ಆಳಂದ: ಗ್ರಾಮೀಣ ಭಾಗದ ಜನ ಸಾಮಾನ್ಯರ ಬದುಕು ಹಸನಾಗಲು ಕೆರೆ, ಹಳ್ಳ, ಕೊಳ್ಳ, ಚೆಕ್‍ಡ್ಯಾಂ ಹೊಲದ ಬದು ನಿರ್ಮಾಣ ಸಮೃದ್ಧಿ ಬದುಕಿಗೆ ಪೂರಕವಾಗಿವೆ. ಇದಕ್ಕಾಗಿ ಜನರು ಉತ್ಸಾಯದೊಂದಿಗೆ ಇರುವ ಅವಕಾಶವನ್ನು ಬಳಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಕಲಬುರಗಿ ಸಣ್ಣ ನೀರಾವರಿ ಕೆರೆ ಇಲಾಖೆಯ ಅಫಜಲಪೂರ ಉಪವಿಭಾಗದ ಎಇಇ ಶಾಂತಪ್ಪ ಜಾಧವ ಅವರು ಹೇಳಿದರು.
ಪಟ್ಟಣದ ತಾಪಂ ಕಚೇರಿಯ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ಹಮ್ಮಿಕೊಂಡ ಸರ್ಕಾರಿ ಯೋಜನೆಗಳು ಜಾಗೃತಿ ಅಭಿಯಾನದ 3ನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದಕ್ಕಾಗಿ ಇಲಾಖೆಯ ವ್ಯಾಪ್ತಿಯಲ್ಲಿ ತೆರೆದ ಬಾವಿ, ಕೊಳವೆ ಬಾವಿ ತೋಡಿ ರೈತರ ಪಂಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಒದಗಿಸುವ ಯೋಜನೆ ಇದದೆ. ಅಣೆಕಟ್ಟೆ ಮತ್ತು ಚೆಕ್‍ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿ ಅಂತರ್ಜಲ ಅಭಿವೃದ್ಧಿ ಪಡಿಸಲಾಗುತ್ತದೆ. ಕೆರೆಗಳಿಗೆ ಮಳೆಯಿಂದ ಸಂಗ್ರಹಿಸಿದ ನೀರು ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದರು. ಜನರು ನೀರಿನ ಮಹತ್ವ ಅರಿಯಬೇಕು ಎಂದರು.
ರೇಷ್ಮೆ ಅಧಿಕಾರಿ ಡಿ.ಬಿ. ಪಾಟೀಲ, ಅಂಗನವಾಡಿ ಮೇಲ್ವಿಚಾರಕಿ ಮಹಾದೇವಿ ವಚ್ಛೆ, ಕಲಬುರಗಿ ಹಾಗೂ ತಾಲೂಕಿನ ಪ್ರಾದೇಶಿಕ ಅರಣ್ಯಾಧಿಕಾರಿ ಜಗನಾಥ ಕೋರಳ್ಳಿ, ಕೈಗಾರಿಕೆ ಅಧಿಕಾರಿ ಜಾಫರ್ ಅನ್ಸಾರಿ, ಬಿಸಿಎಂ ಅಧಿಕಾರಿ ಬಸವರಾಜ ಕಾಳೆ ಇಲಾಖೆ ನಾಗರಿಕ ಸೌಲಭ್ಯ ಕುರಿತು ವಿವರಣೆ ನೀಡಿದರು.
2ನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಗ್ರೇಡ್-2 ತಹಸೀಲ್ದಾರ ಬಸವರಾಜ ರಕ್ಕಸಗಿ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ದೊರೆಯುವ ವಿವಿಧ ಮಾಸಾಶನಗಳಿಗೆ ಇಲಾಖೆಯ ಸಿಬ್ಬಂದಿಗಳು ಮನೆ ಬಾಗಿಲಿಗೆ ಬಂದ ಸ್ಥಳದಲ್ಲೇ ಮಂಜೂರಾತಿ ಪತ್ರವನ್ನು ನೀಡುವ ಕಾರ್ಯ ಕೈಗೆತ್ತಿಕೊಳ್ಳಲು ಸರ್ಕಾರ ಆದೇಶಿಸಿದೆ. ಮಧ್ಯವರ್ತಿಗಳ ಜಂಜಾಟವಿಲ್ಲದೆ ಎಂದು ವಿವರಣೆ ನೀಡಿದರು.
ಸಹಾಯ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ರಿಯಾತಿ ದರದಲ್ಲಿ ರೈತರಿಗೆ ಕೃಷಿ ಪರಿಕರ ಸೇರಿ ಹಲವು ಸೌಲಭ್ಯಗಳಿವೆ ಅರ್ಜಿ ಸಲ್ಲಿಸಬೇಕು ಎಂದು ಹಲವು ಮಾಹಿತಿ ನೀಡಿದರು.
ಗ್ರಾಮೀಣ ಕುಡಿಯುವ ನೀರು ಯೋಜನೆ ಎಇಇ ಚಂದ್ರಮೌಳಿ ಅವರು, ಸುಮಾರು 20 ಹಳ್ಳಿಗಳಲ್ಲಿ ಜಗಜೀವನ ಮಿಷನ್ ಅಡಿಯಲ್ಲಿ ಪ್ರತಿಮನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಹಾಗೂ ಗ್ರಾಹಕರ ಶೇ 10ರಷ್ಟು ವಂತಿಗೆ ಹಣದಲ್ಲಿ ನೀರಂತರ ಕುಡಿಯುವ ನೀರು ಪೂರೈಕೆ ಯೋಜನೆ ಸದ್ಬಳಕೆಗೆ ಗ್ರಾಮೀಣ ಜನರು ಮುಂದಾಗಬೇಕು ಎಂದರು.
ಪಶು ಸಂಗೋಪನಾ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ನಾಗರಿಕ ಸೌಲಭ್ಯ ಹಾಗೂ ಯೋಜನೆ ಅನುಷ್ಠಾನದ ಮಾಹಿತಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಪತ್ರಕರ್ತ ಸಂಘದ ಅಧ್ಯಕ್ಷ ಮಹಾದೇವ ವಡಗಾಂವ ಅಭಿಯಾನದ ಧ್ಯೆಯೋದ್ಧೇಶ ಹೇಳಿದರು.
ಪತ್ರಕರ್ತ ಡಿ.ಎಂ. ಪಾಟೀಲ, ಸಂಜಯ ಪಾಟೀಲ, ಜಗದೀಶ ಕೋರೆ, ಹಣಮಂತ ಶೇರಿ, ಶರಣಬಸಪ್ಪ, ಹಿರಿಯ ಪ್ರಭಾಕರ ಸಲಗರೆ, ಅಂಗನವಾಡಿ ಕಾರ್ಯಕರ್ತೆ ಸಂಘದ ಅಧ್ಯಕ್ಷೆ ಪುಷ್ಪಾವತಿ ಚಟ್ಟಿ ಸೇರಿ ವಿವಿಧ ಭಾಗಗಳಿಂದ ಆಗಮಿಸಿದ್ದ ನಾಗರಿಕ ಮುಖಂಡರು, ಮಹಿಳೆಯರು ವೇದಿಕೆಯ ಮುಂಭಾಗದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಇಲಾಖೆಯ ಸೌಲಭ್ಯಗಳಿಗಾಗಿ ಅಧಿಕಾರಿಗಳ ಮೊಬೈಲ ಸಂಖ್ಯೆ ಹಾಗೂ ಕಚೇರಿ ವಿಳಾಸವನ್ನು ನಾಗರಿಕರು ಪಡೆದುಕೊಂಡರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…