ಬಿಸಿ ಬಿಸಿ ಸುದ್ದಿ

ನಮ್ಮ ಮನಸ್ಸು ನಿರ್ಭಯವಾಗಿರಬೇಕು: ವಚನ ದರ್ಶನ

ನಾವು ಭಕ್ತಿಮಾರ್ಗದಲ್ಲಿ ಮುನ್ನಡೆಯುತ್ತಿರುವಾಗ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಶರಣಮಾರ್ಗ ಬಹು ಕಠಿಣವಿದೆಯೆಂದು ಕೆಲವರು ನಮ್ಮನ್ನು ಅಂಜಿಸುತ್ತಾರೆ. ನಮ್ಮ ಮನಸ್ಸಿನಲ್ಲಿ ಭೀತಿ ನಿರ್ಮಾಣ ಮಾಡುತ್ತಾರೆ. ನಾವು ಬಸವಗುರುವಿನ ಮೇಲೆ ವಚನ ಸಾಹಿತ್ಯದ ಮೇಲೆ ಪರಿಪೂರ್ಣವಾದ ನಂಬಿಕೆಯನ್ನು ಇಟ್ಟಿದ ಮೇಲೆ ಯಾವುದೇ ಸಮಸ್ಯೆಗಳಿಗೆ ಅಂಜುವ ಅವಶ್ಯಕತೆ ಇಲ್ಲ. ನಾವು ಭಯಭೀತರಾದರೆ ನಮ್ಮ ಸಾಧನೆ ಅಪೂರ್ಣವಾಗುತ್ತದೆ.

ಲೌಕಿಕ ಜೀವನದಲ್ಲಿಯೂ ಧೈರ್ಯ ನಿರ್ಭಯತೆ ಬಹಳ ಅವಶ್ಯಕವಾದದ್ದು. ನಾವು ಬದುಕುತ್ತಿದ್ದಾಗ ಅನೇಕರು ನಮ್ಮನ್ನು ನಿಂದಿಸುತ್ತಾರೆ. ಟೀಕಿಸುತ್ತಾರೆ. ನಮ್ಮ ಸಾಧನೆಯಲ್ಲಿ ಅಡೆತಡೆಗಳನ್ನು ಉಂಟು ಮಾಡುತ್ತಾರೆ. ನಾವು ನಿರ್ಭಯವಾಗಿ ಮುನ್ನಡೆದರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಇದ್ದೆ ಇರುತ್ತದೆ. ಅದನ್ನು ನಾವು ಪರಿಶೀಲಿಸಿ ನೋಡಬೇಕು. ಅದಕ್ಕಾಗಿ ನಮಗೆ ವಚನಗಳ ಅಧ್ಯಯನ ಬಹಳ ಅವಶ್ಯವಿದೆ. ನಾವು ನಿರಂತರವಾಗಿ ವಚನ ಅಧ್ಯಯನ ಮಾಡುತ್ತಿದ್ದರೆ ನಮ್ಮ ಸಮಸ್ಯೆಗಳಿಗೆ ತಾನೇ ಪರಿಹಾರ ಸಿಗುತ್ತದೆ.

ಜೀವನದ ಎಂತಹ ಪ್ರಸಂಗದಲ್ಲಿಯೂ ಕಷ್ಟದಲ್ಲಿಯೂ ನಾವು ಧೈರ್ಯಗೇಡದೆ ಭಯಭೀತರಾಗದೆ ಮುನ್ನಡೆಯಬೇಕು ಎಂದು ಅಕ್ಕಮಹಾದೇವಿ ತಾಯಿಯವರು ಹೀಗೆ ಹೇಳುತ್ತಾರೆ. ಹೆದರದಿರು ಮನವೆ, ಬೆದರದಿರು ತನುವೆ ನಿಜವನರಿತು ನಿಶ್ಚಿಂತನಾಗಿರು. ಫಲವಾದರ ಮರನ ಕಲಲ್ಲಿ ಇಡುವುದೊಂದು ಕೋಟಿ ಎಲವದ ಮರನ ಇಡುರೊಬ್ಬರ ಕಾಣೆ ಭಕ್ತಿಯುಳ್ಳವರ ಬೈವರೊಂದು ಕೋಟಿ ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ ನಿಮ್ಮ ಶರಣರ ನುಡಿಯೇ ಎನಗೆ ಗತಿ ಸೋಪಾನ ಚೆನ್ನಮಲ್ಲಿಕಾರ್ಜುನಾ ಸರಿಯಾಗಿ ಕೆಲಸ ಮಾಡುವವರಿಗೆ ಬೈಯುವುದು ನಿಂದಿಸುವುದು ಇದು ಲೋಕರೂಢಿ. ಅದಕ್ಕಾಗಿ ನಾವು ಯಾರೋದೊ ಮಾತನ್ನು ಕೇಳಿ ಧೈರ್ಯಗೇಡಬಾರದು.

