ಬಿಸಿ ಬಿಸಿ ಸುದ್ದಿ

ಕಲಬುರಗಿಯಲ್ಲಿ ತಪ್ಪಸ್ಸು ಸ್ಟಡಿ ಸೆಂಟರ್ ಆರಂಭ

ಕಲಬುರಗಿ: ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳುವ ಆಸಕ್ತರಿಗೆ ಸ್ವಡಿ ಸೆಂಟರ್‌ಗಳ ಅವಶ್ಯಕತೆಯಿದೆ. ಈ ಅವಶ್ಯಕತೆಯನ್ನು ಇಡೇರಿಸಲು ತಪ್ಪಸ್ಸು ಸ್ಟಡಿ ಸೆಂಟರ್ ಆರಂಭಗೊಂಡಿದೆ. ಹೈದ್ರಾಬಾದ್ ಸ್ಟಡಿ ಸೆಂಟರ್ ಮಾದರಿಯಲ್ಲಿಯೆ ಈ ಗ್ರಂಥಾಲಯ ಕಂಗೊಳಿಸುತ್ತಿದೆ ಎಂದು ಕಲಬುರಗಿಯ ಕಾನೂನು ಮತ್ತು ಸುವ್ಯವಸ್ಥೆಯ ಪೋಲಿಸ್ ಉಪ ಆಯುಕ್ತರಾದ ಅದ್ದೂರು ಶ್ರೀನಿವಾಸಲು ಅಭಿಪ್ರಾಯಪಟ್ಟರು.

ನಗರದ ಜಾಜಿ ಸಂಕೀರ್ಣದಲ್ಲಿ ಮಂಗಳವಾರ ನಡೆದ ತಪಸ್ಸು ಸ್ಟಡಿ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ಹುದ್ದೆಗಳಿಗೆ ಸತತ ಅಭ್ಯಾಸದ ಅವಶ್ಯಕತೆ ಇರುತ್ತದೆ. ಹೀಗಾಗಿ ಸ್ವಟಿ ಸೆಂಟರ್‌ಗಳ ಅವಶ್ಯಕತೆಯಿದೆ. ಇಲ್ಲಿನ ವಾತಾವರಣ ಪತ್ರಿಯೊಬ್ಬರನ್ನು ಅಭ್ಯಾಸದಲ್ಲಿ ತೊಡಗಿಸುತ್ತದೆ ಎಂದು ಹೇಳುತಾ ಅವರ ಅಭ್ಯಾಸದ ದಿನಗಳನ್ನು ಸ್ಮರಿಸಿಕೊಂಡರು.

ಕಮಲಾಪೂರ ತಹಶೀಲ್ದಾರ ಅಂಜುಮ್ ತಬಸ್ಸುಮ್ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ತಾಳ್ಮೆಬೇಕು. ತಾಳ್ಮೆಯಿದ್ದಾಗ ಮಾತ್ರ ಏನೆಲ್ಲ ಸಾಧಿಸಬಹುದು. ತಮ್ಮ ವೈವಾಹಿಕ ಜೀವನದ ಜೊತೆಗೆ, ಸತತ ಅಭ್ಯಾಸ ಮಾಡಿ ತಮ್ಮ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹುದ್ದೆ ಪಡೆದುಕೊಂಡ ಬಗ್ಗೆ ಸ್ಮರಿಸಿಕೊಂಡರು. ಈ ಭಾಗದ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಸ್ಟಡಿ ಸೆಂಟರ್ ಅವಶ್ಯಕತೆಯಿತು. ಇದನ್ನು ಆರಂಭಿಸುವುದರ ಮೂಲಕ ಓದುಗರಿಗೆ ಸಹಕಾರಿಯಾಗಿದ್ದಾರೆ ಎಂದರು.

