ಪಾಳಾ ಜನಕಲ್ಯಾಣ ಟ್ರಸ್ಟ್ ವತಿಯಿಂದ ‘ಬಸವ ಪುರಸ್ಕಾರ’ಕ್ಕೆ ಆಯ್ಕೆ

0
289

ಕಲಬುರಗಿ: ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ರ್ ಪಾಳಾ ವತಿಯಿಂದ ಕೊಡಮಾಡುವ 3ನೇ ವರ್ಷದ ರಾಷ್ಟ್ರೀಯ ಮತ್ತು ರಾಜ್ಯ ಹಾಗು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ‘ಬಸವ ಪುರಸ್ಕಾರಕ್ಕೆ’ (ಪುಸ್ತಕ) ಲೇಖಕರನ್ನು ಆಯ್ಕೆ ಮಾಡಲಾಗಿದೆ ಎಂದು, ಟ್ರಸ್ಟ್ರ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವು ಲೇಖಕರ ಪುಸ್ತಕಗಳನ್ನು ಕರೆಯಲಾಗಿತ್ತು, ಸುಮಾರು 243 ಪುಸ್ತಕಗಳನ್ನು ಬಂದಿರುವದನ್ನು ಆಯ್ಕೆ ಸಮಿತಿಗೆ ಕೊಟ್ಟಾಗ ಅದರಲ್ಲಿನ 15 ಕೃತಿಗಳ ಲೇಖಕರಿಗೆ ಪುರಸ್ಕಾರಕ್ಕೆ ಆಯ್ಕೆಮಾಡಿದ್ದಾರೆ.

Contact Your\'s Advertisement; 9902492681

ರಾಷ್ಟ್ರಿಯ ಬಸವ ಪುರಸ್ಕಾರಕ್ಕೆ: ಡಾ. ರಂಗಾರೆಡ್ಡಿ ಕೋಡಿರಾಂಪುರ ಅವರ ಸಾಲು ಹೊಂಗೆಯ ತಂಪು ಕೃತಿ, ಡಾ. ಎಚ್.ಟಿ. ಪೋತೆ ಅವರ ಬಯಲೆಂಬೋ ಬಯಲು ಕೃತಿ, ಸಿದ್ದರಾಮ ಹೊನ್ಕಲ್ ಅವರ ನೂರೊಂದು ಅನುಭವ ಕೃತಿ, ಡಾ. ಪದ್ಮಾಕರ ಅಶೋಕ ಕುಮಾರ ಮಟ್ಟಿ ಅವರ ವಚನಕಾರ ಉರಿಲಿಂಗ ಪೆದ್ದಿ ಕೃತಿ. ಶ್ರೀಮತಿ ಶಶಿಕಲಾ ರಾ ನಾಡಗೌಡ ಅವರ ಬಾಳು ಬೆಳಗಿತು ಕೃತಿ

ರಾಜ್ಯ ಬಸವ ಪುರಸ್ಕಾರಕ್ಕೆ: ಡಾ. ಅಜಿತ್ ಹರೀಶಿ ಅವರ ಮೂಚಿಮ್ಮ ಕೃತಿ, ಲಿಂಗನಗೌಡ. ಹ.ದೇಸಾಯಿ ಅವರ ಮಾನವಂತರ ಮಗಳು ಕೃತಿ, ಲಕ್ಷ್ಮಿಕಾಂತ ಮಿರಜಕರ ಅವರ ಬಯಲೊಳಗೆ ಬಯಲಾಗಿ ಕೃತಿ, ಡಾ. ಗುರುದೇವಿ ಹುಲೆಪ್ಪನವರಮಠ ಅವರ ಚಿತ್ಕಿರಣ ಚಿದ್ಬೆಳಗು ಕೃತಿ, ಎ.ಎನ್. ರಮೇಶ್ ಗುಬ್ಬಿ ಅವರ ಕಾಡುವ ಕವಿತೆಗಳು ಕೃತಿ.

ಕಲ್ಯಾಣ ಕರ್ನಾಟಕ ಬಸವ ಪುರಸ್ಕಾರಕ್ಕೆ: ಲಿಂಗಾರೆಡ್ಡಿ ಶೇರಿ ಅವರ ಹರಿದ ಸೆರಗು ಕೃತಿ, ವೆಂಕಟೇಶ. ಕೆ. ಜನಾದ್ರಿ ಅವರ ಎನ್ನಲ್ಲಿ ಏನುಂಟೆಂದು ಕೃತಿ, ಅಬ್ಬಾಸ್ ಅಲಿ ಎ. ನದಾಫ್ ಅವರ ಭಾವ ಬಿಂದಿಗೆ ಕೃತಿ, ಶಿವರಂಜನ್ ಸತ್ಯಂಪೇಟೆ ಅವರ ವಚನ ಹೃದಯ ಕೃತಿ, ಡಾ ಶರಣಮ್ಮ ಬಿ. ಪಾಟೀಲ ಅವರ ಭೂಗರ್ಭ ಕೃತಿಗಳನ್ನು ಆಯ್ಕೆಮಾಡಲಾಗಿದೆ, ಕಾರ್ಯಕ್ರಮದ ದಿನಾಂಕ ತಿಳಿಸಲಾಗುವುದು. ಈ ಪುರಸ್ಕಾರವು ಬೆಳ್ಳಿ ಪದಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here