ಸೊನ್ನಲಿಗೆಯ ಸಿದ್ಧರಾಮರಷ್ಟು ಅಡ್ಡಾಡಿದ ಇನ್ನೊಬ್ಬ ಶರಣರಿಲ್ಲ. ಬಸವಣ್ಣನ ತರುವಾಯ ವಚನ ಚಳವಳಿಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಂಡು ನಾಡಿನಾದ್ಯಂತ ಸಂಚರಿಸಿ ಲಿಂಗಾಯತ-ಬಸವತತ್ವ ಸಾರಿರಬೇಕು. ನಾಡಿನಾದ್ಯಂತ ಸುಮಾರು 100ಕ್ಕೂ ಹೆಚ್ಚು ಇವರ ಹೆಸರಿನ ಸ್ಮಾರಕಗಳು ದೊರೆಯುತ್ತಿದ್ದು, ಮುಖ್ಯವಾದ ಸ್ಮಾರಕ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಕಾಣಬಹುದು.
ಸೊಲ್ಲಾಪುರದ ಕೆರೆಯ ದಂಡೆಯ ಮೇಲಿರುವ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಅವರ ಗದ್ದುಗೆಯಿದ್ದು, ಅಲ್ಲಿನ ಸೊನ್ನಲಾಪುರ ಬಡಾವಣೆಯಲ್ಲಿ ಸಿದ್ಧಾರಮೇಶ್ವರರು ಹುಟ್ಟಿದ ಮನೆಯಲ್ಲಿನ ಜಗುಲಿ ಮೇಲೆ ನಿತ್ಯವೂ ಪೂಜೆ ಮಾಡುಲಾಗುವುದು. ಚಾಮಲಾದೇವಿ ಮನೆತನಕ್ಕೆ ಸಂಬಂಧಿಸಿದವರ ಮನೆಯಲ್ಲಿ ಸಿದ್ಧರಾಮ ಬಳಸಿದ ಬೆತ್ತ ಇರುವುದನ್ನು ಇಂದಿಗೂ ಕಾಣಬಹುದು. ಸಿದ್ಧರಾಮನಿಗೆ ಶಿವ ಭೇಟಿಯಾದ ಎಂದು ಹೇಳಾಗುವ ಸ್ಥಳದಲ್ಲಿ (ಗುರುಬೇಟ) ಶಿವಲಿಂಗವಿದೆ. ಸಿದ್ಧರಾಮ ಕಮರಿಗೆ ಹಾರಿದ ಸ್ಥಳ, ಮಲ್ಲಿಕಾರ್ಜುನ ದೇವಾಲಯ ಇತ್ಯಾದಿ ಸ್ಮಾರಕಗಳಿರುವುದನ್ನು ಕಾಣಬಹುದು.
ಸಿದ್ಧರಾಮೇಶ್ವರ ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ರೇವಣಸಿದ್ಧೇಶ್ವರರ ಸ್ಮಾರಕವಿದೆ. ಗರ್ಭಗುಡಿಯ ಒಳಗಡೆ ಶಿವಲಿಂಗವಿದೆ. ಇದು ಸುಂದರವಾದ ಶಿವಲಿಂಗ. ಕೆರೆಯ ಭಾಗದಲ್ಲಿ ಕೋಟೆಯಿಂದ ತಂದು ಕಟ್ಟಿದ ಪುರಾತನ ಕಾಲದ ಮಲ್ಲಿಕಾರ್ಜುನ ಶಿವಲಿಂಗವಿದೆ. ರಾಘವಾಂಕ ಹೇಳುವಂತೆ ಇಲ್ಲಿ ಲಿಂಗದ ಮೇಲೆ ಲಿಂಗ ಸ್ಥಾಪನೆ ಮಾಡಿರುವುದನ್ನು ಕಾಣುಬಹುದು.ಸಿದ್ಧರಾಮೇಶ್ವರರ ದೇವಸ್ಥಾನದ ಹೊರಗಡೆ ಇರುವ ಗದ್ದುಗೆ ಹಾವಿನಾಳ ಕಲ್ಲಯ್ಯನ ಸಮಾಧಿ ಎಂದು ಹೇಳಲಾಗುತ್ತಿದ್ದು, ಸಿದ್ಧರಾಮನ ದರ್ಶನ ಪಡೆದವರೆಲ್ಲರೂ ಈ ಸಮಾಧಿಗೂ ಕೈ ಮುಗಿಯುತ್ತಾರೆ.
ಕೆರೆಯ ದಂಡೆಯಲ್ಲಿ ಸಿದ್ಧರಾಮೇಶ್ವರ ಕಟ್ಟೆಯಿದ್ದು, ಜಾತ್ರೆಯ ವೇಳೆಯಲ್ಲಿ ಇಲ್ಲಿ ಕೆಲವು ಧಾರ್ಮಿಕ ಆಚರಣೆ ಮಾಡುವುದನ್ನು ಕಾಣಬಹುದು. ಹಂಜಗಿ-ಜೇವೂರ ನಾಗಣಸೂರ, ರೇವೂರ (ಬಿ)ಯಲ್ಲಿ ಸಿದ್ಧರಾಮನ ಸ್ಮಾರಕಗಳಿವೆ. ಶಿವಮೊಗ್ಗ ಕಡೆ ಇರುವ ಕೆರೆಯೊಂದನ್ನು ಸಿದ್ಧರಾಮ ಕಟ್ಟಿಸಿದ್ದು ಎಂದು ಅಲ್ಲಿನ ಅವರ ಒಕ್ಕಲಿನ ಜನ ಈಗಲೂ ಹೇಳುತ್ತಾರೆ.
ತಮ್ಮ ಭಕ್ತರು ಹಾಗೂ ಪುತ್ರ ರುದ್ರಮುನಿಯೊಂದಿಗೆ ಸಂಚಾರಗೈಯುತ್ತ ಸೊಲ್ಲಾಪುರಕ್ಕೆ ಆಗಮಿಸಿದ್ದ ರೇವಣಸಿದ್ಧರು, ಈ ನೆಲದಲ್ಲೊಬ್ಬ ಕಾರಣಿಕ ಪುರುಷನ ಅವತಾರವಾಗಲಿದೆ ಎಂದು ಚಾಮಲಾದೇವಿಗೆ ಹೇಳಿದರು. ಮುದ್ದುಗೌಡನ ಮನೆಗೆ ನಡೆದು ಬಂದು ಸುಗ್ಗಲಾದೇವಿ ಅವರ ಗರ್ಭಕ್ಕೆ ಭಸ್ಮ ಹಚ್ಚುತ್ತ ಸಿದ್ಧರಾಮನ ಆಗಮನದ ಸೂಚನೆ ನೀಡುತ್ತಾರೆ. ಅದರಂತೆ ಹುಟ್ಟಿದ ಮಗನಿಗೆ ಧೂಳ ಮಾಕಾಳ ಎಂದು ಹೆಸರಿಡಲಾಗುತ್ತದೆ. ದನಕಾಯುತ್ತಿದ್ದ ಆ ಹುಡುಗನಿಗೆ ಶಿವ ಪ್ರತ್ಯೇಕ್ಷವಾಗುವುದು, ಶಿವನನ್ನು ಹುಡುಕಿಕೊಂಡು ಯಾತ್ರಿಕರೊಂದಿಗೆ ಶ್ರೀಶೈಲಕ್ಕೆ ತೆರಳುವುದು, ಕರೆ-ಕಟ್ಟೆಗಳನ್ನು ಕಟ್ಟಿಸುವುದು, ನಂತರ ಸಿದ್ಧರಾಮನಾಗಿ ಪರಿವರ್ತನೆಯಾಗುವುದು ಇತ್ಯಾದಿ ಸಮಾಚಾರ ಮೊದಲಿನಿಂದಲೂ ಕೇಳಿದ್ದೇವೆ.
ಮುಗ್ಧ ಸಂಗಯ್ಯ: ಸಿದ್ಧರಾಮೇಶ್ವರ ದೇವಸ್ಥಾನದ ಪೂರ್ವದ ರಸ್ತೆಯ ತುದಿಯಲ್ಲಿ ಬಾಲಸಂಗಯ್ಯನ ಸಮಾಧಿ ಇದೆ. ಬಸವಕಲ್ಯಾಣ ಸಮೀಪದ ನಾರಾಯಣಪುರದ ಚಿಕ್ಕಮಠ ಅವರ ಮನೆಯಲ್ಲಿ ಮುಗ್ಧಸಂಗಯ್ಯ ಬಳಿಸಿದ ಬೆತ್ತ ಹಾಗೂ ಭಸ್ಮ ಕಾಣಬಹುದು. ಶ್ರೀಶೈಲಕ್ಕೆ ತೆರಳಿದ್ದ ಸಿದ್ಧರಾಮನನ್ನು ಮುಗ್ಧಸಂಗಯ್ಯನವರೇ ಸೊಲ್ಲಾಪುರಕ್ಕೆ ಕರೆ ತಂದರು ಎಂದು ಹೇಳಲಾಗುತ್ತಿದ್ದು, ವೀರಶೂರ ರಾಮೇಶ್ವರಲಿಂಗ ಅಂಕಿತವನ್ನಿಟ್ಟುಕೊಂಡು ಇವರು ರಚಿಸಿದ 11 ವಚನಗಳು ದೊರೆತಿವೆ. ಇವರ ಕುರಿತಾಗಿ ವಚನ ಸಂಪುಟದಲ್ಲಿ ಅತ್ಯಲ್ಪ ಮಾಹಿತಿ ದೊರೆಯುತ್ತದೆ. ಹರಿಹರ, ರಾಘವಾಂಕರ ಸಿದ್ಧರಾಮ ಚರಿತ್ರೆಯ ಜೊತೆಗೆ ಮೌಖಿಕ ಮಾಹಿತಿ ಹಿನ್ನೆಲೆಯಲ್ಲಿ ಈ ಸ್ಮಾರಕಗಳನ್ನು ಅಧ್ಯಯನ ಮಾಡಬೇಕಿದೆ.
ಕಲಬುರಗಿ: ನ.25 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಮಲಾಪುರ ಮತ್ತು ಕಲಬುರಗಿ ವತಿಯಿಂದ ಧರ್ಮಾಧಿಕಾರಿ ಡಾ.…
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…