ಕಲಬುರಗಿ: ಭಗತ್ ಯುವ ಬಳಗ ಹಾಗೂ ನವಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಆಚರಿಸಲಾಯಿತು. ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು.
ದೇವಾನಂದ್ ಎಸ್ ಪಿ ಅವರಿಂದ ಪ್ರಾರ್ಥನಾ ಗೀತೆ , ಗಂಗಮ್ಮ ವಾಲಿಕಾರ್ ಅವರಿಂದ ಸ್ವಾಗತ ಗೀತೆ , ಭಾಗ್ಯಶ್ರೀ ಮಾಲಿಪಾಟೀಲ ಅವರಿಂದ ಸ್ವಾಗತ ಭಾಷಣ.
ಸೈಬಣ್ಣಾ (ಉಪ್ಪಿ) ರಂಗಭೂಮಿ ಕಲಾವಿದರು ಕಲಬುರಗಿ ಉದ್ಘಾಟಿಸಿದರೆ , ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಲಾವಿದರಾದ ಭೈರವ ಎಂ ಪೂಜಾರಿ ವೇದಿಕೆ ಅಲಂಕರಿಸಿ
ರಂಗಭೂಮಿ ದಿನದ ರಂಗ ಸಂದೇಶ ವಾಚನ ಮಾಡಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಪ್ರವೀಣ ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು.
ರಂಗಸಂದೇಶದ ನೆನಪಿನ ಕಾಣಿಕೆ ಕೊಡುವುದರ ಮೂಲಕ ಗಣ್ಯರನ್ನು ಗೌರವಿಸಲಾಯಿತು. ಅಂಬರೀಶ್ ಮರಾಠಾ ನಿರೂಪಿಸಿದರು , ಸಾಗರ್ ಘಾಳೆ ವಂದನಾಪರ್ಣೆ ಮಾಡಿದರು.
ನಂತರ ಭಗತ್ ಯುವ ಬಳಗ ಪ್ರಸ್ತುತಿಯಲ್ಲಿ ನಾಟಕ “ಛಲವಂತ ಮಕ್ಕಳು” ಪ್ರದರ್ಶನವಾಯಿತು. ತದನಂತರ ನವಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಪ್ರಸ್ತುತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಕಳೆ ಹೆಚ್ಚಿಸಿದವು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…