ಶಹಾಬಾದ: ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅವರ ಅಧ್ಯಕ್ಷತೆಯಲ್ಲಿ ಮತ್ತು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಸಮ್ಮುಖದಲ್ಲೇ ನಡೆದ ಸಭೆಯಲ್ಲಿ ಸದ್ದು ಗದ್ದಲ, ಕೂಗಾಟ, ಅವ್ಯಾಚ ಶಬ್ದಗಳ ಬಳಕೆ ನಡೆದಂತ ಘಟನೆ ಶನಿವಾರ ನಗರಸಭೆಯ ಸಭಾಂಗಣದಲ್ಲಿ ಆಯೋಜಿಸಲಾದ ಸಾಮನ್ಯ ಸಭೆಯಲ್ಲಿ ನಡೆಯಿತು.
ಸಭೆಯಲ್ಲಿ ನಗರಸಭೆಯ ಸದಸ್ಯ ರವಿ ರಾಠೋಡ ಜೂನ್ ತಿಂಗಳ ಅವಧಿಯಲ್ಲಿ ಸುಮಾರು ೧೧೭೬೬೯ ರೂ. ಬಿಲ್ ಪಾವತಿಯಾಗಿದೆ. ಅಲ್ಲದೇ ೨೬೬೮ ವಾಹನದ ಸಂಖ್ಯೆಗೆ ಇಂಧನ ಹಾಕಿದ್ದು ನಮೂದಿಸಲಾಗಿದೆ.ಈ ವಾಹನ ಯಾರದು ಎಂದು ಪ್ರಶ್ನೆ ಮಾಡಿದರು.ಅದಕ್ಕೆ ಪೌರಾಯುಕ್ತರು ಇದು ನಗರಸಭೆಯ ಅಧ್ಯಕ್ಷರ ವಾಹನ ಎಂದರು. ನಗರಸಭೆಯ ಅಧ್ಯಕ್ಷರ ವಾಹನದ ನಂಬರ್ ಬೇರೆ ಇದೆ. ೨೬೬೮ ಸಂಖ್ಯೆ ವಾಹನಕ್ಕೆ ಏಕೆ ಇಂಧನ ಹಾಕಿದ್ದೀರಿ ಎಂದು ಕೇಳಿದರು.ಅದಕ್ಕೆ ನಗರಸಭೆಯ ಸದಸ್ಯ ಅವಿನಾಶ ಕಂಬಾನೂರ ಅವರು ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿ ಗದ್ದಲದ ವಾತಾವರಣ ಉಂಟಾಯಿತಲ್ಲದೇ, ಅವಾಚ್ಯ ಶಬ್ದಗಳ ಬಳಕೆಯಾಯಿತು.
ತಕ್ಷಣವೇ ಶಾಸಕ ಬಸವರಾಜ ಮತ್ತಿಮಡು ಮಧ್ಯ ಪ್ರವೇಶಿಸಿ ಸಭೆಯಲ್ಲಿ ಸನ್ನಡತೆಯಿಂದ ನಡೆದುಕೊಳ್ಳಿ. ಜವಾಬ್ದಾರಿ ಸ್ಥಾನದಲ್ಲಿರುವ ತಾವುಗಳು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇಲ್ಲಿ ಅಧಿಕಾರಿಗಳು, ನಗರಸಭೆಯ ಸದಸ್ಯರು, ಮಾಧ್ಯಮದವರು ಇದ್ದಾರೆ ಎಂದು ಅರಿತುಕೊಳ್ಳಿ. ನಿಮ್ಮ ಸಮಸ್ಯೆ ಏನೆ ಇದ್ದರೂ ನಮ್ಮ ಮುಂದೆ ಹೇಳಿ.ಅದನ್ನು ಬಿಟ್ಟು ಒಬ್ಬರಿಗೊಬ್ಬರೂ ಮಾತನಾಡುವುದನ್ನು ನಿಲ್ಲಿಸಿ ಎಂದು ಹೇಳಿ ಸಮಾಧಾನಪಡಿಸಿದರು.
