ಕೊಪ್ಪಳ: ಇದು ಭತದ ನಾಡು ಗಂಗಾವತಿ, ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರೆದ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆಗೆ ಗಂಗಾವತಿಗೆ ಅಗಮಿಸಿದ ಪ್ರಧಾನಿ ಮೋದಿ ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಸರಕಾರದ್ದು ಒಂದೇ ಮಿಷನ್ ಅದು ಕಮಿಷನ್ ಎಂದು ಸಮ್ಮಿಶ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಲೋಕಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ ಕರ್ನಾಟಕದ ನೀರನ ಸಮಸ್ಯೆ ನಿವಾರಿಸವ ಭರವಸೆ ನೀಡಿದ ಪ್ರಧಾನಿ, ಟಿಪ್ಪು ಜಯಂತಿ ಆಚರಣೆಗೆ ಸರಕಾರಕ್ಕೆ ದುಡ್ಡಿದೆ, ಹಂಪಿ ಉತ್ಸವಕ್ಕೆ ಸರಕಾರದ ಹತ್ತಿರ ದುಡ್ಡಿಲ್ಲ ಎಂದು ಹೇಳುತಾರೆ. ಎಚ್.ಡಿ.ಕೆ ವಿರುದ್ಧ ವಾಗ್ದಾಳಿ ಮಾಡುವ ಮೂಲಕ ಮಾತನಾಡಿದ ಪ್ರಧಾನಿ, 2014ರಲ್ಲಿ ಮೋದಿ ಗೆದ್ದರೆ ದೇಶ ತೊರೆಯುವುದಾಗಿ ದೇವೆಗೌಡರು ಹೇಳಿದ್ದರು. ಈಗ ಸಚಿವ ರೇವಣ್ಣ ಮೋದಿ ಗೆದ್ದರೆ ರಾಜಕೀಯ ಸನ್ಯಾಸ ತಗೊತ್ತಿನಿ ಎಂದು ಹೇಳುತ್ತಾರೆ. ಅಪ್ಪ ಮಕ್ಕಳು ಬರೆ ಸುಳ್ಳು ಹೇಳುತಾ ತೀರುಗುತ್ತಾರೆ ಎಂದು ಟೀಕಿಸಿದ್ದರು.
ದೇವೆಗೌಡರ ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ. ಚಿನ್ನದ ಚಮಚ ಕೈಯಲ್ಲಿ ಹಿಡಿದು ಹುಟ್ಟಿದವರು ಬಡವರ ಮತ್ತು ಸೈನಿಕರ ಬಗ್ಗೆ ಸಿಎಂ ಕುಮಾರಸ್ವಾಮಿ ಹಗುರುವಾಗಿ ಮಾತನಾಡುತಾರೆ, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನೆ ಮಾಡತಾರೆ, ಸೈನಿಕರಿಗೆ ಕುಮಾರಸ್ವಾಮಿ ಒಂದು ಬುಲೆಟ್ ಪೂರ್ಫ್ ಜಾಕೆಟೆ ನೀಡಲ್ಲ. ಇಂತವರಿಗೆ ಪಾಠ ಕಲಿಸಬೇಕು ಅದಕ್ಕಾಗಿ ನೀಮ್ಮ ಮತ ಮೋದಿ ಖಾತೆಗೆ ಜಮೆ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಈ ಸಂರ್ಭದಲ್ಲಿ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶ್ರೀರಾಮುಲು, ಮುರಳಿಮನೋಹರ ಜೋಶಿ, ಸೇರಿದಂತೆ ಪಕ್ಷದ ಮುಖಂಡರು ಹಾಗೂ ಚುನಾವಣಾ ಅಭ್ಯರ್ಥಿಗಳು ಉಪಸ್ಥಿತರಿದ್ದರು.