ರಂಗಾಯಣದ ನಿರ್ದೇಶಕರಾದ ಪ್ರಭಾಕರ ಜೋಶಿ ಮಾತನಾಡಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವುದರ ಜೊತೆಗ, ಶಿಕ್ಷಣ, ಕಲೆ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವ ಈ ಯುವಕರ ಕೆಲಸ ಮೆಚ್ಚುವಂತಹದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಪಸ್ಸು ಸ್ಟಡಿ ಸೆಂಟರ್ ಸಂಸ್ಥಾಪಕ ಪ್ರೊ. ನವೀನಕುಮಾರ ಮಾತನಾಡಿ, ಗುರುದೇವ ಐಎಎಸ್ ಅಕಾಡೆಮಿಯಿಂದ ಪ್ರತಿ ಭಾನುವಾರ ಸ್ಪರ್ಧಾ ಪರೀಕ್ಷೆ ನಡೆಸಲಾಗುತ್ತದೆ ಎಂದರು. ಕಾರ್ಯಕ್ರಮವನ್ನು ಆರ್.ಜೆ.ಮಂಜು ಹಿರೋಳಿಕರ್ ನಿರ್ವಹಿಸಿದರು. ನಾಲ್ಕುಚಕ್ರ ಚಾರಿಟೇಬಲ್ ಟ್ರಸ್ಟ್ ಕಲಬುರಗಿ, ವಿಶ್ವರಂಗ ಕಲಬುರಗಿ, ಸಂಚಲನಾ ಮೈಸೂರು ಸಹಕಾರ ನೀಡಿದವು.

emedialine

Recent Posts

ಪಾಮನಕಲ್ಲೂರಿನ ಸುಡುಗಾಡಿಗೆ ದಾರಿ ಯಾವುದಯ್ಯ!?

ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಊರ ಮುಂದೆ ಇರುವ ಸ್ಮಶಾನ (ರುದ್ರಭೂಮಿ) ಸರ್ಕಾರಿ ಜಾಲಿಗಿಡಗಳು ಬೆಳೆದು…

10 hours ago

ಡಿ.ಕೆ. ಸೌಹಾರ್ದ ಸಹಕಾರಿ ನಿಯಮಿತದ ೩ನೇ ಸಾಮಾನ್ಯ ಸಭೆ ಆಗಸ್ಟ್ 15 ರಂದು

ಕಲಬುರಗಿ: ಡಿ.ಕೆ. ಸೌಹಾರ್ದ ಸಹಕಾರಿ ನಿಯಮಿತದ ೨೦೨೩-೨೪ನೇ ಸಾಲಿನ ೩ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಆಗಸ್ಟ್ ೧೫ ರಂದು ಗುರುವಾರ…

11 hours ago

ಕಾನೂನಿನ ಬಗ್ಗೆ ಅರಿವಿದ್ದಲ್ಲಿ ಮುಂಬರುವ ದಿನಗಳು ಉತ್ತಮ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೊರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ವ್ಯಾಸಂಗ ಮಾಡುತ್ತಿರುವ…

12 hours ago

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ

ಕಲಬುರಗಿ: ನಗರದ ಜಿಲ್ಲಾ ಸರಕಾರಿ ಜಿಮ್ಸ್ ಆಸ್ಪತ್ರೆ ಮಹಿಳಾ ವಾರ್ಡಿನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ ಅಂಗವಾಗಿ ಜಿಮ್ಸ್ ಆಸ್ಪತ್ರೆ ಹಾಗೂ…

12 hours ago

ಅನುಸೂಚಿತ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ಸಮರ್ಪಕವಾಗಿ ಬಳಸಿ

ಕಲಬುರಗಿ: ಗ್ರಾಮೀಣಾ ಭಾಗದಲ್ಲಿ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮ 1993 ರ ಪ್ರಕರಣ 61 ಎ ಪ್ರಕಾರ…

12 hours ago

ವಿದ್ಯಾರ್ಥಿಗಳ ಸ್ವಾಗತ ಸಮಾರಂಭ; ಸಾಂಸ್ಕøತಿಕ ಉತ್ಸವ

ಕಲಬುರಗಿ: ಪ್ರತಿಯೊಂದು ಮಗುವಿನಲ್ಲೂ ವೈಜ್ಞಾನಿಕ ಮನೋಭಾವ ಇದ್ದೇ ಇರುತ್ತದೆ. ಅದು ಪ್ರಶ್ನೆ ಮಾಡುವುದರ ಮೂಲಕ ಗುರುತಿಸುತ್ತದೆ. ಸಮಾಜದಲ್ಲಿ ಕಂಡು ಬರುವ…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420