ಲಿಂ. ಶ್ರೀ ನರಸಿಂಗರಾವ್ ಎಮ್. ಗಾಜರೆ ಸ್ಮರಣಾರ್ಥ ದತ್ತಿ ಕಾರ್ಯಕ್ರಮ

0
42

ಕಲಬುರಗಿ: ಪಾಲ್ಕುರಿಕೆ ಸೋಮನಾಥಕವಿಯ ವಿದ್ವತ್ತು ಮತ್ತು ಕವಿತ್ವ ಎರಡೂ ಹೊರಹೊಮ್ಮಿರುವುದು ’ಮಲ್ಲಿಕಾರ್ಜುನ ಪಂಡಿತಾರಾಧ್ಯಚರಿತ್ರೆ’ ಎಂಬ ಕಾವ್ಯದಲ್ಲಿ. ಒಬ್ಬಕವಿಯಾಗಿ ಶರಣರ ಬಗೆಗಿನ ಮಾಹಿತಿಗಳನ್ನು ಅತ್ಯಂತ ಪ್ರಾಮಾಣಿಕ ರೀತಿಯಲ್ಲಿ ಕಟ್ಟಿಕೊಟ್ಟಿರುವುದು ಸೋಮನಾಥಕವಿಯ ಹೆಗ್ಗಳಿಕೆಯೆಂದು ಹೇಳುಬಹುದು. ಸೋಮನಾಥ ಕವಿಯು ಅಪ್ರತಿಮ ಬಸವ ಭಕ್ತನಾಗಿ ತನ್ನ  ’ಬಸವ ಪುರಾಣ’ ಕಾವ್ಯದಲ್ಲಿ ಬಸವಾದಿ ಶರಣರ ಬಗ್ಗೆ ಹೇಳಿದ್ದರೂ ಅದಕ್ಕೆ ತೃಪ್ತಿ ಹೊಂದದೆ ’ಮಲ್ಲಿಕಾರ್ಜುನ ಪಂಡಿತಾರಾಧ್ಯಚರಿತೆ’ಯಲ್ಲಿ ಬಸವಾದಿ ಶರಣರ ತತ್ತ್ವಗಳ ಪ್ರತಿಪಾದನೆ, ಪ್ರಚಾರವನ್ನು ಮುಂದುವರೆಸಿರುವುದು ಒಂದು ವಿಶೇಷವೆನ್ನಬಹುದು.

ಬಸವ ಸಮಿತಿಯಅನುಭವ ಮಂಟಪದಲ್ಲಿ ವಿಶ್ವಮಾನವ ಡೋಹರಕಕ್ಕಯ ಸಮಾಜದ ಲಿಂ. ಶ್ರೀ ನರಸಿಂಗರಾವ್ ಎಮ್. ಗಾಜರೆ ಸ್ಮರಣಾರ್ಥ ಅರಿವಿನ ಮನೆ ೬೬೬ ನೆಯ ದತ್ತಿ ಕಾರ್ಯಕ್ರಮದಲ್ಲಿ ಪಾಲ್ಕುರಿಕೆ ಸೋಮನಾಥನ ’ಮಲ್ಲಿಕಾರ್ಜುನ ಪಂಡಿತಾರಾಧ್ಯಚರಿತೆ’ ವಿಷಯದ ಮೇಲೆ ಅನುಭಾವ ನೀಡಿದ ಡಾ. ವೀರಣ್ಣ ದಂಡೆಯವರು ಪಾಲ್ಕುರಿಕೆ ಸೋಮನಾಥ ಒಬ್ಬ ಕವಿಯಾಗಿ  ತನ್ನ ಪ್ರೌಢಾವಸ್ಥೆಯಲ್ಲಿ (೨೫-೩೦ ವರ್ಷ) ಬಸವ ಪುರಾಣವನ್ನು ಬರೆದಿದ್ದಾನೆ. ಅವನ ಉತ್ಸಾಹ, ಬಸವನಿಷ್ಠೆ ಅದ್ಭುತವಾದಂಥವು. ವಿಶೇಷವೆಂದರೆ ರಾಯಚೂರು ಜಿಲ್ಲೆ ದೇವದುರ್ಗತಾಲೂಕಿನ ಗೊಬ್ಬೂರಿನಲ್ಲಿ ಮಂತ್ರಿಯಾಗಿದ್ದ ಸಂಗನಾಮಾತ್ಯನ ಸಂಪರ್ಕಕ್ಕೆ ಬಂದಂತಹ ವಿಶೇಷ ಸಂಗತಿ ಬೆಳಕಿಗೆ ಬರುತ್ತದೆ.. ಇಲ್ಲಿ ಮಂಡಗೆ ಮಾದಿರಾಜ ಎಂಬ ವ್ಯಕ್ತಿಯ  ಉಲ್ಲೇಖ ಬರುತ್ತದೆ.  ಇವನು ಬಸವಣ್ಣನವರ ತಂದೆಯಾಗಿರದೆ ಒಬ್ಬ ಶಿವಯೋಗಿ, ಸಂತ ಎಂಬುದು ತಿಳಿದು ಬರುತ್ತದೆ.

