ಕೊವಿಡ್-19 ಸೊಂಕಿತರ ತ್ಯಾಜ್ಯ ವಿಲೇವಾರಿಗೆ ಮುಂದಾದ ಶಹಾಬಾದ ನಗರಸಭೆ

ಶಹಾಬಾದ:ನಗರದಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡುವ ನಗರಸಭೆ ಇದೀಗ ಕೊವಿಡ್-19 ಸೊಂಕಿತರು ಬಳಸಿದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಕೆಲಸಕ್ಕೆ ಮುಂದಾಗಿದೆ.

ನಗರದ ಕಸ ಸಂಗ್ರಹ ಮಾಡಿ ವಾಹನಗಳ ಮೂಲಕ ತ್ಯಾಜ್ಯ ವಿಲೇವಾರಿ ಮಾಡುವ ಹಾಗೆ, ಇದೀಗ ಕೊವಿಡ್-19 ಸೊಂಕಿತರು ಬಳಸಿದ ತ್ಯಾಜ್ಯ ವಿಲೇವಾರಿ ಮಾಡಲು ಬುಧವಾರ ಚಾಲನೆ ನೀಡಿದೆ.ಅಲ್ಲದೇ ಕಸ ಸಂಗ್ರಹ ಮಾಡುವ ವಾಹನಗಳಲ್ಲಿ ಕೊವಿಡ್-19 ಸೊಂಕಿತರು ಬಳಸಿದ ತ್ಯಾಜ್ಯ ಸಂಗ್ರಹ ಮಾಡದೇ, ಅದಕ್ಕಾಗಿ ಪ್ರತ್ಯೇಕ ವಾಹನ ಮತ್ತು ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ.ಕೊರೊನಾ ವೈರಸ್ ಬಹಳ ಕಾಡುತ್ತಿರುವುದರಿಂದ ಇದನ್ನು ಬೇರೆ ತ್ಯಾಜ್ಯದೊಂದಿಗೆ ಬೆರೆಸದೆ, ಕಸ ಸಂಗ್ರಹಣ ಮಾಡಿದ ಕೂಡಲೇ ರಾಸಾಯನಿಕ ದ್ರಾವಣ ಸಿಂಪಡಿಸಲಾಗುತ್ತಿದೆ.

ಪೊಲೀಸರಿಗೆ ಬೆಂಬಿಡದೇ ಕಾಡುತ್ತಿದೆ ಕೊರೊನಾ

ಸೋಂಕಿತರು ಮತ್ತು ಕ್ವಾರಂಟೈನ್‍ನಲ್ಲಿದ್ದವರ ತ್ಯಾಜ್ಯವನ್ನು (ಬಟ್ಟೆ, ಟಿಶ್ಯೂ, ಬಳಸಿ ಬಿಸಾಡುವ ತಟ್ಟೆ ಇತ್ಯಾದಿ) ಎಚ್ಚರಿಕೆಯಿಂದ ವಿಲೇವಾರಿ ಮಾಡಬೇಕೆಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಸೂಚಿಸಿದ್ದಾರೆ.

ಅದಕ್ಕಾಗಿ ಸಿಬ್ಬಂದಿಗಳಿಗೆ ಪಿಪಿ ಕಿಟ್ ವ್ಯವಸ್ಥೆ ಹಾಗೂ ಸೊಂಕು ತಗುಲದ ಹಾಗೇ ಕನ್ನಡಕವನ್ನು ನೀಡಲಾಗಿದೆ.ತ್ಯಾಜ್ಯ ವಿಲೇವಾರಿಯ ಜವಾಬ್ದಾರಿಯನ್ನು ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಅವರಿಗೆ ವಹಿಸಲಾಗಿದ್ದು, ನಗರ ವ್ಯಾಪ್ತಿಯ ಯಾರಿಗಾದರೂ ಸೊಂಕು ತಗುಲಿದ ವ್ಯಕ್ತಿ ಬಳಸಿದ ವಸ್ತುಗಳು, ತ್ಯಾಜ್ಯಗಳು ಎಲ್ಲೆಂದರಲ್ಲಿ ಎಸೆಯದೇ ನಗರಸಭೆಯವಾಹನಗಳು ಬಂದಾಗ ಅವರಿಗೆ ನೀಡಬೇಕು.

