ಭಂಕೂರ: ನೂತನ ಆಯ್ಕೆಯಾದ ಎಸ್‍ಡಿಎಂಸಿ ಸದಸ್ಯರು ಆಯ್ಕೆ

0
81

ಶಹಾಬಾದ: ತಾಲ್ಲೂಕಿನ ಭಂಕೂರ ಗ್ರಾಮದ ಗಣೇಶ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಟಿಆರ್‍ಟಿಯಲ್ಲಿ ನೂತನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯನ್ನು ರಚನೆ ಮಾಡಲಾಯಿತು.

ಎಸ್‍ಡಿಎಂಸಿ ಅಧ್ಯಕ್ಷರನ್ನಾಗಿ ಚಂದ್ರಕಾಂತ ಮಾಲಿಪಾಟೀಲ ಹಾಗೂ ಉಪಾಧ್ಯಕ್ಷರನ್ನಾಗಿ ಗಂಗಮ್ಮ ಗುಂಡಪ್ಪ ಕಟ್ಟಿಮನಿ ಅವರನ್ನು ನೇಮಕ ಮಾಡಿದರು. ಇತರರನ್ನು ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯ ಗುರುಮಾತೆ ಜಯಲಕ್ಷ್ಮಿ ಘೋಷಣೆ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಈರಣ್ಣ ಕಾರ್ಗಿಲ್ ಶಾಲೆಯ ಅಭಿವೃದ್ಧಿಗಾಗಿ ನಾಮ ನಿರ್ದೇಶಿತ ಸದಸ್ಯರ ಹಾಗೂ ಅಧ್ಯಕ್ಷರ ಸಹಕಾರ ಅತಿಮುಖ್ಯವಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ಒಂದಾಗಿ ಕೆಲಸ ಮಾಡೋಣ ಎಂದರು.

ಲಕ್ಷ್ಮಿಕಾಂತ ಕಂದಗೂಳ ಮಾತನಾಡಿ, ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಶ್ರಮಿಸಬೇಕು. ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸುವಂತೆ ಪಾಲಕರಿಗೆ ತಿಳಿಹೇಳಬೇಕು.ಶಿಕ್ಷಕರ ಸಹಕಾರದೊಂದಿಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಮುಂದಾಗಬೇಕೆಂದು ಹೇಳಿದರು. ಶಿಕ್ಷಕರಾದ ಶರಣಮ್ಮ, ಪಾರ್ವತಿ, ಸುಜಾತಾ, ಉಷಾದೇವಿ, ಸುನಂದಾ, ಮಹಾದೇವಿ, ಶೇಗುಪ್ತಾ ಯಾಸ್ಮಿನ್ ಹಾಗೂ ಗ್ರಾಮಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here