ಬಿಸಿ ಬಿಸಿ ಸುದ್ದಿ

ಕೋವಿಡ್ ಸ್ಥಿತಿಗತಿಯನ್ನು ನಿಭಾಯಿಸಲು ಐಎಎಸ್ ಶ್ರೇಣಿಯ ಅಧಿಕಾರಿ ನೇಮಕಕ್ಕೆ ಪ್ರಿಯಾಂಕ್ ಖರ್ಗೆ ಒತ್ತಾಯ

ಕಲಬುರಗಿ: ಜಿಲ್ಲೆ ಕೊರೋನದಿಂದ ಜರ್ಜರಿತವಾಗಿದೆ.‌ ದಿನಕ್ಕೆ ನೂರಾರು ಹೊಸಪ್ರಕರಣಗಳು ಬೆಳಕಿಗೆ ಬಂದರೆ ಹಲವಾರು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಜೊತೆಗೆ ಆಕ್ಷಿಜನ್ ಕೊರತೆಯಿಂದಾಗಿ ಹೊಸ ರೋಗಿಗಳಿಗೆ ಆಸ್ಪತ್ರೆಗಳ ಬೆಡ್ ಸಿಗದೆ ಪರಿಸ್ಥಿತಿ ಕೈಮೀರುವ ಹಂತ ತಲುಪುವ ಸಾಧ್ಯತೆ ದಟ್ಟವಾಗಿವೆ. ಹಾಗಾಗಿ‌ ಜಿಲ್ಲೆಯಲ್ಲ್ಲಿನ ಕೋವಿಡ್ ಸ್ಥಿತಿಗತಿಯನ್ನು ನಿಭಾಯಿಸಲು ಐಎಎಸ್ ಶ್ರೇಣಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸುವಂತೆ ಮಾಜಿ‌ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ‌ ಕುರಿತು ಆರೋಗ್ಯ ಸಚಿವ ಸುಧಾಕರ್ ಅವರರಿಗೆ ಸುದೀರ್ಘ ಪತ್ರ ಬರೆದಿರುವ ಅವರು ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ. ಕಳೆದ ವರ್ಷ ಕರೋನ ರೋಗ ತನ್ನ ಕದಂಬ ಬಾಹು ಚಾಚಿದ ಪರಿಣಾಮ‌ ರಾಜ್ಯದಲ್ಲಿಯೇ ಅಷ್ಟೇಕೆ ದೇಶದಲ್ಲಿಯೇ ಕಲಬುರಗಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಕೋವಿಡ್ ನಿಂದಾದ ಸಾವು ಸಂಭವಿಸಿತ್ತು. ಆ ನಂತರವೂ ಕೂಡಾ ಕೊರೋನಾ ಸೋಂಕು ಜಿಲ್ಲೆಯ ಜನರನ್ನು ಸಾಕಷ್ಟು ಬಾಧಿಸಿತು ಪರಿಣಾಮವಾಗಿ ನೂರಾರು ಸಾವುಗಳಾದವು. ಇದರಿಂದಾಗಿ ಜನಸಮಾನ್ಯರಿಗಂತೂ  ಸಾಕಷ್ಟು ಆರ್ಥಿಕ, ಮಾನಸಿಕ ಹಾಗೂ ಶಾರೀರಿಕವಾಗಿ ದುರ್ಬಲಗೊಳ್ಳುವಂತಾಗಿತ್ತು.

ಹೋದ ವರ್ಷದ ದುಸ್ವಃಪ್ನ ಮರೆಯುವ ಮುನ್ನವೇ ಕೊರೋನಾ ಸೋಂಕು ಮತ್ತೊಮ್ಮೆ ತನ್ನ ಉಗ್ರ ನರ್ತನ ಪ್ರಾರಂಭಿಸಿಬಿಟ್ಟಿದೆ. ಹಾಗಾಗಿ ಕಲಬುರಗಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಾವು ನೋವು ಉಂಟಾಗಿವೆ. ರಾಜ್ಯ ಸರ್ಕಾರ ಇಂತಹ‌ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಕಟ್ಟುನಿಟ್ಟಿನ‌ ಕ್ರಮ ಕೈಗೊಂಡು ಸೋಂಕು ಹಬ್ಬದಂತೆ ತಡೆಯಬೇಕು ಜೊತೆಗೆ ಸೋಂಕಿತರಿಗೆ ಅಗತ್ಯ ಹಾಗೂ ತುರ್ತು ಚಿಕಿತ್ಸೆ ನೀಡುವ ಕ್ರಮ ಜರುಗಿದ ಬೇಕಿತ್ತು. ಆದರೆ, ಸರ್ಕಾರದ ಯಾವುದೇ ಕ್ರಮಗಳು ಆಶಾದಾಯಕವಾಗಿಲ್ಲ ಎಂದು ಹೇಳಬೇಕಾಗಿರುವುದು ಅನಿವಾರ್ಯವಾಗಿದೆ.

ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಗಳಾದ ಜಿಮ್ಸ್ ನಲ್ಲಿ ಸೋಂಕಿತರಿಗಾಗಿ 175 ಬೆಡ್ ಗಳನ್ನು ಹಾಗೂ ಇಎಸ್ ಐಸಿ ನಲ್ಲಿ 150 ಬೆಡ್ ಗಳನ್ನು ಜೊತೆಗೆ 16 ಖಾಸಗಿ ಆಸ್ಪತ್ರೆಗಳ ಬೆಡ್ ಗಳು ಸೇರಿದರೆ ಒಟ್ಟು 914  ಬೆಡ್ ಗಳು ಲಭ್ಯವಿದೆ  ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳುತ್ತಿವೆಯಾದರೂ ಕೂಡಾ ಪ್ರಸ್ತುತ ಸನ್ನಿವೇಶದಲ್ಲಿ ದಾಖಲಾಗುತ್ತಿರುವ ಹೊಸ ಸೋಂಕಿತರಿಗೆ ಅಷ್ಟೊಂದು ಬೆಡ್ ಗಳು ಸಾಕಾಗುವುದಿಲ್ಲ.ಈ‌ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ‌‌ ಐಸಿಯೂ ಗೆ ಅನುಕೂಲವಾಗುವಂತ ಹಾಗೂ ಸಾಮಾನ್ಯ ರೀತಿಯ ಇನ್ನೂ ಹೆಚ್ಚುವರಿ ಬೆಡ್ ಗಳನ್ನು ಒದಗಿಸಬೇಕಾದ್ದು ಅತ್ಯಂತ ತುರ್ತಾಗಿ ಆಗಬೇಕಾಗಿದೆ. ನಿಯಮಗಳ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿನ ಒಟ್ಟು ಬೆಡ್ ಗಳಲ್ಲಿ‌ ಶೇ 20 ರಷ್ಟು ಬೆಡ್ ನ್ನು ಸರ್ಕಾರಿ ಆಸ್ಪತ್ರೆಯಿಂದ ಕಳಿಸಲಾದ ಸೋಂಕಿತರಿಗಾಗಿ‌ ಮೀಸಲಿಡಬೇಕು. ಆದರೆ, ಖಾಸಗಿ ಆಸ್ಪತ್ರೆಗಳು ಈ ನಿಯಮ ಪಾಲನೆ ಮಾಡುತ್ತಿವೆಯಾ ? ಎನ್ನುವುದರ ಬಗ್ಗೆ ಮಾಹಿತಿಯನ್ನು ಕಾಲಕಾಲಕ್ಕೆ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಒದಿಗಿಸಬೇಕೆಂದು ಆಗ್ರಹಿಸುತ್ತಿದ್ದೇನೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,54,743 ಜನರಿಗೆ ಲಸಿಕೆ ಹಾಕಲಾಗಿದೆ. ಲಸಿಕೆ ಉತ್ಸವದ ವಿಶೇಷ ಕಾರ್ಯಕ್ರಮದ ಹೊರತಾಗಿಯೂ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ಹಾಕಿಲ್ಲ. ಜಿಲ್ಲೆಯಲ್ಲಿ ಈಗಾಗಲೇ  ಸಾವಿರಾರು ಸಂಖ್ಯೆಯಲ್ಲಿ‌ ಹೊಸ ಕೇಸುಗಳು ದಾಖಲಾಗುತ್ತಿದ್ದರೂ ಕೂಡಾ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿರುವುದು ಸೋಜಿಗವಾಗಿದೆ. ಕೋವಿಡ್ ವಿಚಾರದಲ್ಲಿ ಸರ್ಕಾರಿ ಅಧಿಕಾರಿಗಳು ಕೊಡುವ ಲೆಕ್ಕದ ಕುರಿತು ಸಾರ್ವಜನಿಕ ವಲಯದಲ್ಲಿ ಶಂಕೆ ವ್ಯಕ್ತವಾಗಿದ್ದು. ವಸ್ತುಸ್ಥಿತಿಯ ಬಗ್ಗೆ ಪರಿಶೀಲನೆಯನ್ನು ಖುದ್ದಾಗಿ ಜಿಲ್ಲಾಧಿಕಾರಿ ನಡೆಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.

