ಸುರಪುರ: ಕಟ್ಟಡ ಕಾರ್ಮಿಕರ ಉಳಿತಾಯ ಖಾತೆಗಳಿಗೆ ಆಧಾರ ಸಂಖ್ಯೆ ಜೋಡಣೆಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಮುಖಂಡರು ನಗರದಲ್ಲಿನ ವಿವಿಧ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಮನವಿಯನ್ನು ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿದ ಮುಖಂಡರು ಈಗ ರಾಜ್ಯದಲ್ಲಿನ ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೋವಿಡ್ ಪರಿಹಾರ ಹಣವನ್ನು ಸರಕಾರ ಬ್ಯಾಂಕ್ ಖಾತೆಗಳಿಗೆ ಹಾಕುತ್ತಿದೆ.ಆದರೆ ಅನೇಕ ಜನ ಕಾರ್ಮಿಕರು ತಮ್ಮ ಖಾತೆಗಳಿಗೆ ಆಧಾರ ಸಂಖ್ಯೆ ಜೋಡಣೆ ಮಾಡಿಸಿಕೊಂಡಿರುವುದಿಲ್ಲ.ಆದ್ದರಿಂದ ತಮ್ಮ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಎಲ್ಲಾ ಕಾರ್ಮಿಕರ ಖಾತೆಗಳಿಗೆ ಆಧಾರ ಜೋಡಣೆ ಮಾಡುವಂತೆ ತಿಳಿಸಿದರು.ಅಲ್ಲದೆ ಸರಕಾರ ದಿಂದ ಹಣ ಬಂದಿರುವ ಕುರಿತು ಸ್ಟೇಟಮೆಂಟ್ ನೀಡುವಂತೆ ಮತ್ತು ಖಾತೆ ತೆರೆಯಲು ಬಂದವರಿಗೆ ಆದಷ್ಟು ಬೇಗ ಬ್ಯಾಂಕ್ ಖಾತೆಗಳನ್ನು ತೆರೆದುಕೊಡಲು ವಿನಂತಿಸಿದರು.
ಕಾರ್ಮಿಕ ಮುಖಂಡರ ಮನವಿಗೆ ಸ್ಪಂಧಿಸಿದ ಬ್ಯಾಂಕ್‌ಗಳ ವ್ಯವಸ್ಥಾಪಕರು ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ನಗರದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕ್ ಶಾಖೆಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಸಂಘದ ಅಧ್ಯಕ್ಷ ದೇವಿಂದ್ರಪ್ಪ ಗುಡಾಳಕೇರಿ ಗೌರವಾಧ್ಯಕ್ಷ ತಿಮ್ಮಯ್ಯ ಡೊಣ್ಣಿಗೇರಾ ಉಪಾಧ್ಯಕ್ಷ ಮರೆಪ್ಪ ದೇಸಾಯಿ ಅಬ್ದುಲ್ ರೌಫ್ ತಾಳಿಕೋಟಿ ಮಹಿಬೂಬಸಾಬ ಖಾನಾಪುರ ಭೀಮಣ್ಣ ಸುರಪುರ ರಾಮಯ್ಯ ರುಕ್ಮಾಪುರ ಭೀಮಣ್ಣ ಸಗರ ಆನಂದ ಕಟ್ಟಿಮನಿ ಝಂಡದಕೇರಾ ದೇವಪ್ಪ ಮಲ್ಲಿಬಾವಿ ಹಣಮಂತ ಕುಂಬಾರಪೇಟೆ ಇತರರಿದ್ದರು.