ಬಿಸಿ ಬಿಸಿ ಸುದ್ದಿ

ಬೀದಿ ಬದಿ ವ್ಯಾಪಾರಿಗಳಿಗೆ ಹತ್ತು ಸಾವಿರ ರೂ. ಬಡ್ಡಿ ರಹಿತ ಸಾಲ: ಡಾ.ಕೆ.ಗುರಲಿಂಗಪ್ಪ

ಶಹಾಬಾದ: ಕೋವಿಡ್-೧೯ ದೇಶಾದ್ಯಂತ ಲಾಕ್‌ಡೌನ್ ಜಾರಿಯಾದಾಗ ಬಹಳಷ್ಟು ಬೀದಿ ವ್ಯಾಪಾರಿಗಳು ಸಂಕ?ಕ್ಕೆ ಒಳಗಾದ ಮನಗಂಡು ಬೀದಿ ಬದಿ ವ್ಯಾಪಾರಿಗಳಿಗೆ ಮತ್ತೆ ವ್ಯಾಪಾರ ಪ್ರಾರಂಭಿಸಲು ಕೇಂದ್ರ ಸರಕಾರ ನೀಡುತ್ತಿರುವ ಹತ್ತು ಸಾವಿರ ರೂ. ಬಡ್ಡಿ ರಹಿತ ಸಾಲವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.

ಅವರು ಶನಿವಾರ ಮಜ್ಜಿದ್ ಸಭಾಂಗಣದಲ್ಲಿ ನಗರಸಭೆ ಹಾಗೂ ಕೆನರಾ ಬ್ಯಾಂಕ್ ವತಿಯಿಂದ ಆಯೋಜಿಸಲಾದ ಪ್ರಧಾನ ಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ಕಿರು ಸಾಲ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

6 ದಿನದ ಸರದಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಮತ್ತಿಮಡು ಭೇಟಿ

ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವುದು ದೂರದ ಮಾತು, ಮಾತನಾಡುವುದಕ್ಕೂ ಮುಂದೆ ಬರದ ಕಾಲವಿತ್ತುದರೆ ಇಂದು ನಗರಸಭೆಯಿಂದ ೪೯೪ ವ್ಯಾಪಾರಿಗಳಿಗಳನ್ನು ಸಾಲ ನೀಡಲು ಆಯ್ಕೆ ಮಾಡಲಾಗಿದೆ. ತೆಗೆದುಕೊಂಡ ಸಾಲವನನ್ನು ಡಿಜಿಟಲ್ ವಹಿವಾಟಿನಿಂದ ತುಂಬಿದರೇ ಕ್ಯಾಶ್ ಬ್ಯಾಕ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ತಮ್ಮ ಕುಟುಂಬದ ನಿರ್ವಹಣೆ ಮಾಡಬೇಕೆಂದು ಹೇಳಿದರು.

ಕಲಬುರಗಿ ಕೆನರಾ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕರಾದ ಮಂಜುನಾಥ.ಬಿ.ಸಿಂಗೈ ಮಾತನಾಡಿ, ಬೀದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಒಳ್ಳೆಯ ಅವಕಾಶಗಳು ಬಂದಿವೆ.ಅದನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಸಾಲ ಕೊಡುವುದು ಮತ್ತು ತೆಗೆದುಕೊಳ್ಳುವುದು ಮುಖ್ಯವಲ್ಲ.ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡುವುದು ಬಹಳ ಮುಖ್ಯ. ತೆಗೆದುಕೊಂಡ ಸಾಲ ಮನ್ನಾ ಮಾಡಲಾಗುತ್ತದೆ ಎಂಬ ಮನೋಭಾವನೆ ಕೆಲವರಿಗಿರುತ್ತದೆ.

ದೇವರಗೋನಾಲ ತಾಪಂ ಕ್ಷೇತ್ರ ಸ್ಥಳಾಂತರಿಸದಂತೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಆದರೆ ಯಾವುದಕ್ಕೂ ಸಾಲಮನ್ನಾವಿಲ್ಲ ಎಂಬುದು ತಿಳಿದುಕೊಳ್ಳಬೇಕು.ನೀವು ತೆಗೆದುಕೊಂಡ ಸಾಲ ಸರಿಯಾಗಿ ಮರುಪವಾತಿ ಮಾಡಿದರೇ ನಿಮ್ಮ ಸಿವಿಲ್ ಅಂಕ ಹೆಚ್ಚುತ್ತದೆ.ಅಲ್ಲದೇ ಟ್ರಾನ್‌ಜೆಕ್ಷನ್ ಮಾಡುತ್ತ ಇದ್ದರೇ ಮತ್ತೆ ನಿಮಗೆ ಸಾಲ ಹೆಚ್ಚಿಸಲಾಗುತ್ತದೆ.ಅಲ್ಲದೇ ಬ್ಯಾಂಕಿಗೆ ಬಂದಾಗ ತಾವೆಲ್ಲರೂ ತಾಳ್ಮೆಯಿಂದ ನಿರ್ವಹಿಸಿ, ಬ್ಯಾಂಕಿನರೊಂದಿಗೆ ಸಹಕರಿಸಬೇಕೆಂದು ಹೇಳಿದರು.

ಕಲಬುರಗಿ ಕೆನರಾ ಬ್ಯಾಂಕಿನ ವಿಭಾಗೀಯ ಪ್ರಬಂಧಕ ಬಿ.ವೆಂಕಟರಾಮಲು ಪ್ರಸ್ತಾವಿಕ ಮಾತನಾಡಿದರು.
ಕೌಶಲ್ಯ ಮಿಷನ್‌ನ ಜಿಲ್ಲಾ ವ್ಯವಸ್ಥಾಪಕರಾದ ರಾಜಕುಮಾರ ಗುತ್ತೆದಾರ,ನಗರದ ಕೆನರಾ ಬ್ಯಾಂಕಿನ್ ವ್ಯವಸ್ಥಾಪಕರಾದ ವೆಂಕಣ್ಣ ಬಂಡಿ, ಸೀನು ನಾಯಕ, ಸಮುದಾಯ ಸಂಘಟಕ ಅಧಿಕಾರಿ ರಘನಾಥ ನರಸಾಳೆ,ಶಂಕರ ವಾಗ್ಮೋರೆ,ಶಾಂತಪ್ಪ ಹಡಪದ ಸೇರಿದಂತೆ ಬೀದಿ ವ್ಯಾಪಾರಿಗಳು ಇದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

4 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

11 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

11 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

12 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

22 hours ago