ಕಲಬುರಗಿ: ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಕೋರ್ ಕಮಿಟಿಯ ಸಭೆ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ಅಧ್ಯಕ್ಷತೆಯಲ್ಲಿ ಇಂದು ಸಭೆ ಜರುಗಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಮಿತಿ ಸರ್ವ ಪಕ್ಷಗಳ ಸಭೆ ನಡೆಸಿ ಈಗಾಗಲೇ ಆಡಳಿತ ಪಕ್ಷ ಬಿ.ಜೆ.ಪಿ.ಯ ಜಿಲ್ಲಾ ಘಟಕಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶದ ಆರು ಜಿಲ್ಲೆಯ ಸರ್ವ ಪಕ್ಷಗಳ ಜನಪತಿನಿಧಿಗಳ ಮತ್ತು ಪಕ್ಷದ ಮುಖಂಡರ ನಿಯೋಗ ಮುಖ್ಯಮಂತ್ರಿಗಳಿಗೆ ಭೇಟಿಯಾಗುವುದರ ಬಗ್ಗೆ ಬಿ.ಜೆ.ಪಿ. ಮುಖಂಡರಿಗೆ ಮತ್ತೊಮ್ಮೆ ಒತ್ತಾಯಿಸಲು ನಿರ್ಧರಿಸಲಾಯಿತು.
ಸುರಪುರ:ಹೊಟ್ಟೆ ನೋವು ತಾಳದೆ ಯುವತಿ ಆತ್ಮಹತ್ಯೆ
ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿ, ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಹೆಸರು ನಾಮಕರಣ ಮಾಡಬೇಕೆಂದು ಸಮಿತಿಯ ವತಿಯಿಂದ ನಿರಂತರ ಒತ್ತಾಯ ಮತ್ತು ಹೋರಾಟ ನಡೆಸಿತ್ತು. ಇದಕ್ಕೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಿ ಹೆಸರು ನಾಮಕರಣ ಮಾಡಿರುವಂತೆ ಇನ್ನು ಮುಂದೆ ಸಮಿತಿಯ ಹೆಸರೂ ಸಹ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಎಂಬ ಹೆಸರಿನಿಂದ ಅಧಿಕೃತವಾಗಿ ಹೋರಾಟಗಳು ಕಾರ್ಯಕ್ರಮಗಳು ನಡೆಸಲು ತೀರ್ಮಾನಿಸಲಾಯಿತು.
ಸಮಿತಿಯ ಮಹಾಪ್ರಧಾನ ಕಾರ್ಯದರ್ಶಿಗಳಾದ ಮನೀಷ ಜಾಜು ಅವರು ಈ ಹಿಂದೆ ಹೈದ್ರಾಬಾದ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗುವಲ್ಲಿ ಸಮಿತಿ ಬೆಂಬಲಿಸಿತ್ತು. ಪ್ರಸ್ತುತ ಸಂಸ್ಥೆಯ ಚುನಾವಣೆಗೂ ಸಹ ಅವರನ್ನು ಸ್ಪರ್ಧಿಸಲು ಸಭೆ ಸಮೃತಿ ನೀಡಿ ಸಮಿತಿಯಲ್ಲಿರುವ ವಾಣಿಜ್ಯ ಸಂಸ್ಥೆಯ ನೂರಾರು ಸದಸ್ಯರ ಅನುಮೋದನೆಯ ಮೇರೆಗೆ ಸಮಿತಿಯ ಅಧ್ಯಕ್ಷರು ಮನೀಷ ಜಾಜು ಅವರನ್ನು ಎಚ್.ಕೆ.ಸಿ.ಸಿ.ಐ. ಸಂಸ್ಥೆಯ ಆಡಳಿತ ಮಂಡಳಿಯ ಸ್ಥಾನಕ್ಕೆ ಸರ್ಧಿಸಲು ಹಾಗೂ ಅವರ ಆಯ್ಕೆಯ ಪೆನಲ್‌ನಲ್ಲಿ ಸೇರಲು ಅಧಿಕಾರ ನೀಡಿ ಜಾಜು ಅವರ ಗೆಲುವಿಗೆ ಸಮಿತಿಯ ಎಲ್ಲ ಸದಸ್ಯರು ಬೆಂಬಲಿಸಬೇಕೆಂದು ಹಾಗೂ ಎಚ್.ಕೆ.ಸಿ.ಸಿ.ಐ. ಸದಸ್ಯರು ಜಾಜು ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಲು ಸಂಸ್ಥೆಯ ಸದಸ್ಯರಿಗೆ ಮನವರಿಕೆಯ ನಿರ್ಣಯ ಮಾಡಿತು.
ಶಿಕ್ಷಕರಿಗೆ ಕಚೇರಿಗೆ ಅಲಿಯುವುದನ್ನು ತಪ್ಪಿಸಲು ಶಿಕ್ಷಕ ಮಿತ್ರ ಮೋಬೈಲ ಆ್ಯಪ್ ಬಿಡುಗಡೆ
ಈ ಸ೦ದರ್ಭದಲ್ಲಿ ಸಮಿತಿಯ ಮುಖಂಡರಾದ, ಮನೀಷ್ ಜಾಜು, ಲಿ೦ಗರಾಜ ಸಿರಗಾಪೂರ, ಮಹ್ಮದ ಮಿರಾಜೊದ್ದೀನ್, ಶಿವಲಿಂಗಪ್ಪ ಬ೦ಡಕ, ಜ್ಞಾನ ಮಿತ್ರ ಸ್ಕಾಮ್ಯುವೆಲ್, ಗುರುರಾಜ ಭ೦ಡರಿ, ಎಚ್.ಎಂ. ಹಾಜಿ, ಶಾಂತಪ್ಪ ಕಾರಭಾಸಗಿ, ಅಸ್ಲಂ ಚೌಂಗೆ, ಅಬ್ದುಲ ರಹೀಂ, ಭದ್ರಶೆಟ್ಟಿ, ಗುರುಲಿಂಗಪ್ಪ ಟೆ೦ಗಳಿ, ಅಶೋಕ ಧಂಗಾಪುರೆ, ಲಿಂಗಣ್ಣ ಉದನೂರ, ಶಿವಾನಂದ ಬಿರಾದಾರ, ವೀರೇಶ ಪುರಾಣಿಕ, ಬಸವರಾಜ ಚಿಟಗುಪ್ಪಿ ಮಖ್ಬೂಲ ಪಟೀಲ್ ಸೇರಿದಂತೆ ಮುಂತಾದವರು ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ಸಮಿತಿಯ ಎಲ್ಲಾ ಕೋರ ಕಥ್ಕುಟಿಯ ಸದಸ್ಯರು ಹಾಜರಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…