Contact Your\'s Advertisement; 9902492681

 ಪ್ರಜಾಪ್ರಭುತ್ವ ವ್ಯವಸ್ಥೆಯ ಸಫಲತೆಯಲ್ಲಿ ಆಡಳಿತ ವರ್ಗದ ಪಾತ್ರ ಅಮೋಘ

ಈ ಮಂಡಗೆ ಮಾದಿರಾಜ ಶೈವಧರ್ಮದ ಗುರುವಾಗಿದ್ದವನು. ಬಸವಣ್ಣನವರ ಭಕ್ತನೂ ಅಗಿದ್ದು ಮಾಹಿತಿ ಸಿಗುತ್ತದೆ. ಈತ ಧರ್ಮಗುರುವಾಗಿ ಅನೇಕ ಜನರಿಗೆ ಲಿಂಗದೀಕ್ಷೆಯನ್ನು ಕೊಟ್ಟಿರುವುದು ತಿಳಿದುಬರುತ್ತದೆ. ಸಂಗನಾಮಾತ್ಯನೂ ಸಹ ಇವನಿಂದಲೇ ಲಿಂಗದೀಕ್ಷೆಯನ್ನು ಪಡಿದಿರುವ ಸಂಗತಿಯೂ ಉಲ್ಲೇಖವಾಗಿದೆ.  ಹಂಪೆಯ ಹರಿಹರಕವಿಯ ಗುರು ಮಾಯಿದೇವ ಅಥವಾ ಮಹಾದೇವ. ಈ ಮಹಾದೇವನ ಗುರುವಾಗಿದ್ದವನು ಮಂಡಗೆ ಮಾದಿರಾಜನೆಂಬ ವಿಶೇಷ ಸಂಗತಿಯೂ ನಮ್ಮ ಅರಿವಿಗೆ ಬರುತ್ತದೆ.

