ಬಿಸಿ ಬಿಸಿ ಸುದ್ದಿ

ಕಾಂಗ್ರೆಸ್ ಪಕ್ಷ ದುರ್ಬಲ ವರ್ಗದವರ ಪರ: ಶಾಸಕರಾದ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ತತ್ವ ಹಾಗೂ ಸಿದ್ದಾಂತಗಳು ತುಳಿಕೊಳ್ಳಗಾದ ಸಮಾಜ ಹಾಗೂ ದುರ್ಬಲ ವರ್ಗದವರ ಪರವಾಗಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ‌ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಜಿಲ್ಲಾ‌ಕಾಂಗ್ರೆಸ್ ಕಚೇರಿಯಲ್ಲಿ ಕಳೆದ ಬಾರಿಯ ಚುನಾವಣೆಯ ಕಲಬುರಗಿ ಉತ್ತರ ವಿಧಾನಸಭೆಯ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಹಾಜ್ ಬಾಬಾ ಅವರನ್ನು ಪಕ್ಷಕ್ಕೆ‌ ಸೇರ್ಪಡೆ ಮಾಡಿಕೊಂಡ ನಂತರ ಅವರು ಮಾತನಾಡುತ್ತಿದ್ದರು.

ನಮ್ಮ ಹೋರಾಟ ಕೇವಲ ಕಲಬುರಗಿ ಮಹಾನಗರ ಪಾಲಿಕೆ ಮಾತ್ರ ಸೀಮಿತವಾಗಬಾರದು. ಇಂದು ದೇಶಕ್ಕೆ‌ ಸ್ವಾತಂತ್ರ್ಯ ಸಿಕ್ಕ ದಿನ ಆದರೆ, ಕಳೆದ ಎಂಟು ವರ್ಷದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ನಿಜವಾಗಿಯೂ‌ ಉಳಿದಿದೆಯಾ ? ಎನ್ನುವುದು ಪ್ರಶ್ನೆಯಾಗಿದೆ. ಧಾರ್ಮಿಕ ಹಕ್ಕಿಗೆ ಧಕ್ಕೆಯಾಗುತ್ತಿದೆ. ವಾಕ್ ಸ್ವಾತಂತ್ರ್ಯಕ್ಕೆ ಹಾನಿಯಾಗುತ್ತಿದೆ. ಮೋದಿ ಅಧಿಕಾರಕ್ಕೆ ಬಂದ‌‌ನಂತರ 23 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದರವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ದೇಶದ ಸ್ವಾತಂತ್ರ್ಯಕ್ಕೆ ಬೆವರು ಹರಿಸದವರು ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ ಹರಿಸಿದ ನಮ್ಮ ದೇಶಭಕ್ತಿಯ ಕುರಿತು ಮಾತನಾಡುತ್ತಾರೆ ಎಂದರು.

ಕಲಬುರಗಿಯ, ರಾಜ್ಯದ ಹಾಗೂ ದೇಶದ ಅಭಿವೃದ್ದಿಗೆ ನಮ್ಮೆಲ್ಲ‌ರ ಹೊಣೆಗಾರಿಕೆ ಇದೆ. ಇಂದು ವಹಾಜ್ ಬಾಬಾ ಪಕ್ಷ ಸೇರ್ಪಡೆಗೊಂಡಿದ್ದು ಕೇವಲ ವ್ಯಕ್ತಿಯ ಸೇರ್ಪಡೆಯಲ್ಲ ಬದಲಿಗೆ ಜಾತ್ಯಾತೀತ ಪಕ್ಷಗಳು ಕೋಮುವಾದಿ ಪಕ್ಷದ ವಿರುದ್ದ ನಡೆಯುವ ಹೋರಾಟಕ್ಕೆ ಕೈ‌ಜೋಡಿಸಿದಂತೆ ಎಂದರು.

ಎಂ‌ ಐ ಎಂ ಪಕ್ಷವನ್ನು ಬಿಜೆಪಿಯ ‘ ಬಿ ‘ ಟೀಂ ಎಂದು ಕರೆದ ಶಾಸಕರು, ಕಾಂಗ್ರೆಸ್ ಪಕ್ಷದ ಓಟು ಒಡೆಯುವ ತಂತ್ರಗಾರಿಕೆ ಬಳಸಿ ಬಿಜೆಪಿ ಪಕ್ಷ ಎಂ ಐ ಎಂ ಪಕ್ಷವನ್ನು ಬಳಸಿಕೊಳ್ಳುತ್ತಿದೆ. ಮತ್ತೊಂದು ಕಡೆ ಬಿಜೆಪಿ‌ಪಕ್ಷದವರು ಸಂವಿಧಾನದ ಬದಲಾವಣೆಗೆ ಹವಣಿಸುತ್ತಿದೆ. ಇದನ್ನು ಒಗ್ಗಟ್ಟಾಗಿ ಎದುರಿಸಬೇಕು. ಕಾಂಗ್ರೆಸ್ ಪಕ್ಷ ಸೋತರೆ ಸಂವಿಧಾನಕ್ಕೆ ಆತಂಕ ಎದುರಾಗುತ್ತದೆ. ಇದನ್ನು ನೀವೆಲ್ಲ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ನೀವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿದರೆ, ಎಂ ಐ‌ಎಂ, ಜೆಡಿಎಸ್, ಬಿಜೆಪಿ‌ ಸೇರಿದಂತೆ ಯಾವ ಪಕ್ಷವೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಕಾಂಗ್ರೆಸ್ ಪಕ್ಷದ‌ ಪರವಾಗಿದ್ದಾರೆ. ಈ ಒಗ್ಗಟ್ಟನ್ನು ಒಡೆಯಲಾಗದು ಎಂದು ಆತ್ಮವಿಶ್ವಾಸದಿಂದ ನುಡಿದರು. ಈ ಒಗ್ಗಟ್ಟು ಕೇವಲ ಕಲಬುರಗಿ ಮಾತ್ರ ಸೀಮಿತವಾಗಿರದೆ ದೇಶದವರೆಗೆ ವ್ಯಾಪಕವಾಗಿ ವಿಸ್ತಾರಗೊಳ್ಳಬೇಕು ಎಂದು ಕರೆ‌ನೀಡಿದರು.

ಮಾಜಿ ಸಚಿವರಾದ ಡಾ ಶರಣ ಪ್ರಕಾಶ್ ಪಾಟೀಲ್ ಮಾತನಾಡಿ ಕೋಮುವಾದಿ ಬಿಜೆಪಿ ಪಕ್ಷ ಧರ್ಮ ಧರ್ಮಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷ‌ ಎಲ್ಲ ಧರ್ಮದ ಜನರನ್ನು ಬೆಸೆಯುವ ಕೆಲಸ ಮಾಡಿದರೆ‌ ಬಿಜೆಪಿ ಪಕ್ಷ ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಜಾತ್ಯಾತೀತ ತತ್ವದ ಹಾಗೂ ನಂಬಿಕೆಯ ಮತಗಳನ್ನು ವಿಭಾಗಿಸುವ ಉದ್ದೇಶದಿಂದ ಎಂ ಐ ಎಂ ಪಕ್ಷವನ್ನು ಬಿಜೆಪಿ ಪ್ರೋತ್ಸಾಹಿಸುತ್ತಿದೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಖಮರುಲ್ ಇಸ್ಲಾಂ ಅವರ ಕಾಲದಿಂದಲೂ ಕಲಬುರಗಿಯ ಜನರು ಒಂದೇ ಎನ್ನುವ ಭಾವನೆಯಿಂದ ಜೀವನ‌ ನಡೆಸುತ್ತಿದ್ದಾರೆ ಎಂದರು.

ಅಲ್ಪಸಂಖ್ಯಾತ ಮತಗಳು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ಮುಂಬರುವ ನಗರಪಾಲಿಕೆ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲಿದೆ. ಈ ನಿಟ್ಟಿನಲ್ಲಿ ಪಕ್ಷದ‌ ಕಾರ್ಯಕರ್ತರು ಹಾಗೂ ವಹಾಜ್ ಬಾಬಾ ಅವರ ಅಭಿಮಾನಿಗಳು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಪಕ್ಷಕ್ಕೆ ಸೇರ್ಪಡೆಗೊಂಡ ವಹಾಜ್ ಬಾಬಾ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದೆ. ಈ ಶುಭ ಸಂದರ್ಭದಲ್ಲಿ ನನಗೆ ಈ‌ಪಕ್ಷದಲ್ಲಿ ಕೆಲಸ‌ ಮಾಡುವ ಅವಕಾಶ ನೀಡಿರುವುದಕ್ಕೆ ಪಕ್ಷದ ಎಲ್ಲಾ‌ ನಾಯಕರಿಗೆ ಧನ್ಯವಾದಗಳು ಎಂದರು.

ದೇಶದಲ್ಲಿ ಇಂದು ನಡೆದಿರುವ ವಾತವರಣ ಎದುರಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಬಿಜೆಪಿಯನ್ನು ಗಲ್ಲಿಯಿಂದ ದಿಲ್ಲಿಯವರಿಗೆ ಅಸ್ಥಿತ್ವ‌ ಇಲ್ಲದಂತೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು. ಮುಂಬರುವ ನಗರ ಪಾಲಿಕೆ‌ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ‌ ತರಲು ಎಲ್ಲರೂ ಶ್ರಮಿಸೋಣ ಎಂದು ಕರೆನೀಡಿದರು.

ವೇದಿಕೆಯ ಮೇಲೆ‌ ಜಿಲ್ಲಾಧ್ಯಕ್ಷರಾದ ಜಗದೇವ ಗುತ್ತೇದಾರ, ಶಾಸಕರಾದ ಖನೀಜ್ ಫಾತೀಮಾ, ಮಾಜಿ ಸಚಿವರಾದ ಡಾ ಶರಣಪ್ರಕಾಶ್ ಪಾಟೀಲ್, ಮಾಜಿ ಎಂ ಎಲ್‌ಸಿ ಅಲ್ಲಮಪ್ರಭು ಹಾಗೂ ತಿಪ್ಪಣ್ಣಪ್ಪ ಕಮಕನೂರು, ಪಾಟೀಲ, ವಿಜಯಕುಮಾರ, ಮಜರ್ ಅಲಂ ಹುಸೇನ್, ಆದಿಲ್‌ ಸುಲೇಮಾನ್ , ವಾಹೀದಾ ಅಲಿ, ಬಾಬಾಖಾನ್, ಕೃಷ್ಣಾಜೀ ಕುಲಕರ್ಣಿ ಸೇರಿದಂತೆ ಮತ್ತಿತರಿದ್ದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

31 seconds ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

2 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

7 mins ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

11 mins ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

13 mins ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

34 mins ago