ಆಕ್ಸಿಜನ್ ಸಿಲಿಂಡರ್ ನೀಡಿ ನೆರವಾದ ಜೆಪಿ ಕಾರ್ಖಾನೆ

ಅದನ್ನು ಸರಿಯಾಗಿ ಎಚ್ಚರಿಕೆ ಕ್ರಮದಿಂದ ನಗರದ ಸಮೀಪದ ಭಂಕೂರ ಗ್ರಾಮದ ಹೊರವಲಯದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕ ಕ್ರಮದಿಂದ ವಿಲೇವಾರಿ ಮಾಡಲಾಗುತ್ತದೆ.ಅದಕ್ಕಾಗಿ ಸೊಂಕಿತ ವ್ಯಕ್ತಿಯ ಕುಟುಂಬದವರು ತ್ಯಾಜ್ಯವನ್ನು ನಗರಸಭೆಯ ಅಧಿಕಾರಿಗಳಿಗೆ ತಿಳಿಸಿ, ವಿಲೇವಾರಿ ಮಾಡಲು ಸಹಕರಿಸಬೇಕೆಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ತಿಳಿಸಿದ್ದಾರೆ.

emedialine

Recent Posts

ಸಾಮಾಜಿಕ ನ್ಯಾಯದ ಹೆಸರ್ಹೇಳೀ ಅಧಿಕಾರಕ್ಕೆ ಬಂದ ಸರ್ಕಾರದಿಂದಲೇ ಮೋಸ

ವಾಡಿ: ಸಾಮಾಜಿಕ ನ್ಯಾಯದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ಸರ್ಕಾರಗಳು ಸಹ ಮತ ಹಾಕಿದ ನಮ್ಮನ್ನೇ ನಿರಂತರವಾಗಿ ಮೋಸ ಮಾಡುತ್ತಿರುವುದು…

12 mins ago

ವಿಶ್ವ ಫಾರ್ಮಸಿಸ್ಟ್ ದಿನಾಚರಣೆ

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಜಿಲ್ಲಾಶಾಖೆಯಿಂದ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡ ವಿಶ್ವ ಫಾರ್ಮಸಿಸ್ಟ್…

31 mins ago

ಸೇವಾ ಭಾರತಿ ರಜತ್ ಮಹೋತ್ಸವಕ್ಕೆ ಪೂಜ್ಯ ಡಾ. ದಾಕ್ಷಾಯಣಿ ಎಸ್. ಅಪ್ಪಾ ಜಾಲನೆ

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೇವಾ ಭಾರತಿ ರಜತ್ ಮಹೋತ್ಸವಕ್ಕೆ ಪೂಜ್ಯ ಡಾ. ದಾಕ್ಷಾಯಣಿ ಎಸ್. ಅಪ್ಪಾ ಅವರು…

32 mins ago

ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

ಕಲಬುರಗಿ: ನಗರದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ…

35 mins ago

SSLC/PUC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಲಬುರಗಿ: ನಗರದ ರಾಮಮಂದಿರ ಹಿಂದುಗಡೆ ಇರುವ ಸಮಾಜ ಭವನದಲ್ಲಿ ಶ್ರೀ ಶಿವಶರಣ ಹರಳಯ್ಯ (ಸಮಗಾರ) ಮಚಗಾರ ಸಮಾಜದ  ವತಿಯಿಂದ ಎಸ್‍ಎಸ್‍ಎಲ್‍ಸಿ…

37 mins ago

ಲಿಂ. ಶಾಂತವೀರ ಶಿವಾಚಾರ್ಯರ 43ನೇ ಪುಣ್ಯಸ್ಮರಣೋತ್ಸವದ ಪೂರ್ವ ಭಾವಿ ಸಭೆ

ಕಲಬರುಗಿ: ನಗರದ ಚವದಾಪೂರಿ ಮಠದ ಶತಾಯುಶಿ. ಲಿಂ. ಶಾಂತವೀರ ಶಿವಾಚಾರ್ಯರ 43ನೇ ಪುಣ್ಯಸ್ಮರಣೋತ್ಸವದ ಪೂರ್ವ ಭಾವಿ ಸಭೆ ಜರುಗಿತು. ಈ…

39 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420