ಆಳಂದ: ಕೃಷಿ ಪಂಪಸ್‍ಸೆಟ್‍ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಮುಂದಾಗಿರುವ ಕ್ರಮವನ್ನು ಕೂಡಲೇ ಕೈಬಿಡದೆ ಹೋದಲ್ಲಿ ರಾಜ್ಯದಾದ್ಯಂತ ರೈತರ ಹೋರಾಟ ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ನಾಗೀಂದ್ರಪ್ಪ ಥಂಬೆ ಅವರು ಎಚ್ಚರಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅತಿ ವೃಷ್ಟಿ ಅನಾವೃಷ್ಟಿಯಿಂದ ಸರ್ಪಕವಾಗಿ ಬೆಳೆ ಬೆಳೆಯಲಾಗದೆ, ಬೆಳೆದರು ಸಹ ಬೆಲೆ ದೊರೆಯದೆ ನಷ್ಟದ ನಡುವೆ ಕೋವಿಡ್ ಭೀತಿ ಲಾಕ್‍ಡೌನಲ್ಲಿ ಬೆಳೆದ ಧಾನ್ಯಗಳ ಸೂಕ್ತ ಬೆಲೆಗೆ ಮಾರಾಟವಾಗದೆ, ಕೃಷಿ ಭಿಕ್ಕಟ್ಟಿನಲ್ಲಿರುವ ರೈತ ಸಮೂದಾಯಕ್ಕೆ ಪಂಪಸೆಟ್‍ಗಳಿಗೆ ವಿದ್ಯುತ್ ಮೀಟರ್ ಅಳವಡಿಸಿ ಬಿಲ್ ವಸೂಲಿಗೆ ಮುಂದಾಗಿರುವ ಕ್ರಮ ರೈತ ವಿರೋಧಿ ದೋರಣೆ ಇದಾಗಿದೆ ಎಂದು ಆರೋಪಿಸಿದರು.
ರೈತರು ಬೆಳೆದ ಉದ್ದು, ಹೆಸರು, ತೊಗರಿ ಸೇರಿ ಇನ್ನೂಳದ ಧಾನ್ಯಗಳಿಗೆ ಬೆಂಬಲ ಬೆಲೆ ನಿಗಧಿಪಡಿಸಬೇಕು.
ಪಂಪಸೆಟ್‍ಗಳಿಗೆ ಮೀಟರ್ ಅಳವಡಿಸುವಂತೆ ನೀತಿಗಳನ್ನು ಕೈಬಿಟ್ಟು ರೈತರಿಗೆ ಅನುಕೂಲಕರ ಯೋಜನೆಗಳು ಜಾರಿಗೆ ತಂದು ಕೃಷಿಯನ್ನು ಉಳಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಒತ್ತಾಯಿಸಿದರು.
ಜುಲೈ ತಿಂಗಳಲ್ಲಿ ತಾಲೂಕಿನ ಎಲ್ಲಡೆ ಸತತವಾಗಿ ಸುರಿದ ಮಳೆಯಿಂದ ಮುಂಗಾರಿನ ಉದ್ದು, ಹೆಸರು ತೊಗರಿ ಬೆಳೆ ಹಾನಿಗಿಯಾಗಿ ರೈತರಿಗೆ ತೊಂದರೆ ಆಗಿದೆ.
ಹಾಳಾದ ಬೆಳೆಯ ಕುರಿತು ಅಧಿಕಾರಿಗಳ ಮೂಲಕ ಜಂಟಿ ಸರ್ವೆ ಕೈಗೊಂಡು ಕೂಡಲೇ ಪರಿಹಾರ ಒದಗಿಸಿ ಹಿಂಗಾರು ಹಂಗಾಮಿನ ಬಿತ್ತನೆಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…