ಮೇಲೆ ಹೇಳಿರುವಂತೆ ಜಿಲ್ಲೆಯಲ್ಲಿ 16 ಖಾಸಗಿ‌ ಆಸ್ಪತ್ರೆಗಳು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿವೆ. ಆದರೆ, ಅಗತ್ಯ ಪ್ರಮಾಣದಲ್ಲಿ ಬೇಕಾಗುವ ಆಕ್ಸಿಜನ್ ಹಾಗೂ ರೆಮೆಡಿಸಿಯರ್ ಇಂಜೆಕ್ಷನ್ ಲಭ್ಯವಿಲ್ಲ. ಪರಿಣಾಮವಾಗಿ ಸೋಂಕಿತರ ಸಂಬಂಧಿಕರು ದುಪ್ಪಟ್ಟು ಬೆಲೆ ತೆತ್ತು ದೂರದ ಹೈದರಾಬಾದ್ ಅಥವಾ ಸೋಲಾಪುರ ನಗರದಿಂದ ತರಿಸಿ‌ ಚಿಕಿತ್ಸೆ ಕೊಡಿಸುತ್ತಿದ್ದಾರೆ.‌ ಇದು ರೋಗಿಗಳಿಗೆ ಹಾಗೂ ಮನೆಯವರಿಗೆ ಆರ್ಥಿಕವಾಗಿ ಮತ್ತಷ್ಟು ಜರ್ಜರಿತರನ್ನಾಗಿ ಮಾಡಿದೆ.

ಕೋವಿಡ್ ಇಷ್ಟೊಂದು ಗಂಭೀರ ಪರಿಣಾಮ ಬೀರುತ್ತಿದ್ದರು ಸರ್ಕಾರಿ ಹಾಗೂ ಖಾಸಗಿ‌ ಆಸ್ಪತ್ರೆಗಳಲ್ಲಿ  ಅಗತ್ಯ ಆಕ್ಷಿಜನ್ ಹಾಗೂ ಇಂಜೆಕ್ಷನ್ ಸೇರಿದಂತೆ ಇತರೆ ವೈದ್ಯಕೀಯ ಸೌಲಭ್ಯಗಳನ್ನು ತಕ್ಷಣವೇ ದೊರಕಿಸಿಕೊಡುವಲ್ಲಿ ಐಎ ಎಸ್ ದರ್ಜೆಯ ಅಧಿಕಾರಿಯೊಬ್ಬರ ಅವಶ್ಯಕತೆ ಇದೆ. ಹಾಗಾಗಿ ನೋಡಲ್ ಅಧಿಕಾರಿಯನ್ನು ನೇಮಿಸಿ ಜಿಲ್ಲೆಯ ಇತರೆ ಪ್ರಮುಖ ಜವಾಬ್ದಾರಿಗಳ ಜೊತೆ ಕೋವಿಡ್ ನಂತ ಸಾಂಕ್ರಾಮಿಕ‌ ರೋಗ ನಿಯಂತ್ರಣಕ್ಕಾಗಿ‌ ಸಮಯ ಮೀಸಲಿಟ್ಟು ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿಗೆ ಸಹಜವಾಗಿ ಕೆಲಸದ ಒತ್ತಡವಾಗುತ್ತಿದೆ. ಹಾಗಾಗಿ, ಕೆಲಸದ ಒತ್ತಡ ಕಡಿಮೆ ಮಾಡಲು‌ ನೋಡಲ್ ಅಧಿಕಾರಿಯ ನೇಮಕ ಮಾಡುವುದು ಅತ್ಯವಶ್ಯವಾಗಿದೆ.

ನೋಡಲ್ ಅಧಿಕಾರಿ ದಿನದ 24 ಗಂಟೆ ಕಾರ್ಯನಿರ್ವಹಿಸಿ ಕೋವಿಡ್ ಕ್ಯಾಜುವಾಲಿಟಿ ರೀತಿ ಕೆಲಸ ಮಾಡುವ ಮೂಲಕ ಜಿಲ್ಲೆಯ ಯಾವ ಆಸ್ಪತ್ರೆಗಳಲ್ಲಿ ಬೆಡ್ ಲಭ್ಯವಿದೆ. ಆಕ್ಷಿಜನ್ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಬೇಕು.

ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಹಣದಾಸೆಗೆ ರೋಗಿಗಳನ್ನು ಕಳಿಸಿಕೊಡುತ್ತಿರುವ ಆರೋಪಗಳಿವೆ. ಆ‌ ಕುರಿತು‌ ಕಟ್ಟುನಿಟ್ಟಿನ‌ ಕ್ರಮ ಕೈಗೊಳ್ಳಬೇಕು. ಜೊತೆಗೆ ಮಹಾರಾಷ್ಟ್ರದಲ್ಲಿ ಈಗಾಗಲೇ ಲಾಕ್ ಡೌನ್ ಘೋಷಣೆ ಯಾಗಿದ್ದು ಅಲ್ಲಿಂದ ಜನರು ತಂಡೋಪತಂಡವಾಗಿ ಜಿಲ್ಲೆಯ ಗಡಿಯೊಳಗೆ ನುಸುಳಿಕೊಂಡು ಬರುತ್ತಿದ್ದಾರೆ. ಆದರೆ ಚೆಕ್ ಪೋಸ್ಟ್ ನಲ್ಲಿ ಹಾಗೂ ರೇಲ್ವೇ ನಿಲ್ದಾಣದಲ್ಲಿ ಕಾಟಾಚಾರದ ಚೆಕ್ ( ಸ್ಕ್ರೀನ್ ಟೆಸ್ಟಿಂಗ್) ಮಾಡಿ ಹಾಗೆ  ಬಿಟ್ಟುಕಳಿಸುತ್ತಿದ್ದಾರೆ. ಇಂತಹ ನಿಷ್ಕ್ರೀಯ‌ ಕ್ರಮದಿಂದಾಗಿ ಜಿಲ್ಲೆಯಲ್ಲಿ ಮತ್ತಷ್ಟು‌ ಕೊರೋನಾ ಸೋಂಕಿತರು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ‌ಗಡಿ ಭಾಗದಿಂದ ಅಕ್ರಮವಾಗಿ ಪ್ರವೇಶ ಮಾಡುವವರ ವಿರುದ್ದ‌  ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸುತ್ತೇನೆ.

ಕಳೆದ ವರ್ಷ ಸ್ಥಾಪಿಸಲಾಗಿದ್ದ ತಜ್ಞರ ಸಮಿತಿ, ಕಾಲ್ ಸೆಂಟರ್ ಹಾಗೂ ಫಿವರ್ ಕ್ಲಿನಿಕ್ ಇನ್ನೂ ಅಸ್ಥಿತ್ವದಲ್ಲಿದ್ದು ಕಾರ್ಯನಿರ್ವಾಹಿಸುತ್ತಿವೆಯಾ ಅಥವಾ ಇಲ್ಲವಾ ಎನ್ನುವ ಮಾಹಿತಿ ಲಭ್ಯವಿಲ್ಲ. ಈ ಕುರಿತು ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು. ಕೊರೋನಾ ಸೋಂಕು ಇಂದು ಪ್ರಪಂಚದಾದ್ಯಂತ ಸಾಕಷ್ಟು ಪ್ರಮಾಣದಲ್ಲಿ‌ ಜೀವಹಾನಿ ಮಾಡಿ ವೈದ್ಯ‌ಲೋಕದ ಜೊತೆಗೆ ಮಾನವ ಕುಲಕ್ಕೆ ಸವಾಲಾಗಿ‌ ಪರಿಣಮಿಸಿದೆ. ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರು ಹಾಗೂ ಜನಸಾಮಾನ್ಯರು ಒಗ್ಗಟ್ಟಾಗಿ ವೈಜ್ಞಾನಿಕ ಕ್ರಮಗಳ ಮೂಲಕ ಈ ಸೋಂಕನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ನಿಟ್ಟಿನಲ್ಲಿ ನಾನು ನನ್ನ ಸಂಪೂರ್ಣ ಸಹಕಾರ ನೀಡುವ ದೃಷ್ಟಿಯಲ್ಲಿ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಸರ್ಕಾರ ಈ ಕುರಿತು ತಕ್ಷಣ ಕಾರ್ಯಪ್ರವೃತ್ತವಾಗಿ ಕಲಬುರಗಿ ಜಿಲ್ಲೆಯ ಜನರಿಗೆ ಮಾನಸಿಕ ಧೈರ್ಯ‌ತುಂಬುವುದರ ಜೊತೆಗೆ ಅಗತ್ಯ ಹಾಗೂ‌ ಪರಿಣಾಮಕಾರಿ ಆರೋಗ್ಯ ಸೌಲಭ್ಯ ಒದಗಿಸಬೇಕೆಂದು ಈ ಮೂಲಕ ಅವರು ಕೋರಿದ್ದಾರೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago