ಸುರಪುರ: ನಾಡು ಸಮೃದ್ಧವಾಗಿರಲಿ ಮತ್ತು ಲೋಕ ಕಲ್ಯಾಣಾರ್ಥವಾಗಿ ತಾಯಿ ಅಕ್ಕನಾಗಮ್ಮನವರ ಶ್ರೀಮಠದಿಂದ ಶಪಥ ಭಜನೆಯನ್ನು ನಡೆಸಲಾಗುತ್ತದೆ ಎಂದು ದೇವಿಂದ್ರಪ್ಪ ಮುತ್ಯಾ ತಿಳಿಸಿದರು.
ತಾಲೂಕಿನ ಟಿ.ಬೊಮ್ಮನಹಳ್ಳಿ ಗ್ರಾಮದಲ್ಲಿರುವ ಶ್ರೀ ಅಕ್ಕನಾಗಮ್ಮನವರ ಮಠದಲ್ಲಿ ನಡೆದ ಶಪಥ ಭಜನಾ ಕಾರ್ಯಕ್ರಮದ ನೇತೃತ್ವವಹಿಸಿದ್ದ ದೇವಿಂದ್ರಪ್ಪ ಮುತ್ಯಾ ಅವರು ಮಾತನಾಡಿ,ಅಕ್ಕನಾಗಮ್ಮ ತಾಯಿಯವರು ದೈವಿ ಸ್ವರೂಪಿಯವರಾಗಿದ್ದರು.ಅವರು ನೀಡಿದ ಮಾತು ಆಗಿಯೇತೀರುತ್ತಿತ್ತು,ಅಂತಹ ಅಮ್ಮನವರ ಜಾತ್ರೆಯು ಪ್ರತಿವರ್ಷ ನಡೆಸಲಾಗುತ್ತದೆ.
ಅಲ್ಲದೆ ಅಮ್ಮನವರು ಸದಾಕಾಲ ಲೋಕ ಕಲ್ಯಾಣದ ಕುರಿತು ತಮ್ಮ ಸಂದೇಶವನ್ನು ನೀಡಿದವರು.ಅವರ ಸ್ಮರಣೆಯ ಸಂದರ್ಭದಲ್ಲಿ ಪ್ರತಿವರ್ಷವು ಶಪಥ ಭಜನೆಯನ್ನು ನಡೆಸುವ ಮೂಲಕ ನಾಡಿಗೆ ಸಮೃಧ್ಧಿಗಾಗಿ ಪ್ರಾರ್ಥಿಸಲಾಗುತ್ತದೆ.ಈ ವರ್ಷ ಜಗತ್ತಿಗೆ ಕೊರೊನಾ ಎನ್ನುವ ಮಹಾಮಾರಿ ಕಂಠಕವಾಗಿ ಕಾಡುತ್ತಿದ್ದು,ಅದು ಆದಷ್ಟು ಬೇಗ ತೊಲಗಲೆಂದು ದೇವರಲ್ಲಿ ಎಲ್ಲ ಜನರು ಸೇರಿ ಪ್ರಾರ್ಥಿಸುತ್ತಿರುವುದಾಗಿ ತಿಳಿಸಿದರು.
ಶಪಥ ಭಜನೆಯ ಅಂಗವಾಗಿ ಬೊಮ್ಮನಹಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸರತಿ ಪಾಳಿಯಂತೆ ಭಜನೆಯನ್ನು ನಡೆಸುವ ಮೂಲಕ ದೇವರಸ್ಮರಣೆ ನಡೆಸಿದರು.
ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ಗ್ರಾಮದ ಅನೇಕ ಜನ ಮುಖಂಡರು ಹಾಗು ಶ್ರೀಮಠದ ಭಕ್ತರು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…