ಆಳಂದ: ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳು ಗ್ರಾಹಕರನ್ನು ಹಾಗೂ ಸಿಬ್ಬಂದಿಗಳನ್ನು ಸ್ವಂತ ಕುಟುಂಬದಂತೆ ಕಾಣಬೇಕು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಶನಿವಾರ ಆಳಂದ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೆಸ್ಕಾಂ ಕಂಪನಿಯ ಅಧಿಕಾರಿಗಳ, ಸಿಬ್ಬಂದಿಗಳ ಹಾಗೂ ಗ್ರಾಹಕರ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ಶಿವರಾಮ್ ಅಸೂಂಡಿ ವರ್ಗಾವಣೆ: ಬಿಳ್ಕೊಡಿಗೆ
ಸಧ್ಯ ಬೇಸಿಗೆ ಕಾಲ ಆರಂಭವಾಗುತ್ತಿದ್ದು ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ವಿದ್ಯುತ್ ಸರಬರಾಜು ಮಾಡಬೇಕು ಅದಕ್ಕಾಗಿ ಸಿಬ್ಬಂದಿಗಳು ದಿನದ ೨೪ ಗಂಟೆಯೂ ಎಚ್ಚರಿಕೆಯಲ್ಲಿ ಇರಬೇಕು. ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರಿಗೆ ಪ್ರತಿದಿನ ಸಮರ್ಪಕವಾಗಿ ಕನಿಷ್ಟ ೭ ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಇದರಿಂದ ನಾಡಿನ ಅನ್ನದಾತರ ಸಮಸ್ಯೆ ಪರಿಹರಿಸುವಲ್ಲಿ ಗಂಭೀರವಾದ ಕ್ರಮಕೈಗೊಳ್ಳಬೇಕು ಎಂದು ಜೆಸ್ಕಾಂ ಶಾಖಾಧಿಕಾರಿಗಳಿಗೆ ಸೂಚಿಸಿದರು.
ವಿಮರ್ಶಾ ಅಕಾಡೆಮಿ ಸ್ಥಾಪಿಸಲು ಡಾ. ಶ್ರೀಶೈಲ ನಾಗರಾಳ ಒತ್ತಾಯ
ಟಿಸಿ ಸುಟ್ಟರೆ ರೈತರಿಂದ ಹಣ ಪಡೆಯದೇ ಸಾಧ್ಯವಾದಷ್ಟು ಬೇಗ ಟಿಸಿ ಅಳವಡಿಸುವ ಕಾರ್ಯ ಮಾಡಬೇಕು ವಿನಾಕಾರಣ ನೆಪ ಹೇಳದೇ ಸಮಸ್ಯೆ ಪರಿಹರಿಸುವತ್ತ ಗಮನಹರಿಸಬೇಕು ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಹಕರು, ರೈತರು ಕರೆ ಮಾಡಿದಾಗ ಶಾಖಾಧಿಕಾರಿಗಳು ಮತ್ತು ಲೈನಮೆನಗಳು ಕೂಡಲೇ ಕರೆ ಸ್ವೀಕರಿಸಿ ಅವರ ಸಮಸ್ಯೆಗೆ ಸ್ಪಂದಿಸಬೇಕು ಅಲ್ಲದೇ ಆಳಂದ ಮತ್ತು ಕಡಗಂಚಿ ಉಪವಿಭಾಗಗಳ ನಡುವೆ ಒಂದು ಸಹಾಯವಾಣಿ ಸ್ಥಾಪಿಸಿ ತಕ್ಷಣ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಕುಲಪತಿಗಳ ನೇಮಕದಂತೆ ಕ.ಕ.ಕಲ್ಯಾಣಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಆಗ್ರಹ
ಸಭೆಯಲ್ಲಿ ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ಎನ್‌ಈಕೆಆರ್‌ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ, ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರೆ, ಉಪಾಧ್ಯಕ್ಷ ವೀರಣ್ಣ ಹತ್ತರಕಿ, ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ, ಅಶೋಕ ಗುತ್ತೇದಾರ, ಶಿವಪುತ್ರಪ್ಪ ಪಾಟೀಲ ಮುನ್ನಹಳ್ಳಿ, ಇಇ ಸಂತೋಷ ಚವ್ಹಾಣ, ಆಳಂದ ಎಇಇ ಮಾಣಿಕರಾವ ಕುಲಕರ್ಣಿ, ಕಡಗಂಚಿ ಎಇಇ ಸುನೀಲಕುಮಾರ, ಆಳಂದ ಪಟ್ಟಣದ ಶಾಖಾಧಿಕಾರಿ ಸುಮೀತಕುಮಾರ, ಆಳಂದ ಗ್ರಾಮೀಣ ಶಾಖಾಧಿಕಾರಿ ಥಾಮಸ್ ಭಾವಿಕಟ್ಟಿ, ತಡಕಲ ಶಾಖಾಧಿಕಾರಿ ರಾಮರಾವ ತೋಳೆ, ಮಾದನ ಹಿಪ್ಪರ್ಗಾ ಶಾಖಾಧಿಕಾರಿ ಪರಮೇಶ್ವರ ಬಡಿಗೇರ, ನಿಂಬರ್ಗಾ ಶಾಖಾಧಿಕಾರಿ ಅಮೃತ ಅಲ್ಲಾಪುರೆ, ಖಜೂರಿ ಶಾಖಾಧಿಕಾರಿ ಜ್ಞಾನೇಶ್ವರ, ಸರಸಂಬಾ ಶಾಖಾಧಿಕಾರಿ ಮೈಸೂರ ಜಾಧವ, ರುದ್ರವಾಡಿ ಶಾಖಾಧಿಕಾರಿ ಪ್ರಭಾಕರ ಕಿರಿಯ ಪವರ್ ಮ್ಯಾನ್ ಶ್ರೀಶೈಲ ನಾಯ್ಕೋಡಿ ಸೇರಿದಂತೆ ಎಲ್ಲ ಸಿಬ್ಬಂದಿಗಳು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…