ಶಹಾಬಾದ : ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಕ್ಕೆ ನಲುಗಿಹೋಗಿದ್ದ ನಗರವಾಸಿಗಳಿಗೆ ಗುರುವಾರ ಮಧ್ಯಾಹ್ನ ಗಾಳಿ, ಗುಡುಗು ಸಹಿತ ಮಳೆ ಸುರಿದ ಪರಿಣಾಮ ಮಳೆ ಇಳೆಯನ್ನು ತಂಪಾಗಿಸಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು. ಮಧ್ಯಾಹ್ನ ಆರಂಭವಾದ ಮಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿಯಿತು.
ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿ ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸವಾರರಿಗೆ ತೊಂದರೆಯನ್ನುಂಟು ಮಾಡಿತು. ನಗರದ ಪ್ರಮುಖ ರಸ್ತೆಗಳು ಅಕ್ಷರಶಃ ನದಿಯಂತೆ ಹರಿಯುವಂತೆ ಕಂಡವು. ನಗರದ ಬಸವೇಶ್ವರ ವೃತ್ತದಿಂದ ಶಾಸ್ತ್ರೀ ವೃತ್ತದವರೆಗಿನ ರಸ್ತೆಯ ಮೇಲೆ ಮೊಳಕಾಲಿನಷ್ಟು ನೀರು ತುಂಬಿಕೊಂಡಿತ್ತು. ಚರಂಡಿಯಲ್ಲಿನ ನೀರು ಮತ್ತು ತ್ಯಾಜ್ಯ ವಸ್ತುಗಳು ರಸ್ತೆಯ ಮೇಲೆ ಹರಿದು ಗಲೀಜು ವಾತಾವರಣ ಸೃಷ್ಟಿಯಾಯಿತು.
ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದ ವಿಶ್ವ ಗುರು ಭಾರತದ ಬಗ್ಗೆ ನಿಮಗೆ ಗೊತ್ತಾ?
ಗ್ರಾಮೀಣ ಭಾಗದಿಂದ ವಿವಿಧ ವಸ್ತುಗಳ ಖರೀದಿಗಾಗಿ ನಗರಕ್ಕೆ ಆಗಮಿಸದ್ದ ಜನತೆ ಏಕಾಏಕಿ ಸುರಿದ ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಆಶ್ರಯ ಪಡೆದರು.ಕೆಲವು ಜನರು ಸರಿಯಾದ ರಸ್ತೆ ಚರಂಡಿ ನಿರ್ಮಾಣ ಮಾಡದಿರುವುದಕ್ಕೆ ನಗರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.ಇದುವರೆಗೆ ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಜನತೆಗೆ ಒಂದಷ್ಟು ಸಮಾಧಾನ ನೀಡಿತು.ಸಂಜೆ ಹೊತ್ತಿಗೆ ತಂಪಾದ ವಾತಾವರಣ ಮೂಡಿತು.ನಗರದ ಜಿಇ ಕಾಲೋನಿಯಲ್ಲಿ ಒಣಗಿದ ಮರಗಳ ಕೊಂಬೆಗಳು ಅಲ್ಲಲ್ಲಿ ಮುರಿದು ಬಿದ್ದರುವುದು ಕಂಡು ಬಂದಿತು.
ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಅಶೋಕ ಪಾಟೀಲ ಮಹಿಳೆ ಅಥವಾ ಸ್ತ್ರೀ ಪದವು ಸಂಸ್ಕøತದ್ದು, ಕನ್ನಡದಲ್ಲಿ ಈ…
ಶಹಾಬಾದ:ನಗರದ ಹಳೆಶಹಾಬಾದನ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಭೀಮರಾವ.ಸಿ.ಸುಗೂರ (77) ಶನಿವಾರದಂದು ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಸುಪುತ್ರರು, ಇಬ್ಬರು ಸುಪುತ್ರಿಯರು…
ಜೇವರ್ಗಿ: ಇಂದು ನೆಲೋಗಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟ್ ನೆಲೋಗಿವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ಸಮುದಾಯ ಭವನದಲ್ಲಿ ಛತ್ರಪತಿ…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಮೂಢನಂಬಿಕೆ, ಅನಿಷ್ಟ ಪದ್ಧತಿ, ಸಂವಿಧಾನದ ಆಶಯ ಈಡೇಸುವ ನಿಟ್ಟಿನಲ್ಲಿ ಜನ್ಮ ತಾಳಿದ ಮಾನವ ಬಂಧುತ್ವ…
ಕಲಬುರಗಿ: ನಗರದ ಸೆಂಟ್ ಮೇರಿ ಶಾಲೆಯಲ್ಲಿ 5 ರಿಂದ 9 ನೇ ತರಗತಿಯ 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ…
ಜೇವರ್ಗಿ: ತಾಲೂಕಿನ ಜನರ ಸೇವೆಗಾಗಿ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು…