ಶಹಾಬಾದ: ಸರಕಾರದ ನಿರ್ದೇಶನದಂತೆ ಕೋವಿಡ-19 2ನೇ ಅಲೆಯು ತುಂಬಾ ಅಪಯಕಾರಿ ಮಟ್ಟದಲ್ಲಿ ಹರಡುತ್ತಿರವುದರಿಂದ ಹೋಳಿ ಹಬ್ಬ, ಮುಂಬರುವ ಶಬ್ ಎ ಬರಾಆತ್ ಹಾಗೂ ಗುಡ್ ಪ್ರಾಯಿಡೆಯನ್ನು ಬಹಿರಂಗವಾಗಿ ಆಚರಣೆ ಮಾಡುವುದಕ್ಕೆ ತಾಲೂಡಳಿತದಿಂದ ನಿರ್ಬಂಧಿಸಲಾಗಿದೆ ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.
ಅವರು ಶನಿವಾರ ಹೋಳಿ ಹಬ್ಬದ ಶಾಂತಿ ನಿಮಿತ್ತ ನಗರದ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ರಾಜ್ಯದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದೆ. ಮುಂಜಾಗೃತ ಕ್ರಮವಾಗಿ ಕೊರೊನಾ ಹರಡದಂತೆ ಈ ಎಲ್ಲಾ ಹಬ್ಬಗಳನ್ನು ಬಹಿರಂಗವಾಗಿ ಆಚರಿಸದೇ, ತಮ್ಮ ಮನೆಯಲ್ಲೇ ಆಚರಿಸಬೇಕು.ಅಲ್ಲದೇ ಬಂಡಿ ಕಟ್ಟುವುದು, ಬಣ್ಣ ಆಟವಾಡುವುದು, ಮಡಿಕೆ ಒಡೆಯುವುದು ಈ ಬಾರಿ ಸಂಪೂರ್ಣವಾಗಿ ಕಡಿವಾಣ ಹಾಕಲಾಗಿದೆ.ಅದಕ್ಕೆ ಸಾರ್ವಜನಿಕರು ಅಹಕಾರ ನೀಡಬೇಕು.ಒಂದು ವೇಳೆ ನಿಯಮಕ್ಕೆ ವಿರುದ್ಧವಾಗಿ ನಡೆದರೇ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಡಿವಾಯ್‍ಎಸ್‍ಪಿ ಉಮೇಶ ಚಿಕ್ಕಮಠ ಮಾತನಾಡಿ,ಸರಕಾರದ ನಿರ್ದೇಶನದಂತೆ ಕೋವಿಡ-19 ಎರಡನೇ ಅಲೆ ಹರಡುತ್ತಿರವುದರಿಂದ ಚಾಚುತಪ್ಪದೆ ಸರಕಾರದ ನಿಯಮಗಳು ಪಾಲಿಸುವುದರ ಜೊತೆಗೆ ತುಂಬಾ ಜಾಗ್ರತೆಯಿಂದ ಇರಬೇಕು. ಕಡ್ಡಾಯವಾಗಿ ಮಾಸ್ಕಧರಿಸಬೇಕು, ಸ್ಯಾನಿಟೈಜರ ಉಪಯೋಗಿಸಬೇಕು, ಸಾಮಾಜಿ ಅಂತರ ಕಾಯ್ದುಕೋಳ್ಳಬೇಕು. ಹಾಗೂ ತಮ್ಮೆಲ್ಲರ ಸಹಾಯ ಸಹಕಾರ ನಮಗೆ ಅತ್ಯವಶ್ಯಕತೆ ಇದೆ ಎಂದರು. ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ತಾಲೂಕಾಡಳಿತ ಏನು ಆದೇಶ ಹೋರಡುಸುತ್ತಿದೆಯೋ ಅದಕ್ಕೆ ತಾವೆಲ್ಲರೂ ಬದ್ದರಾಗಬೇಕು ಎಂದು ಹೇಳಿದರು.ಚಿತ್ತಾಪೂರ ಪಿಐ ಕಲ್ಲದೇವರು, ಪಿಎಸ್‍ಐ ತಿರುಪತಿ, ಯಲ್ಲಮ್ಮ ವೇದಿಕೆಯ ಮೇಲಿದ್ದರು.
ಲೋಹಿತ್ ಕಟ್ಟಿ, ಗಿರೀಶ ಕಂಬಾನೂರ, ಡಾ.ರಶೀದ್, ಕುಮಾರ ಚವ್ಹಾಣ, ಅರುಣ ಪಟ್ಟಣಕರ್, ಚಂದ್ರಕಾಂತ ಗೊಬ್ಬೂರಕರ್,ಶರಣು ಪಗಲಾಪೂರ,ಸುಭಾಷ ಜಾಪೂರ, ರವಿ ರಾಠೋಡ,ದೇವೆಂದ್ರಪ್ಪ ಯಲಗೋಡಕರ್,ಹಾಷಮ್ ಖಾನ, ಮ.ಮಸ್ತಾನ್,ನಿಂಗಣ್ಣ ಹುಳಗೋಳಕರ್, ನಾಗರಾಜ ಮೇಲಗಿರಿ,ಸೂರ್ಯಕಾಂತ ಕೋಬಾಳ, ಶಂಕರ ಕುಂಬಾರ, ಇಮ್ರಾನ್ ಸೇರಿದಂತೆ ಅನೇಕರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…