ವಾರಾಣಸಿ ಚುನಾವಣೆ ಕಣದಲ್ಲಿ ಮೋದಿ ವರ್ಸಸ್ ಡುಪ್ಲಿಕೇಟ್ ಮೋದಿ

0
119

ವಾರಾಣಸಿ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಹೆಸರಿನ ಇತರ ಮೂವರು ಅಭ್ಯರ್ಥಿಗಳಿರುವಂತೆಯೇ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತದ್ರೂಪಿಯೋರ್ವರು ವಾರಾಣಸಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ.

2014ರ ಲೋಕಸಭೆ ಚುನಾವಣೆ ಮತ್ತು ಆ ನಂತರ ದೇಶದ ವಿವಿಧೆಡೆ ನಡೆದ ಚುನಾವಣೆಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರಂತೆ ಕಾಣುವ ಅಭಿನಂದನ್ ಪಾಠಕ್ ಬಿಜೆಪಿ ಪರ ಪ್ರಚಾರ ನಡೆಸಿದ್ದರು. ಆದರೆ ಇದೀಗ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರೋಧಿಯಾಗಿರುವ ಅಭಿನಂದನ್ ಪಾಠಕ್, ಪ್ರಧಾನಿ ಮೋದಿ ಪ್ರತಿನಿಧಿಸುವ ಉತ್ತರ ಪ್ರದೇಶದ ವಾರಾಣಸಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

Contact Your\'s Advertisement; 9902492681

ಉತ್ತರ ಪ್ರದೇಶದ ಲಕ್ನೋ ಲೋಕಸಭಾ ಕ್ಷೇತ್ರದಿಂದ ಗೃಹ ಸಚಿವ ರಾಜನಾಥ್ ಸಿಂಗ್ವಿರುದ್ಧ ಸ್ಪರ್ಧಿಸಿರುವ ಅಭಿನಂದನ್ ಪಾಠಕ್, ಇದೀಗ ವಾರಾಣಸಿಯಿಂದಲೂ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಮೋದಿಯಿಂದ ಪ್ರಭಾವಿತ ನಾದ ನಾನು, ಕೇಂದ್ರ ಸರಕಾರದ ಕೆಲವು ನಿರ್ಧಾರಗಳ ಬಗ್ಗೆ ನನ್ನಗೆ ಅಸಹಮತವಿದೆ. ಈ ಕಾರಣ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕಿಳಿದಿದ್ದೇನೆ. ಸಮಸ್ಯೆಗಳನ್ನು ಸಂಸತಿನಲ್ಲಿ ಧ್ವನಿ ಎತ್ತುವುದ್ದಾಗಿ ಮತದಾರರಲ್ಲಿ ವಿಶ್ವಾಸ ವ್ಯಕ್ತಪಡಿಸಿ. ಮತದಾನಕ್ಕೆ ಮನವಿ ಮಾಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here