ಈ ಮಾದಿರಾಜನೇ ಹರಿಹರನಿಗೂ ಮತ್ತು ಪಾಲ್ಕುರಿಕೆ ಸೋಮನಾಥನಿಗೂ ಶರಣ ಚರಿತ್ರೆಗಳನ್ನು ಬರೆಯಲು ಪ್ರೇರಕ ಶಕ್ತಿಯಾಗಿರಬೇಕೆಂಬ ಅನುಮಾನ ಬರುತ್ತದೆ. ಹರಿಹರನ ಮತ್ತು ಸೋಮನಾಥಕವಿಯ ಮೂರು ಕಾವ್ಯಗಳನ್ನು ಪರಿಶೀಲನೆ ಮಾಡಿದಾಗ ಅಂದರೆ ಹರಿಹರನ ಶರಣರ ರಗಳೆಗಳು ಹಾಗೂ ಸೋಮನಾಥನಕವಿಯ ಬಸವ ಪುರಾಣ ಮತ್ತು ಪಂಡಿತಾರಾಧ್ಯ ಚರಿತೆಗಳನ್ನು ವೀಕ್ಷಿಸಿದಾಗ ಬಸವಾದಿ ಪ್ರಮಥರ ಬಗೆಗೆ ಅನೇಕ ಹೊಸ ಸಂಗತಿಗಳು ಈ ಕೃತಿಗಳಲ್ಲಿ ದಾಖಲಾಗಿರುವುದು ಕಂಡುಬರುತ್ತದೆ. ಈ ಎಲ್ಲವೂ ಸರಳ ಗದ್ಯಾನುವಾದ ಮುಖಾಂತರ ಜನಸಾಮಾನ್ಯರಿಗೆ ಓದಲು ಸಿಗುವಂತಾಗಬೇಕೆಂದು. ವೀರಣ್ಣ ದಂಡೆ ಅಭಿಪ್ರಾಯಪಟ್ಟರು.

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನ ಕೊಲೆ

ಹರಿಹರ ಬಳಸಿದ ಶರಣುಶರಣಾರ್ಥಿ, ಬಸವ ದೀಕ್ಷೆ ಎಂಬ ಪದಗಳು ವಿಶೇಷವಾಗಿವೆ.  ಸಾಮಾನ್ಯರಿಗೆ ದೀಕ್ಷೆ ಕೊಡಲು ಗುರು ಬೇಕು.  ಆದರೆ ಈಗಾಗಲೇ ಬೆಳೆದುನಿಂತ ಶರಣರಿಗೆ ಗುರುವಿನ ಅವಶ್ಯಕತೆ ಅವರು ತಾವಾಗಿಯೇ ಲಿಂಗವನ್ನು ಧರಿಸಿಕೊಳ್ಳುತ್ತಾರೆಂಬ ಮಹತ್ವದ ಸಂಗತಿಯನ್ನು ಸೋಮನಾಥ ಹೇಳುತ್ತಾನೆ.  ಹೀಗಾಗಿ ಶರಣ ಚಳುವಳಿಯ ಬಗ್ಗೆ, ಬಸವ ಧರ್ಮದ ಬಗೆಗೆ ತಿಳಿದುಕೊಳ್ಳಲು ವಚನಗಳ ಜೊತೆ ಹರಿಹರ ಹಾಗೂ ಪಾಲ್ಕುರಿಕೆ ಸೋಮನಾಥನ ಕಾವ್ಯಗಳನ್ನು ವಿದ್ವಾಂಸರಷ್ಟೇ ಅಲ್ಲ ಜನಸಾಮಾನ್ಯರು ಕೂಡ ಮಾಡಬೇಕು.  ಈ ಮೂರು ಕಾವ್ಯಗಳ ಕನ್ನಡ ಗದ್ಯಾನುವಾದ ಕೃತಿಗಳನ್ನು ಬಸವ ಸಮಿತಿ ಪ್ರಕಟಸಿ, ಬಸವ ಜಯಂತಿಗೆ ಬಿಡುಗಡೆಗೊಳಿಸುತ್ತಿದೆ ಎಂದು ಡಾ. ವೀರಣ್ಣ ದಂಡೆ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದ   ಡಾ. ವಿಲಾಸವತಿ ಖೂಬಾ, ದತ್ತಿ ದಾಸೋಹಿಗಳಾದ ಶ್ರೀ ಮಲ್ಲಿಕಾರ್ಜುನ ಗಾಜರೆ ಉಪಸ್ಥಿತ್ತರಿದ್ದರು.ಶ್ರೀ ಹೆಚ್.ಕೆ.ಉದ್ದಂಡಯ್ಯ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here