ಗೌತಮ ಬುದ್ಧರು ಒಮ್ಮೆ ಅರಣ್ಯ ಮಾರ್ಗವಾಗಿ ಹೋರಡುತ್ತಿದ್ದರು. ಆ ಅರಣ್ಯದಲ್ಲಿ ಒಬ್ಬ ಕ್ರೂರಿ ಅಂಗುಲಿ ಮಾಲಾ ಎಂಬ ಕಳ್ಳನಿದ್ದ. ಬುದ್ದರು ಅರಣ್ಯದಲ್ಲಿ ಪ್ರವೇಶ ಮಾಡುವಾಗ ಜನರು ಅವರನ್ನು ನೀವು ಈ ಅರಣ್ಯ ಮಾರ್ಗವಾಗಿ ಹೋಗಬೇಡಿ ಅಲ್ಲಿ ಅಂಗುಲಿಮಾಲಾ ಎಂಬ ಒಬ್ಬ ಕ್ರೂರ ಕೊಲೆಗಡುಗ ಕಳ್ಳನಿದ್ದಾನೆ. ಈ ಮಾರ್ಗವಾಗಿ ಯಾರು ಹೋಗುತ್ತಾರೋ ಅವರ ಹತ್ತಿರವಿದ್ದ ಎಲ್ಲವನ್ನು ಕಸಿದುಕೊಂಡು ಅವರನ್ನು ಕೊಲೆಮಾಡಿ ಬಿಡುತ್ತಾನೆ.

ಅದಕ್ಕಾಗಿ ತಾವು ಹೋಗಬೇಡಿ ಎಂದು ಹೇಳುತ್ತಾರೆ. ಆದರೆ ಬುದ್ಧರು ಅವರ ಮಾತು ಕೇಳಗೆ ಧೈರ್ಯವಾಗಿ ಅರಣ್ಯದಲ್ಲಿ ಪ್ರವೇಶ ಮಾಡುತ್ತಾರೆ. ಆಗ ಬುದ್ಧರನ್ನು ಕಂಡ ಆ ಅಂಗುಲಿಮಾಲಾ ನಿಲ್ಲು ನೀ ಯಾರು ಇಷ್ಟು ನಿರ್ಭಯವಾಗಿ ಬರುತ್ತಿರುವಿಯಾ ಎಂದು ಕೇಳುತ್ತಾನೆ. ಆಗ ಬುದ್ಧರು ಹೇಳುತ್ತಾರೆ ನಿಲ್ಲಬೇಕಾದವನು ನಾನಲ್ಲ ನೀನು. ಬುದ್ಧನ ಮಾತನ್ನು ಕೇಳಿ ಅಂಗುಲಿಮಾಲಾನಿಗೆ ಆಶ್ಚರ್ಯ ಆಗುತ್ತದೆ. ಇಲ್ಲಿಯವರೆಗೆ ನನ್ನನ್ನು ಯಾರೂ ಮಾತನಾಡುವ ಧೈರ್ಯವನ್ನು ಮಾಡಲಿಲ್ಲ.

ಆದರೆ ಈ ಮನುಷ್ಯ ನನ್ನನ್ನೇ ನಿಲ್ಲು ಎನ್ನುತ್ತಾನೆ ಅಂದರೆ ಇವನು ಸಾಮಾನ್ಯ ಮನುಷ್ಯನಲ್ಲ ಎಂಬ ಅರಿವು ಅವನಿಗಾಗುತ್ತದೆ. ಮುಂದೆ ಅವನು ಪರಿವರ್ತನೆಯಾಗಿ ಬುದ್ಧನ ಆತ್ಮೀಯ ಶಿಷ್ಯನಾಗುತ್ತಾನೆ. ತಾತ್ಪರ್ಯವೆಂದರೆ, ನಮ್ಮಲ್ಲಿ ಧೈರ್ಯ ನಿರ್ಭಯವಾಗಿದ್ದರೆ, ನಾವು ಈ ಜಗತ್ತನ್ನೇ ಗೆಲ್ಲಬಹುದು.

ಬಸವಾದಿ ಶರಣರ ವಚನಗಳು ನಮಗೆ ಮಾನಸಿಕ ಧೈರ್ಯವನ್ನು ತುಂಬುತ್ತವೆ. ಎಂತಹ ಕಠಿಣ ಪ್ರಸಂಗದಲ್ಲಿಯೂ ನಮಗೆ ಮುನ್ನಡೆಯುವ ಆತ್ಮಬಲವನ್ನು ಹೆಚ್ಚಿಸುತ್ತವೆ. ಅದಕ್ಕಾಗಿ ನಾವು ವಚನಗಳ ಅಧ್ಯಯನ ಮಾಡಬೇಕು. ನಮ್ಮ ಜೀವನ ವಚನ ಜೀವನ ಮಾಡಿಕೊಳ್ಳಬೇಕು.

emedialine

Recent Posts

ಸಚಿವ ಪ್ರೀಯಾಂಕ್ ಖರ್ಗೆ ಹುಟ್ಟುಹಬ್ಬ ನಿಮಿತ್ತ ಬಾಲಕಿಯರ ಕ್ರಿಕೇಟ್

ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…

1 min ago

ಯತ್ನಾಳ ಹೋರಾಟಕ್ಕೆ ಬೆಂಬಲವಿಲ್ಲ : ಆನಂದ ಕಣಸೂರ

ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…

4 mins ago

ವಕ್ಫ್ ಮಸೂದೆ ತಿದ್ದುಪಡಿಗೆ ಮುಸ್ಲೀಮ ವೈಯಕ್ತಿಕ ಕಾನೂನು ಮಂಡಳಿ ವಿರೋಧ

ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…

16 mins ago

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

23 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago