ಬಿಸಿ ಬಿಸಿ ಸುದ್ದಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಕ್ಕೆ ಮಾದರಿಯನ್ನಾಗಿಸುವ ಗುರಿ: ನಿರಗುಡಿ

ಆಳಂದ: ಕಸಾಪ ಮತದಾರರು ಅವಕಾಶ ಒದಗಿಸಿಕೊಟ್ಟರೆ ಹಿರಿಯ, ಕಿರಿಯ ಸಾಹಿತಿಗಳು ಮತ್ತು ಕನ್ನಡಾಭಿಮಾನಿಗಳನ್ನು ಒಂದುಗೂಡಿಸಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವಿನೂತನ ಕಾರ್ಯ ಚಟುವಟಿಕೆಗಳು ಜಾರಿಗೆ ತರುವ ಮೂಲಕ ರಾಜ್ಯಕ್ಕೆ ಮಾದರಿಯನ್ನಾಗಿಸುವ ಎಂದು ಕಸಾಪ ಜಿಲ್ಲಾ ಮಾಜಿ ಗೌರವ ಕಾರ್ಯದರ್ಶಿ ಲೇಖಕ ಬಿ.ಎಚ್. ನಿರಗುಡಿ ಅವರು ಹೇಳಿದರು.

ತಾಲೂಕಿನ ಖಜೂರಿ ಕೋರಣೇಶ್ವರ ಮಠಕ್ಕೆ ಕಸಾಪ ಚುನಾವಣೆ ಹಿನ್ನೆಲೆಯಲ್ಲಿ ಸ್ವತಃ ಸ್ಪರ್ಧಾ ಆಕ್ಷಾಂಕಿಯಾಗಿರುವ ನಿರುಗಡಿ ಅವರು, ಶನಿವಾರ ಭೇಟಿ ನೀಡಿದ ಬಳಿಕ ಪೀಠಾಧಿಪತಿ, ಕಸಾಪ ಆಜೀವ ಸದಸ್ಯರಾದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದು ಅವರು ಮಾತನಾಡಿದರು.

ದೇವರಗೋನಾಲ ತಾಪಂ ಕ್ಷೇತ್ರ ಸ್ಥಳಾಂತರಿಸದಂತೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಈಗಾಗಲೇ ಜಿಲ್ಲಾ ಕಸಾಪ ಹಲವು ಹುದ್ದೆಗಳಿಂದ ಸಾಹಿತ್ಯಕವಾಗಿ ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾರಿಯೂ ಕಸಾಪ ಮತದಾರರ ಒತ್ತಾಯಸೆಯ ಮೆರೆಗೆ ಚುನಾವಣೆಗೆ ಕಣಕ್ಕಿಳಿಯುತ್ತಿದ್ದೇನೆ. ಕಲಬುರಗಿ ನಗರ ಸೇರಿ ಎಲ್ಲ ತಾಲೂಕುಗಳಲ್ಲಿ ಮತದಾರರ ಒಲವು ತೋರಿಸಿದ್ದು, ಇಷ್ಟಾಗಿಯೂ ಸಹ ಹೆಚ್ಚಿನ ಮತಗಳಿಂದ ಗೆಲ್ಲಲು ಬಯಸಿದ್ದು, ಮತದಾರರ ಆಶೀರ್ವದಿಸಬೇಕು ಎಂದು ಮನವಿ ಅವರು ಮಾಡಿದರು.

ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಪಿ.ಎಂ. ಮಣ್ಣೂರ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತ್ಯ ವಾತಾವರಣಕ್ಕೆ ಮತದಾರರು ಹೊಸ ಮುಖವನ್ನು ಬಯಸಿದ್ದಾರೆ. ಹೀಗಾಗಿ ಬಿ.ಎಚ್. ನಿರಗುಡಿ ಅವರು ಸಾಹಿತಿ, ಕವಿ, ಲೇಖಕ ಉಪನ್ಯಾಸಕರಾಗಿದ್ದು, ಅಲ್ಲದೆ ಈ ಹಿಂದೆ ಕಸಾಪ ಜಿಲ್ಲಾ ಕಾರ್ಯದರ್ಶಿಯಾಗಿ, ಗೌರವ ಕಾರ್ಯದರ್ಶಿಯಾಗಿ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ನಿರಗುಡಿ ಅವರು ಸೂಕ್ತವ್ಯಕ್ತಿಯಾಗಿದ್ದಾರೆ. ಮತದಾರರು ಒಗ್ಗಟ್ಟಿನಿಂದ ಇವರಿಗೆ ಮತನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬೇಸಿಗೆ ಬರುತ್ತಿದೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಿ: ವೆಂಕಟೇಶ ಬೇಟೆಗಾರ

ಜಿಲ್ಲಾ ಕಸಾಪ ಚುನಾವಣೆ ಸಂಭ್ಯಾವ್ಯ ಅಭ್ಯರ್ಥಿ ಬಿ.ಎಚ್. ನಿರಗುಡಿ ಅವರಿಗೆ ಪೀಠಾಧಿಪತಿ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಶಾಲು ಹೊದಸಿ ಆಶೀರ್ವದಿಸಿ ಮಾತನಾಡಿದ ಅವರು, ಬಿ.ಎಚ್. ನಿರಗುಡಿ ಅವರು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವ್ಯಕ್ತಿಯಾಗಿದ್ದಾರೆ. ಕಸಾಪ ಕಾರ್ಯಚಟುವಟಿಕೆ ನಿಂತ ನೀರಾಗದೆ ಹರಿಯುವ ನದಿಯಂತೆ ಸಾಹಿತ್ಯದ ವಾತಾವರಣ ಸೃಷ್ಟಿಯಾಗಬೇಕು. ನಿರಗುಡಿಯಂತ ಸಾಹಿತ್ಯಾಸಕ್ತರು ಅಧಿಕಾರಕ್ಕೆ ಬರಬೇಕು ಎಂದರು.

ಜಿಪಂ ಮಾಜಿ ಸದಸ್ಯ ಶರಣಪ್ಪ ಚಿಂಚೋಳಿ, ಕವಿ ಚಾಮರಾಜ ದೊಡ್ಡಮನಿ ಮಾತನಾಡಿದರು. ಉಪನ್ಯಾಸಕ ರಾಜಕುಮಾರ ಹಿರೇಮಠ, ಶಾಂತಪ್ಪ ಕೋರೆ ಇತರರು ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

10 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

16 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

17 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago