ಬಿಸಿ ಬಿಸಿ ಸುದ್ದಿ

ಪ್ರತಿಯೊಬ್ಬರೂ ಸಹಕಾರ ನೀಡಿದರೆ ಇನ್ನೂ ಉತ್ತಮ ಕೆಲಸ ಮಾಡುವೆ : ಮತ್ತಿಮಡು

ಶಹಾಬಾದ:ಕಲಬುರಗಿ ಗ್ರಾಮೀಣ ಕ್ಷೇತ್ರದ ನಂದೂರ.ಕೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ೪.೫ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮತ್ತು ೧೦ ಲಕ್ಷ ರೂ. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಭೂಮಿ ಪೂಜೆ ನೇರವೇರಿಸಿದರು.

ನಂತರ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು, ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಗರಿ? ಮಟ್ಟದಲ್ಲಿ ಅನುದಾನ ತಂದು ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು, ಮುಖಂಡರು ಮತ್ತು ಅಧಿಕಾರಿಗಳ ಸಹಯೋಗದೊಂದಿಗೆ ಗುಣಮಟ್ಟದ ಕಾಮಗಾರಿ ನಡೆಸಲಾಗುತ್ತಿದೆ. ಪ್ರತಿಯೊಬ್ಬರ ಸಹಕಾರ, ಸಲಹೆ ನೀಡಿದರೆ ಇನ್ನೂ ಉತ್ತಮ ಕೆಲಸ ಮಾಡುವೆ. ಪ್ರತಿಯೊಬ್ಬರೂ ಕೊರೊನಾ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಕ್ಷೇತ್ರ, ಮೂಲಸೌಕರ್ಯ, ಕೃಷಿ, ಶಿಕ್ಷಣ ಹೀಗೆ ಎಲ್ಲ ವಿಭಾಗಕ್ಕೂ ಉತ್ತಮ ಕೆಲಸವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಮಾಡುತ್ತಿವೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಅಭಿಮಾನಿಗಳು ಬೆಳ್ಳಿರಥದ ಉಡುಗೊರೆ ನೀಡಿ ಗೌರವಿಸಿದರು. ರಾಜ್ಯ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಅಂಬಾರಾಯ ಅ?ಗಿ, ಕಲಬುರ್ಗಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ಉಪಾಧ್ಯಕ್ಷ ವಿನೋದ ಪಾಟೀಲ್ ಸರಡಗಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಮಾದೇವಿ ಕಲ್ಲಾ , ಗ್ರಾಪಂ ಸದಸ್ಯರಾದ ಗಂಗಾಧರ ಸ್ವಾಮಿ ,ಶರಣಬಸಪ್ಪ, ಶಿವಕುಮಾರ ಅಂಬಲಗಿ, ನಿಂಗಣ್ಣ, ಪ್ರಭು ರಾವೂರ, ವಿಶ್ವನಾಥ ವೆಂಕಟಬೇನೂರ , ನೀಲಕಂಠರಾವ ಪಾಟೀಲ್, ಶಿವು ಗುತ್ತೇದಾರ, ಅಶೋಕ ಬಬಲಾದ, ರೇವಣ್ಯಸ್ವಾಮಿ , ಶಾಂತಕುಮಾರ ಪಾಟೀಲ್ , ಚಂದ್ರಶೇಖರ್ ಪಾಟೀಲ್, ಭೀಮಾಶಂಕರ , ಮಹಾಲಿಂಗಸ್ವಾಮಿ, ಬಸವೇಶ ಪಾಳಾ, ಜಗನ್ನಾಥ ಹರಳಯ್ಯ , ರಮೇಶ ಸಾಹುಕಾರ , ಮಹೇಶ ಪಾಳಾ, ಗಂಗಾಧರ ಅಪಚಂದ , ಬಸವರಾಜ ಪೋಲಿಸ ಪಾಟೀಲ್, ಅರುಣಕುಮಾರ ಹಿರೇಗೌಡ, ಮಲ್ಲಿಕಾರ್ಜುನ ಪ್ಯಾಟಿ , ಮಲ್ಲಿಕಾರ್ಜುನ ಹಿರೇಗೌಡ, ನಾಗರಾಜ ಕಲ್ಲಾ, ಈಶ್ವರ ರಾಠೋಡ್, ಮೈಲಾರಿ , ಅಮ್ರತ ಡಿಗ್ಗಿ , ಗುರುಶಾಂತ ಬೆಳಗುಂಪಿ ,ದಶರಥ ನಾಟೀಕರ , ಶರಣು ಬಿಲಗುಂದಿ , ಪಪ್ಪು ಕಣಕಿ , ಸಂಗುಗೌಡ ಪಾಳಾ , ನಂದೂರ ಕೆ ಗ್ರಾಮದ ಹಿರಿಯರು ಮುಖಂಡರು ಪಕ್ಷದ ಅಪಾರ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು .

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

27 mins ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

29 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

33 mins ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

37 mins ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

39 mins ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

1 hour ago