ಸದಸ್ಯ ಡಾ.ಅಹ್ಮದ್ ಪಟೇಲ್ ಮಾತನಾಡಿ, ನಗರದ ಅಭಿವೃದ್ಧಿಯಾಗಬೇಕಾದರೆ ತೆರಿಗೆ ಸಂಗ್ರಹ ಮುಖ್ಯ.ಆದರೆ ಸರಿಯಾಗಿ ತೆರಿಗೆ ಸಂಗ್ರಹವಾಗುತ್ತಿಲ್ಲ.ಅಲ್ಲದೇ ಕೋವಿಡ್ ಸಂದರ್ಭದ ಒಂದು ವರ್ಷ ತೆರಿಗೆ ವಿನಾಯಿತಿ ನೀಡಿ, ಉಳಿದ ತೆರಿಗೆ ವಸೂಲಾತಿ ಮಾಡಬೇಕೆಂದು ಒತ್ತಾಯಿಸಿದರು. ನಗರೋತ್ಥಾನ ೩ನೇ ಹಂತದ ಯೋಜನೆಯಲ್ಲಿ ಕಳಪೆ ಮಟ್ಟದ ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರನ್ನು ತೆಗೆದು ಹಾಕಿ.ಯಾವುದೇ ಮುಲಾಜು ಕಾಯ್ದುಕೊಳ್ಳದೇ ಕ್ರಮ ಕೈಗೊಳ್ಳಿ ಎಂದು ಶಾಸಕರು ಪೌರಾಯುಕ್ತರಿಗೆ ತಿಳಿಸಿದರು.
ಸದಸ್ಯ ಶರಣು ವಸ್ತ್ರದ್ ಹಾಗೂ ಡಾ.ಅಹ್ಮದ್ ಪಟೇಲ್ ಮಾತನಾಡಿ, ನಗರದ ಮುಖ್ಯ ರಸ್ತೆಯಲ್ಲಿ ಮೂತ್ರಾಲಯವಿಲ್ಲದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಅದರಲ್ಲೂ ಮಹಿಳೆಯರಿಗೆ ತೊಂದರೆ ಅಷ್ಟಿಟಲ್ಲ.ನಿಂತ ವಾಹನದ ಮರೆಯಾಗಿ ವಿಸರ್ಜನೆ ಮಾಡುವಂತ ಪರಿಸ್ಥಿತಿ ಇದೆ.ಕೂಡಲೇ ಮೂತ್ರಾಲಯ ನಿರ್ಮಿಸಬೇಕು.ಉದ್ಯಾನವನ ನಿರ್ಮಾಣ ಮಾಡಬೇಕು.ಒತ್ತುವರಿ ಮಾಡಿಕೊಂಡ ಹಾಗೂ ನಗರಸಭೆಯ ಖಾಲಿ ಜಾಗಗಳನ್ನು ವಶಕ್ಕೆ ಪಡೆದು ಬೇಲಿ ಹಾಕಬೇಕು. ನಾಯಿ ಹಾಗೂ ಹಂದಿಗಳ ಕಾಟವನ್ನು ನಿಯಂತ್ರಣ ಮಾಡಬೇಕೆಂದು ಒತ್ತಾಯಿಸಿದರು.ಅದಕ್ಕೆ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಅವರು ಮೂತ್ರಾಲಯ ಮಾಡಲು ಮುಖ್ಯ ರಸ್ತೆಯಲ್ಲಿ ಯಾವುದೇ ಸ್ಥಳವಿಲ್ಲದ ಕಾರಣ ನಿರ್ಮಿಸಲು ಆಗುತ್ತಿಲ್ಲ ಎಂದರು.ಶಾಸಕರು ಯಾವುದಾದರೂ ಸ್ಥಳ ಗುರುತಿಸಿ.ಇಲ್ಲದಿದ್ದರೇ ಚರಂಡಿ ಮೇಲ್ಭಾಗದಲ್ಲಿ ನಿರ್ಮಿಸಿ ತೊಂದರೆಯನ್ನು ತಪ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆಯ ಅಧ್ಯಕ್ಷೆ ಅಂಜಲಿ ಕಂಬಾನೂರ ಅವರು ನಾಯಿಗಳ ಹಾಗೂ ಹಂದಿಗಳ ಹಿಡಿಯುವ ಕಾರ್ಯಾಚರಣೆ ಸೋಮವಾರದಿಂದ ನಡೆಯಲಿದೆ ಎಂದರು.
