ಬಿಸಿ ಬಿಸಿ ಸುದ್ದಿ

ಸುರಪುರ: ಕೊರೊನಾ ವಾರಿಯರ್ಸ್‌ಗಳ ಸನ್ಮಾನಿಸಿದ ಸವಿತಾ ಸಮಾಜ

ಸುರಪುರ: ಸವಿತಾ ಸಮಾಜದ ಮುಖಂಡರು ಮಂಗಳವಾರ ನಗರದಲ್ಲಿನ ಅನೇಕ ಜನ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಿ ಗೌರವಿಸಿದರು.

ಸನ್ಮಾನವನ್ನು ಸ್ವೀಕರಿಸಿದ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಮಾತನಾಡಿ,ನಾವು ನಮ್ಮ ಕರ್ತವ್ಯವನ್ನು ಜವಬ್ದಾರಿಯಿಂದ ನಿಭಾಯಿಸಿದ್ದೇವೆ.ಅದನ್ನು ಮನಗಂಡು ತಾವು ಇಂದು ನಮ್ಮೆಲ್ಲರನ್ನು ಸನ್ಮಾನಿಸಿ ಗೌರವಿಸಿರುವುದು ಸಂತೋಷ ತಂದಿದೆ.ಅಲ್ಲದೆ ಮತ್ತಷ್ಟು ನಮ್ಮ ಜವಬ್ದಾರಿಯು ಹೆಚ್ಚಾಗಿದ್ದು ಎಲ್ಲರು ಸೇರಿ ಕೊರೊನಾ ವಿರುದ್ಧ ಹೋರಾಡೊಣ ಎಂದರು.

ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಮಾತನಾಡಿ,ನಮ್ಮ ಕರ್ತವ್ಯವನ್ನು ಅರಿತು ತಾವು ಬಂದು ಸನ್ಮಾನಿಸಿ ಗೌರವಿಸಿರುವುದಕ್ಕೆ ಧನ್ಯವಾದಗಳು.ಅದರಂತೆ ತಾವು ಕೊರೊನಾ ನಿರ್ಮೂಲನೆಗಾಗಿ ನಿಯಮಗಳನ್ನು ಪಾಲನೆ ಮಾಡಿ.ತಮ್ಮ ಬಳಿಗೆ ಕ್ಷೌರಕ್ಕಾಗಿ ಬರುವವರು ಕೋವಿಡ್ ನಿಯಮ ಪಾಲಿಸಲು ತಿಳಿಸಿ ಹಾಗು ತಮ್ಮ ಅಂಗಡಿಗಳಲ್ಲಿ ಹೆಚ್ಚು ಜನರು ಸೇರಲು ಅವಕಾಶ ಮಾಡಿಕೊಡದೆ ಒಬ್ಬೊಬ್ಬರಾಗಿ ಬರುವಂತೆ ತಿಳಿಸಿ ಎಂದರು.

ಈ ಸಂದರ್ಭದಲ್ಲಿ ಮುಖಂಡ ಯಲ್ಲಪ್ಪ ಚಿನ್ನಾಕಾರ ಮಾತನಾಡಿ,ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ನಮ್ಮೆಲ್ಲರ ಸೇವೆ ಮಾಡಿದ ಎಲ್ಲಾ ಅಧಿಕಾರಿಗಳು ಹಾಗು ವಾರಿಯರ್ಸ್‌ಗಳ ಸೇವೆಯ ಫಲದಿಂದ ಈಗ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು ಎಲ್ಲರ ಸೇವೆಗೆ ನಮ್ಮ ಸವಿತಾ ಸಮಾಜ ಸನ್ಮಾನಿಸಿ ಗೌರವಿಸಿರುವುದು ನಮ್ಮೆಲ್ಲರಿಗೆ ಸಂತೋಷ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ,ಪಿಐ ಎಸ್.ಎಮ್.ಪಾಟೀಲ್ ಪಿಎಸ್‌ಐ ಚಂದ್ರಶೇಖರ ಹಸನಾಪುರ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಹಾಗು ಗೃಹರಕ್ಷಕ ದಳದ ವೆಂಕಟೇಶ ಸುರಪುರ ನಗರಭೆ ದಫೆದಾರ ಶರಣಪ್ಪ ಸೇರಿದಂತೆ ಅನೇಕರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರಾದ ನಗರಸಭೆ ಸದಸ್ಯ ಚಂದ್ರಾಮ ಮುಂದಿನಮನಿ ಸೂರ್ಯಕಾಂತ ಚಿನ್ನಾಕಾರ ಬಾಲರಾಜ ಚಿನ್ನಾಕಾರ ಬಾಲದಂಡಪ್ಪ ಗೌಡಗೇರಿ ಮಹೇಶ ಅಚ್ಚಕೋಲಿ ಬಸವರಾಜ ಗೌಡಗೇರಿ ಭೀಮಣ್ಣ ದೇವರಗೋನಾಲ ಮಹೇಶ ಗೋಗಿ ಸೇರಿದಂತೆ ಅನೇಕರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

3 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

5 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

12 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

12 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

13 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

23 hours ago