ಕಲಬುರಗಿ: ಪೂಜ್ಯ ಮಾತೋಶ್ರೀ ಗೋದುತಾಯಿ ಅವ್ವಾಜೀಯವರು ಶ್ರೇಷ್ಠ ದಾಸೋಹಿ, ಕರುಣಾಮಯಿಯಾಗಿದ್ದರು ಎಂದು ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಡಾ.ವಿ.ಡಿ.ಮೈತ್ರಿ ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಗೋದುತಾಯಿ ಅವ್ವ ಅವರ ೫೦ನೆಯ ಪುಣ್ಮಸ್ಮರಣೋತ್ಸವ ನಿಮಿತ್ಯ ಒಂದು ವಾರ ಕಾಲ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಅವ್ವಾಜೀಯವರು ಬಡವರ, ನಿರ್ಗತಿಕರ ಮಾಹಾತಾಯಿಯಾಗಿದ್ದರು, ದಾಸೋಹವನ್ನೇ ಕಾಯಕವನ್ನಾಗಿಸಿಕೊಂಡು ಎಲ್ಲಾ ಜಾತಿ ಜನಾಂಗದವರನ್ನು ಒಂದೇ ಎಂದು ತಿಳಿದು ಅವರನ್ನು ಸಮಾನವಾಗಿ ಕಾಣುತ್ತಿದ್ದರು. ಶರಣಬಸವೇಶ್ವರ ಸಂಸ್ಥಾನ ದಾಸೋಹ ಮತ್ತು ಶಿಕ್ಷಣಕ್ಕೆ ನಿರಂತರವಾಗಿ ಒತ್ತು ಕೊಡುತ್ತಾ ಬಂದಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವ ವಿಶ್ವವಿದ್ಯಾಲಯ ಮತ್ತು ಶಾಲಾ ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಅದಕ್ಕೆ ಪೂಜ್ಯ ಡಾ.ಅಪ್ಪಾಜಿಯವರ ಮಾರ್ಗದರ್ಶನವೇ ಮುಖ್ಯ ಕಾರಣ ಎಂದು ಹೇಳಿದರು.
ದೇವರಗೋನಾಲ ತಾಪಂ ಕ್ಷೇತ್ರ ಸ್ಥಳಾಂತರಿಸದಂತೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ಮುಖ್ಯ ಅತಿಥಿ ಡಾ. ಜಯಮ್ಮ ಗಣಜಲಖೇಡ ಅವರು ಮಾತನಾಡಿ, ಕರೋನಾ ಸಂದರ್ಭದಲ್ಲಿ ಸೇವೆಗೈದ ವೈದ್ಯರನ್ನು ಸನ್ಮಾನಿಸಿರುವುದು ವೈದ್ಯರಿಗೆ ಸಂತೋಷವಾಗಿದೆ. ನಾವು ಮಾಡಿರುವ ಸೇವೆ ಸಾರ್ಥಕವಾಯಿತು. ಕರೋನಾ ಬಗ್ಗೆ ಭಯ ಬೇಡ, ಜಾಗೃತಿ ಇರಲಿ, ಇನ್ನೂ ಕರೋನಾ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ, ಅದಕ್ಕಾಗಿ ತಾವೆಲ್ಲರೂ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ಗೋದುತಾಯಿ ಅವ್ವಾಜೀಯವರ ಪುಣ್ಮಸ್ಮರಣೋತ್ಸವ ದಿನ ಸ್ತ್ರೀ ಸಮ್ಮಾನ ದಿನವಾಗಬೇಕೆಂದು ಕರೋನಾ ಸಂದರ್ಭದಲ್ಲಿ ಹಗಲು ರಾತ್ರಿ ಸೇವೆಗೈದ ಮಹಿಳಾ ವೈದ್ಯರು, ಮಹಿಳಾ ಪೋಲಿಸರು, ಮಹಿಳಾ ನರ್ಸ್, ಮಹಿಳಾ ಆಶಾ ಕಾರ್ಯಕರ್ತರು ಮತ್ತು ಮಹಿಳಾ ಮಹಾನಗರ ಪಾಲಿಕೆ ಸಿಬ್ಬಂದಿಯವರನ್ನು ಸನ್ಮಾನಿಸಬೇಕೆಂದು ಪೂಜ್ಯ ಡಾ.ಅಪ್ಪಾಜಿ ಮತ್ತು ಪೂಜ್ಯ ಡಾ.ದಾಕ್ಷಾಯಣಿ ಅವ್ವ ಅವರ ಸೂಚನೆಯಂತೆ ಈ ವರ್ಷ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಗ್ರಾಹಕರನ್ನು ಕುಟುಂಬದವರಂತೆ ಕಾಣಿ: ಶಾಸಕ ಗುತ್ತೇದಾರ
ಸನ್ಮಾನ ಸ್ವೀಕರಿಸಿದ ಡಾ. ರವಿಕಾಂತಿ ಅವರು ತಾವು ಕರೋನಾ ಸಂದರ್ಭದಲ್ಲಿ ಕೆಲಸ ಮಾಡಿದ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ನಾಲ್ಕು ಚಕ್ರದ ಕು.ಮಾಲಾ ಧನ್ನೂರ ಮತ್ತು ಕು. ಮಾಲಾ ಕಣ್ಣಿ ಅವರನ್ನ ಸಹ ಸನ್ಮಾನಿಸಲಾಯಿತು.
ಮಹಾವಿದ್ಯಾಲಯ ನ್ಯಾಕ್ ಮತ್ತು ಐಕ್ಯೂಎಸಿ ಸಂಯೋಜಕರಾದ ಡಾ. ಇಂದಿರಾ ಶೆಟಕಾರ ಸ್ವಾಗತಿಸಿದರು, ಅನಿತಾ ಕೆ.ಗೊಬ್ಬುರ ವಂದಿಸಿದರು. ಡಾ.ಪುಟ್ಟಮಣಿ ದೇವಿದಾಸ ನಿರೂಪಿಸಿದರು, ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಸೀಮಾ ಪಾಟೀಲ ಪ್ರಾರ್ಥಿಸಿದರು.
ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸಿದ್ದಮ್ಮ ಗುಡೇದ್, ಜಾನಕಿ ಹೊಸುರ, ಕೃಪಾಸಾಗರ ಗೊಬ್ಬುರ, ಡಾ.ಸಂಗೀತಾ ಪಾಟೀಲ, ದಾಕ್ಷಾಯಣಿ ಜಿ.ಕಾಡಾದಿ, ಗೌರಮ್ಮ, ನಿರ್ಮಲಾ ಪಾರಾ, ವಿದ್ಯಾ ರೇಷ್ಮಿ, ಅನುಸೂಯಾ ಬಡಿಗೇರ, ಶಶೀಕಲಾ ಪಾರಾ, ಪ್ರಭಾವತಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…