ಸದಸ್ಯೆ ರಾಣಿ ಪವಾರ, ಸಾಬೇರಾಬೇಗಂ ಮಾತನಾಡಿ ನಗರದ ಸ್ವಚ್ಛತೆ ಕಾಪಾಡುವ ನಗರಸಭೆಯ ಅಧಿಕಾರಿಗಳು ನಗರಸಭೆಯ ಶೌಚಾಲಯ ಸ್ವಚ್ಛತೆಯಿಂದ ಇಟ್ಟುಕೊಳ್ಳಲು ಆಗುತ್ತಿಲ್ಲ.ಗಬ್ಬೆದ್ದು ನಾರುತ್ತಿದೆ. ಬಾಗಿಲು ಮುರಿದಿವೆ.ಕಿಟಕಿಗಳಿಲ್ಲ. ಮಹಿಳೆಯರು ಹೇಗೆ ಹೋಗಬೇಕು.ಮತ್ತೆ ಸ್ವಚ್ಛತೆ ಮಾಡಿದ್ದೆವೆ ಎಂದು ಸಾವಿರಾರು ರೂಪಾಯಿ ಖರ್ಚು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯ ಸದಸ್ಯ ಸೂರ್ಯಕಾಂತ ಕೋಬಾಳ ಮಾತನಾಡಿ,ಕಟ್ಟಡ ತೆರಿಗೆ ಕಡಿಮೆ ಮಾಡಲು, ಬಸವೇಶ್ವರ ಮೂರ್ತಿ ನಿರ್ಮಾಣ ಹಾಗೂ ಬಸವ ಭವನಕ್ಕೆ ನಿವೇಶನ ಒದಗಿಸುವ ಕುರಿತು ವಿಷಯ ಎಲ್ಲಿಗೆ ಬಂತು ಕೇಳಿದರು.ಅದಕ್ಕೆ ಪೌರಾಯುಕ್ತರು ಈಗಾಗಲೇ ರಾಜಸ್ಥಾನ ಹಾಗೂ ಪೂನಾ ಗುತ್ತಿಗೆದಾರ ಟೆಂಡರ್‌ನಲ್ಲಿ ಭಾಗವಹಿಸಿದ್ದಾರೆ. ಟೆಂಡರ್ ಪಡೆದ ಮೇಲೆ ಸದ್ಯದಲ್ಲೆ ಮೂರ್ತಿ ವೀಕ್ಷಿಸಲು ನಿಯೋಗ ಕರೆದುಕೊಂಡು ಹೋಗಲಾಗುವುದು.ಬಸವ ಭವನಕ್ಕೆ ಸಿಎ ನಿವೇಶನ ಗುರುತಿಸಲಾಗಿದೆ ಎಂದರು.
ನಾಗರಾಜ ಕರಣಿಕ್ ಮಾತನಾಡಿ, ವಾರ್ಡ ನಂ೨೦ ರಲ್ಲಿ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿದರಲ್ಲದೇ, ಗುತ್ತಿಗೆದಾರನ ಬಿಲ್ ಪಾವತಿಸುವ ಮುನ್ನ ಸದಸ್ಯರ ಗಮನಕ್ಕೆ ತರದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ವಾರ್ಡ ನಂ.೧ರಲ್ಲಿ ನೀರಿನ ಸಮಸ್ಯೆ ಹಾಗೂ ಶೌಚಾಲಯ ನಿರ್ಮಾಣವಾದರೂ ಉದ್ಘಾಟನೆಯಾಗಿಲ್ಲ ಎಂದು ಸದಸ್ಯೆಶ್ವೇತಾ ನಾಟೇಕಾರ ದೂರಿಸದರೇ, ವಾರ್ಡ ನಂ.೨ರಲ್ಲಿ ಶುದ್ಧ ಕುಡಿಯುವ ನೀರೆ ಬರಲ್ಲ ಎಂದು ಮಲ್ಲಿಕಾರ್ಜುನ ಹೇಳಿದರು.ವಾರ್ಡ ೮ರಲ್ಲಿ ಅಂಗನವಾಡಿ ಕೇದ್ರಕ್ಕೆ ಜಾಗ ನೀಡಿ ಕಟ್ಟಡ ನಿರ್ಮಾಣ ಮಾಡಬೇಕು ಎಂದು ತಿಮ್ಮ ಬಾಯಿ ಕುಸಾಳೆ, ವಾರ್ಡ ನಂ.೩ರಲ್ಲಿ ರಸ್ತೆ ನಿರ್ಮಾಣ ಮಾಡಬೇಕು.ವಾರ್ಡ ನಂ.೨೩ರಲ್ಲಿ ಚರಂಡಿ ನಿರ್ಮಾಣ ಮಾಡಬೇಕೆಂದು ಅಹ್ಮದ್ ತಿಳಿಸಿದರು.
ಇದೇ ಸಂದರ್ಭದಲ್ಲಿ ೨೦೨೧-೨೨ನೇ ಸಾಲಿನ ೧೫ನೇ ಹಣಕಾಸು ಯೋಜನೆಯ ಹಂಚಿಕೆಯಾದ ೨೫೮ ಲಕ್ಷ ರೂ.ಗಳ ಕ್ರೀಯಾಯೋಜನೆ ಹಾಗೂ ಎಸ್‌ಎಫ್‌ಸಿ ಅನುದಾನದ ೯೬ ಲಕ್ಷಗಳ ಕ್ರೀಯಾಯೋಜನೆಗೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಸುರೇಶ ವರ್ಮಾ, ಉಪಾಧ್ಯಕ್ಷೆ ಸಲೀಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ಎಇಇ ಪುರುಷೋತ್ತಮ,ಎಇಇ ಮುಜಾಮಿಲ್, ಶಂಕರ ಇಂಜಗನೇರಿ ಸೇರಿದಂತೆ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…