ಅನ್ನದಾನ ಶ್ರೇಷ್ಠ ದಾನ: ಧನ್ನಿ

0
78

ಕಲಬುರಗಿ: ಕರೋನಾ ಸೋಂಕಿನ ಈ ಸಂದರ್ಭದಲ್ಲಿ ಎಲ್ಲಾ ದಾನಗಳಿಗಿಂತ ಅನ್ನದಾನ ಶ್ರೇಷ್ಠ ದಾನ. ಅದರಲ್ಲೂ ಹಸಿದವರ ಹೊಟ್ಟೆ ತುಂಬಿಸಲು ಸಂಚರಿಸುತ್ತಿರುವ ರಮೇಶ ಪೂಜಾರಿ ಅವರ ಕಾರ್ಯ ಶ್ಲಾಘನೀಯ ಎಂದು ಸಂಚಾರಿ ಪಿಎಸ್ ಐ ಭಾರತೀಬಾಯಿ ಧನ್ನಿ ಅಭಿಮತ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ)ದ ಕಾರ್ಯಾಧ್ಯಕ್ಷ ರಮೇಶ ಪೂಜಾರಿ ನೇತೃತ್ವದಲ್ಲಿ ನಡೆದ ಅನ್ನ ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದರು. ಕರೋನಾ ಮಹಾ ಮಾರಿಯ ಅಟ್ಟಹಾಸದ ಈ ಸಂದರ್ಭದಲ್ಲಿ ಹಲವಾರು ನಿರ್ಗತಿಕರು, ಬಡವರು, ನಿರುದ್ಯೋಗಿಗಳು ಕೆಲಸವಿಲ್ಲದೇ, ಕೂಲಿ ಇಲ್ಲದೇ ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಸಿದು ಬಳಲಿದವರನ್ನು ಅನ್ನ ನೀಡುವುದು ಮುಖ್ಯವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ನಗರದ ರಿಂಗ್ ರಸ್ತೆ, ಬಿಲಗುಂದಿ ವೃತ್ತ, ಸರಕಾರಿ ಆಸ್ಪತ್ರೆ, ಸುಪರ್ ಮಾರ್ಕೇಟ್, ಚೌಕ್ ವೃತ್ತ, ಲಾಲಗೇರಿ ಕ್ರಾಸ್, ಆಳಂದ್ ನಾಕಾ ಸೇರಿಸದಂತೆ ನಗರದ ವಿವಿಧೆಡೆ ಅನ್ನ ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರಮೇಶ ಪೂಜಾರಿ, ಕರೋನಾ ನಿಯಂತ್ರಣಕ್ಕೆ ತರುವಲ್ಲಿ ಪೊಲೀಸ್ ಮತ್ತು ಸ್ವಯಂ ಸೇವಕರ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ. ಉಳ್ಳವರು ತಮ್ಮ ಕೈಲಾದ ಸೇವೆ‌ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ವೇದಿಕೆಯ ಕಲ್ಯಾಣ ಕರ್ನಾಟಕದ ಅಧ್ಯಕ್ಷ ಶರಣು ಹೊಸಮನಿ ಮಾತನಾಡಿ, ಕರೋನಾ ಕೊಂಡಿ ಮುರಿಯವಲ್ಲಿ ವಾರಿಯರ್ಸ್ ಈ ಬಾರಿ ಮಾಡಿದ ಸೇವೆ ಅವಿಸ್ಮರಣೀಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆನಂದ ತೆಗನೂರ್, ಹಣಮಂತ ಹೊಸಮನಿ, ಮಲ್ಲಿಕಾರ್ಜುನ ಕಿಳ್ಳಿ, ಗೋಪಾಲರೆಡ್ಡಿ, ಶರಣು, ಸುರೇಶ, ಸಂತೋಷ ದರ್ಗಿ, ರಾಜು ರಜಪೂತ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here