ಸುರಪುರ: ನಗರದ ಪೊಲೀಸ್ ಠಾಣೆಯಿಂದ ಚಡಚಣ ಪೊಲೀಸ್ ಠಾಣೆಗೆ ವರ್ಗಾಣೆಗೊಂಡಿರುವ ಪಿಐ ಎಸ್.ಎಮ್.ಪಾಟೀಲ್ ಅವರಿಗೆ ಸುರಪುರ ಬ್ಯಾಡ್ಮಿಂಟನ್ ಅಶೋಷಿಯೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಬ್ಯಾಡ್ಮಿಂಟನ್ ಅಂಗಣದಲ್ಲಿ ನಡೆದ ಸನ್ಮಾನ ಸ್ವೀಕರಿಸಿದ ಎಸ್.ಎಮ್.ಪಾಟೀಲ್ ಮಾತನಾಡಿ,ತಾವೆಲ್ಲರು ಇಲ್ಲಿಯವರೆಗೆ ಕರ್ತವ್ಯ ನಿರ್ವಹಿಸಲು ಉತ್ತಮವಾಗಿ ಬೆಂಬಲಿಸಿದ್ದೀರಿ,ಜೊತೆಗೆ ಎಲ್ಲರು ಸ್ನೇಹ ಸಹೋದರತೆಯಿಂದ ಬ್ಯಾಡ್ಮಿಂಟನ್ ಅಶೋಷಿಯೆಶನ್ ಜೊತೆಗೆ ಬೆರೆತು ತಮ್ಮೊಂದಿಗೆ ಆಟವಾಡಲು ನೆರವಾಗಿದ್ದೀರಿ,ತಮ್ಮೆಲ್ಲರೊಂದಿಗೆ ಕಳೆದ ಕ್ಷಣಗಳು ಅವಿಸ್ಮರಣಿಯವಾಗಿವೆ,ಇದುವರೆಗು ತಾವು ನೀಡಿದ ಬೆಂಬಲಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಶ್ರೀ ಜನನಿ ಮಹಿಳಾ ಮಹಾವಿದ್ಯಾಲಯದಲ್ಲಿ ಕೊರೊನಾ ಲಸಿಕೆ ಅಭಿಯಾನ
ಇದೇ ಸಂದರ್ಭದಲ್ಲಿ ಅಶೋಷಿಯೇಶನ್‌ನ ಅನೇಕ ಮುಖಂಡರು ಮಾತನಾಡಿ,ಎಸ್.ಎಮ್.ಪಾಟೀಲ್ ಸರ್‌ವರು ನಮ್ಮ ಅಶೋಷಿಯೇಶನ್‌ನ ಗೌರವಾಧ್ಯಕ್ಷರಾಗಿ ನಮ್ಮೊಂದಿಗೆ ಬೆರೆತು ನಿತ್ಯವು ಬ್ಯಾಡ್ಮಿಂಟನ್ ಆಟದ ಜೊತೆಗೆ ಒಬ್ಬ ಹಿರಿಯ ಸಹೋದರರಾಗಿ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡಿದ್ದು ನಮ್ಮೆಲ್ಲರಲ್ಲಿ ಅಚ್ಚಾಗಿದೆ.ಈಗ ವರ್ಗಾವಣೆಗೊಂಡಿರುವುದು ನಮ್ಮೆಲ್ಲರಲ್ಲಿ ಬೇಸರವನ್ನು ಮೂಡಿಸಿದರು,ಮುಂದೆ ಆದಷ್ಟು ಬೇಗನೆ ಪದೋನ್ನತಿ ಹೊಂದಿ ಮತ್ತೆ ನಮ್ಮ ಸುರಪುರ ಠಾಣೆಗೆ ಬರುವಂತಾಗಲೆಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಎಲ್ಲರು ಶಾಲು ಹೊದಿಸಿ ಸನ್ಮಾನಿಸಿ ಗೌರವಸಿದರು. ಅಶೋಷಿಯೇಶನ್‌ನ ಮುಖಂಡರಾದ ರಾಮನಗೌಡ ಪಾಟೀಲ್,ಸೋಫಿಸಾಬ್ ಪಠಾಣ್,ಡಾ:ಮಲ್ಲಿಕಾರ್ಜುನ ಕಮತಗಿ,ಜಂಬುನಾಥ ಪೂಜಾರಿ,ಸಂದೀಪ್ ನಾಯಕ,ಗಣಪತಿ ಶಟಗಾರ,ಬಸವರಾಜ ಮುದಗಲ್,ಸೋಮಯ್ಯ ಸ್ವಾಮಿ,ಮಹಾಂತೇಶ ಬಿರಾದಾರ್,ಶರಣು ಮಾಲಗತ್ತಿ ಅರಳಗುಂಡಗಿ,ಪರಶುರಾಮ ಕನಕಗಿರಿ ಮತ್ತು ಕೃಷ್ಣಾ ಕಟಾಸ್ ಇತರರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…