ಪ್ರಜಾಕೀಯ

ಖರ್ಗೆ ಅವರನ್ನ ಟೀಕೆ ಮಾಡುವ ಮೊದಲು ಬಿಜೆಪಿಯ ರವಿಕುಮಾರ್ ಕಲಬುರಗಿಯನ್ನು ಚೆನ್ನಾಗಿ ನೋಡಲಿ: ಪ್ರಿಯಾಂಕ್ ಖರ್ಗೆ

ಕಲಬುರಗಿ,ಸೇಡಂ: ಬಿಜೆಪಿ ಜನರಲ್‌ ಸೆಕ್ರೆಟರಿ ರವಿಕುಮಾರ್ ಮೊದಲು ಕಲಬುರಗಿಯನ್ನು ಹಾಗೂ ಇತಿಹಾಸವನ್ನು ಅರಿತುಕೊಂಡು ಬಂದು ಆಮೇಲೆ ಖರ್ಗೆ ಸಾಹೇಬರ ಅಭಿವೃದ್ಧಿ ಕಾರ್ಯಗಳ ಪ್ರಶ್ನೆ ಮಾಡಲಿ ಎಂದು ಟಾಂಗ್ ನೀಡಿದರು. ಎದೆ ಸೀಳಿದರೆ ಖರ್ಗೆ ಸಾಹೇಬರು ಕಾಣುತ್ತಾರೆ ಎಂದು ಹೇಳುತ್ತಿದ್ದ ಬಾಬುರಾವ್ ಚಿಂಚನಸೂರು ಅವರ ಎದೆಯಲ್ಲಿ ಮೋದಿ, ಶಾ, ಯಡಿಯೂರಪ್ಪ ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾವಂತೂ ಅಂಬೇಡ್ಕರ್ ಅವರನ್ನು ನೋಡಿಲ್ಲ ಖರ್ಗೆ ಸಾಹೇಬರಲ್ಲೇ ಅವರನ್ನು ಕಾಣುತ್ತಿದ್ದೇವೆ ಎನ್ನುತ್ತಿದ್ದ ಮಾಲೀಕಯ್ಯ ಗುತ್ತೇದಾರ ಈಗ ಅದೇ ಖರ್ಗೆ ಸಾಹೇಬರನ್ನ ಟೀಕಿಸುತ್ತಿದ್ದಾರೆ. ಸ್ವತಃ ತಾವೇ ಗೆಲ್ಲಲಾಗದ ಗುತ್ತೇದಾರ, ಚಿಂಚನಸೂರು ಇಂದು ಜಾಧವ್ ಅವರ ಕೈಗೆ ಬ್ಯಾಟ್ ಕೊಟ್ಟು ಫಿಲ್ಡಿಗಿಳಿಸಿ ಗೆಲುವು ನಮ್ಮದೇ ಅಂತ ಮಾಧ್ಯಮದ ಮುಂದೆ ಹೇಳುತ್ತಾರೆ. ಮೊದಲು ಫಿಲ್ಡನ್ನ ನೋಡಲಿ ಜನಬೆಂಬಲ ಯಾರಿಗಿದೆ ಗೆಲುವು ಯಾರದು ಎಂದು ತಿಳಿಯುತ್ತದೆ ಎಂದು ಹೇಳಿದರು.‌

ವಿದ್ಯಾವಂತ ಓದಿದವರು ಎಂದು ಟಿಕೇಟ್ ಕೊಟ್ಟು ಶಾಸಕರನ್ನಾಗಿ ಮಾಡಿದರೆ ಜಾಧವ್ ಮತದಾರರಿಗೆ ಮೋಸ ಮಾಡಿ ನಾಚಿಕೆಯಿಲ್ಲದೇ ಬಿಜೆಪಿ ಸೇರಿದ್ದಾರೆ.‌ಕಾರಣ ಕೇಳಿದರೆ, ಚಿಂಚೋಳಿ ಅಭಿವೃದ್ದಿ ಅಂತ ಹೇಳುತ್ತಾರೆ‌. ಬೀದರ ಕ್ಷೇತ್ರಕ್ಕೆ ಬರುವ ಚಿಂಚೋಳಿಯನ್ನ ಇವರು ಹೇಗೆ ಅಭಿವೃದ್ದಿ ಮಾಡುತ್ತಾರೆ? ಎಂದು ಪ್ರಶ್ನಿಸಿದರು.‌ ಇದು ನಿಮ್ಮ ಭವಿಷ್ಯದ ಚುನಾವಣೆ ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮತನೀಡಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

emedialine

View Comments

  • ಸರ್ಯ ಚಂದ್ರ ಎಷ್ಟು ಸತ್ಯ , ಡಾಕ್ಟರ್ ಮಲ್ಲಿಕಾರ್ಜುನ ಕರ್ಗೆಜಿ ಗೆಲುವು ಅಷ್ಟೇ ಸತ್ಯ. ಕರ್ಗೆಜಿ ಅಂದರೆ ಅಭಿವೃದ್ಧಿ
    ಕಲಬುರಗಿ ಅಭಿವೃದ್ಧಿ . ಅವರನ್ನು ಸೋಲಿಸುವ ಹಗಲು ಕನಸನ್ನು ಕಾಣುವ ಜನರು. ಹೈದರಾಬಾದ್ ಕರ್ನಾಟಕ
    ಕಲಬುರಗಿ ಅಭಿವೃದ್ಧಿ ವಿರೋಧಿಗಳು ಅಂದರೆ ತಪ್ಪಾಗಲಾರದು.

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

9 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

15 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

16 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago