ಆಳಂದ: ತಾಲೂಕಿನ ನಿಂಬರ್ಗಾ ಪೊಲೀಸರು ರೌಡಿ ಪರೇಡ್ ನಡೆಸಿದರು. ಆಳಂದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ನಡೆದ ರೌಡಿ ಪರೇಡ್ ನಲ್ಲಿ ಅನೇಕ ರೌಡಿ ಶೀಟರ್ ಗಳು ಹಾಜರಾಗಿದ್ದರು. ಉತ್ತಮ ನಾಗರೀಕರಾಗಿ ಬದಲಾಗಿ ಇಲ್ಲದಿದ್ರೆ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವದಾಗಿ ಡಿವೈಎಸ್ಪಿ ಸಾಲಿ ರೌಡಿಗಳಿಗೆ ಖಡಕ್ ಎಚ್ಚರಿಕೆ ಸಂದೇಶವನ್ನು ನೀಡಿದರು.
ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಎಲೇಕ್ಷನ್ ಮತ್ತು ಗಣೇಶ ಚತುರ್ಥಿ ಗಮನದಲ್ಲಿಟ್ಟುಕೊಂಡು ರೌಡಿ ಪರೇಡ್ ನಡೆಸಲಾಯಿತು. ಈ ವೇಳೆ ರೌಡಿಗಳಿಗೆ ಬುದ್ದಿವಾದ ಹೇಳಿದ ಡಿವೈಎಸ್ಪಿ ಸಾಲಿ, ಸಮಾಜಘಾತುಕ ಕೇಲಸ ಮಾಡುವದಾಗಲಿ, ಸಮಾಜದಲ್ಲಿ ಭಯ ಹುಟ್ಟಿಸುವ ಕೆಲಸವಾಗಲಿ ಮಾಡುವಂತಿಲ್ಲ, ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಭಯಹುಟ್ಟಿಸುವದು. ದರ್ಪ ತೋರುವದು ಮಾಡಿದರೆ ಸರಿ ಇರುವದಿಲ್ಲ, ಕಾನೂನು ಬಾಹಿರ ದಂದೆಗಳನ್ನು ಬಿಟ್ಟು ಮೊದಲು ಉತ್ತಮ ನಾಗರೀಕರಾಗಿ ಬದಲಾಗಿ, ನೀವು ಯಾವುದೇ ಪಕ್ಷದ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದರೆ ಮತದಾರರಿಗೆ ಮತದಾನದ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಿ ಅದನ್ನು ಬಿಟ್ಟು ರೌಡಿ ಎಂದು ಮಾರಕ ಕೆಲಸ ಮಾಡಿದರೆ ಪರಿಣಾಮ ನೆಟ್ಟಗಿರುವದಿಲ್ಲ ಎಂದು ಖಡಕ ವಾನಿಂಗ್ ಮಾಡಿದರು.
ಇದೆವೇಳೆ ರೌಡಿಗಳಿಗೆ ಬುದ್ದಿವಾದ ಹೇಳಿದ ನಿಂಬರ್ಗಾ ಪಿಎ??? ಸುವಣ್ಣಾ ಮಲಶೇಟ್ಟಿ, ರೌಡಿ ಶೀಟರ್ ಆಗಿರುವದು ಸಮಾಜಕ್ಕೆ ದೊಡ್ಡ ಕಳಂಕ, ಎಲ್ಲಾ ಕೆಟ್ಟ ಕೆಲಸ ಬಿಟ್ಟು ಸಮಾಜದಲ್ಲಿ ಪ್ರತಿಯೊಬ್ಬರ ಜೊತೆ ಅನ್ಯುನ್ಯವಾಗಿ ಎಲ್ಲರೊಂದಿಗೆ ಬೆರೆತು ನಡೆಯಬೇಕು. ನೀವು ಉತ್ತಮ ನಾಗರೀಕರಾಗಿ ಬದಲಾಗಿರುವದು ಮನದಟ್ಟಾದರೆ ನಿಮ್ಮ ಮೇಲಿನ ರೌಡಿಶೀಟರ್ ಪಟ್ಟಿಯಿಂದ ತೆಗೆದುಹಾಕಲಾಗುವದು ಎಂದರು. ಯಾವುದೋ ಕೆಟ್ಟ ಘಳಿಗೆಯಲ್ಲಿ ನೀವು ಮಾಡಿದ ತಪ್ಪಿನಿಂದ ರೌಡಿಶೀಟರ್ ಗಳ ಪಟ್ಟಿಯಲ್ಲಿರಬಹುದು, ಸಮಾಜದಲ್ಲಿ ನಿಮ್ಮಗೂ ಉತ್ತಮವಾದ ಗೌರವ ದೋರಕಬೇಕೆಂದರೆ ನಿಮ್ಮಗೆ ಅಂಟಿರುವಂತ ರೌಡಿ ಎಂಬ ಪಟ್ಟ ಕಳಚಬೇಕು. ಅದಕ್ಕಾಗಿ ಒಳ್ಳೆಯವರಾಗಿ ಬದುಕಿ ಅಂದಾಗ ನಿಮ್ಮಗೂ ನಿಮ್ಮ ಕುಟುಂಬಕ್ಕೂ ಜೊತೆಗೆ ಸಮಾಜಕ್ಕೂ ಹೀತ ಎಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಶ್ರೀಕಾಂತ ಸುತ್ತಾರ, ಭೀಮಾಶಂಕರ ಉಡಗಿ, ಶರಣಮ್ಮಾ ಸಿಂಗೆ, ರಮೇಶ ಯಲ್ಲದೆ, ಯುನುಷ ಕಸ್ಬ, ದೇವಾನಂದ ಪಾಟೀಲ, ಪ್ರಶಾಂತ ಪದ್ದಾರ ಮತ್ತಿತರರು ಇದ್ದರು.