\'s Advertisement; 9902492681

ಪರಿಭಾವಿತ ಪ್ರದೇಶವನ್ನು ಅರಣ್ಯವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿ: ಸಚಿವ

ದಿ. ೭ ರಂದು ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ಶರಣಬಸವ ವಿಶ್ವವಿದ್ಯಾಲಯ ಕುಲಪತಿ ಡಾ.ನಿರಂಜನ್ ನಿಷ್ಠಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಆಂಧ್ರಪ್ರದೇಶದ ಕೇಂದ್ರೀಯ ಆದಿವಾಸ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ತೇಜಸ್ವಿ ಕಟ್ಟಿಮನಿ ಭಾಗವಹಿಸಲಿದ್ದಾರೆ. ಅಂದು ಎರಡು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.

ದಿ. ೯ ರಂದು ಕರೋನಾ ಸಂದರ್ಭದಲ್ಲಿ ಸೇವೆಗೈದ ಹನ್ನೊಂದು ಜನ ಮಹಿಳಾ ಪೋಲಿಸ್‌ರನ್ನು ಸನ್ಮಾನಿಸಲಾಗುವುದು. ದಿ. ೧೦ ರಂದು ಕರೋನಾ ಸಂದರ್ಭದಲ್ಲಿ ಸೇವೆಗೈದ ಹನ್ನೊಂದು ಜನ ಮಹಿಳಾ ಕಿರಿಯ ಆರೋಗ್ಯ ಸಹಾಯಕ ಅಧಿಕಾರಿಗಳನ್ನು ಸನ್ಮಾನಿಸಲಾಗುವುದು. ದಿ. ೧೨ ರಂದು ಪ್ರತಿವರ್ಷ ಕೊಡಮಾಡುವ ಅವ್ವ ಪ್ರಶಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಶರಣಬಸವೇಶ್ವರ ಸಂಸ್ಥೆಯ ಚೇರಮನ್ ಮತ್ತು ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಪೂಜ್ಯ ಡಾ.ದಾಕ್ಷಾಯಿಣಿ ಎಸ್. ಅಪ್ಪಾ ಅವರು ದಿವ್ಯ ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೀದರ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದ ಓಬಿಜಿ ವಿಭಾಗದ ಮುಖ್ಯಸ್ಥೆ ಡಾ.ಉಮಾದೇವಿ ಬಿ.ದೇಶಮುಖ, ಗೌರವ ಅತಿಥಿಗಳಾಗಿ ರೇಷ್ಮಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಡಾ.ಭಾರತಿ ಎನ್. ರೇಷ್ಮಿ ವಹಿಸಲಿದ್ದಾರೆ.

ಉಡುಗೊರೆ ಬೇಡ, ರೈತರಿಗೆ ಬೆಂಬಲ ಬೆಲೆ ಕೊಡಿ: ಯೋಗೇಂದ್ರ ಯಾದವ್

ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷೆ, ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬಿ.ಮಂಜಮ್ಮ ಜೋಗುತಿ ಅವರಿಗೆ ಈ ವರ್ಷದ ಅವ್ವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಪೂಜ್ಯ ಡಾ.ದಾಕ್ಷಾಯಿಣಿ ಎಸ್. ಅಪ್ಪಾ ಅವರನ್ನು ಸನ್ಮಾನಿಸಲಾಗುವುದು.

ದಿ. ೧೩ ರಂದು ಕರೋನಾ ಸಂದರ್ಭದಲ್ಲಿ ಸೇವೆಗೈದ ಇಪ್ಪತ್ತೈದು ಜನ ಮಹಿಳಾ ಆಶಾ ವರ್ಕರ್ಸ್ ಮತ್ತು ದಿ. ೧೪ ರಂದು ಕರೋನಾ ಸಂದರ್ಭದಲ್ಲಿ ಸೇವೆಗೈದ ಇಪ್ಪತ್ತೈದು ಜನ ಮಹಾನಗರ ಪಾಲಿಕೆಯ ಮಹಿಳಾ ಸಿಬ್ಬಂದಿಯವರನ್ನು ಸನ್ಮಾನಿಸಲಾಗುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here