ಆಳಂದ ತುರ್ತು ಸೌಲಭ್ಯಕ್ಕೆ ಶಾಸಕರ ಮನವಿ

0
19

ಆಳಂದ: ತಾಲೂಕಿನಲ್ಲಿ ಕೋರೋನಾ ಪ್ರಕರಣಗಳು ದಿನೇ ದಿನೇ ವ್ಯಾಪಕವಾಗಿ ಪತ್ತೆಯಾಗುತ್ತಿರುವುದರಿಂದ ಮುಂಜಾಗೃತಾ ಕ್ರಮಕ್ಕಾಗಿ ಅಗತ್ಯ ತುರ್ತು ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಅವರಿಗೆ ಪತ್ರ ಬರೆದಿರುವ ಅವರು, ಆಳಂದ ತಾಲೂಕಿನ ಆಳಂಗಾ ಗ್ರಾಮದಲ್ಲಿ ಒಂದೇ ದಿನ ೬೦ ಪ್ರಕರಣಗಳು ಪತ್ತೆಯಾಗಿವೆ ಇದು ಜನರಲ್ಲಿ ಆತಂಕವನ್ನುಂಟು ಮಾಡಿದೆ ಅಲ್ಲದೇ ಆಳಂದ ತಾಲೂಕು ಪ್ರದೇಶವು ನೆರೆಯ ಮಹಾರಾಷ್ಟ್ರದೊಂದಿಗೆ ೩ ಸ್ಥಳಗಳಲ್ಲಿ ಗಡಿಯನ್ನು ಹಂಚಿಕೊಳ್ಳುತ್ತದೆ ಇದರಿಂದ ಕ್ಷೇತ್ರದ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಜಿ.ವೆಂಕಟಸುಬ್ಬಯ್ಯ, ಎಲ್.ಬಿ.ಕೆ. ಆಲ್ದಾಳರು ಮರೆಯಲಾಗದ ಮಹಾನುಭವರು: ಡಾ. ಸತ್ಯಂಪೇಟೆ

ಆಳಂದ ತಾಲೂಕಿನಲ್ಲಿ ಕೋವಿಡ್ ರೋಗಿಗಳ ತುರ್ತು ಚಿಕಿತ್ಸೆಗಾಗಿ ವೆಂಟಿಲೆಟರ್, ಆಕ್ಸಿಜನ್ ಒದಗಿಸಿ, ಆಧುನಿಕ ಸೌಲಭ್ಯವುಳ್ಳ ಬೆಡ್‌ಗಳನ್ನು ಹೆಚ್ಚಿಸಿ ಹೆಚ್ಚುವರಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕೂಡಲೇ ನೇಮಿಸುವಂತೆ ಮನವಿ ಮಾಡಿದ್ದಾರೆ.

ಕೇರ್ ಸೆಂಟರ್ ಆರಂಭ: ಕೋರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಳಂದ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ ಇಲ್ಲಿ ೭೫ ಜನರಿಗೆ ಚಿಕಿತ್ಸೆ ನೀಡಬಹುದಾಗಿದೆ. ತುರ್ತಾಗಿ ಅಗತ್ಯವಿರುವವರು ಈ ಕೇಂದ್ರದ ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here