ಕಲಬುರಗಿ : ಲಿಂ.ಪೂಜ್ಯ ದೊಡ್ಡಪ್ಪ ಅಪ್ಪ ಅವರ 38ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಐದು ದಿನಗಳ ವಿವಿಧ ಕಾರ್ಯಕ್ರಮಗಳಲ್ಲಿ ರವಿವಾರ ಕುಷ್ಠ ರೋಗಿಗಳಿಗೆ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಿಂದ ಅನ್ನ ಮತ್ತು ಹೊದಿಕೆ ವಿತರಣೆ ಮಾಡಲಾಯಿತು.
ನಗರದ ಆಳಂದ ಕಾಲೋನಿಯಲ್ಲಿರುವ ಲ್ಯಾಪ್ರೋಸಿ ಕಾಲೋನಿಗೆ ಮಹಾವಿದ್ಯಾಲಯದ ಪ್ರಾಚಾರ್ಯೆರಾದ ಡಾ.ನೀಲಾಂಬಿಕಾ ಶೇರಿಕಾರ, ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಭೇಟಿ ನೀಡಿ ಅಲ್ಲಿರುವ ನೂರಾರು ಕುಷ್ಠರೋಗಿಗಳಿಗೆ ಅವರ ಆರೋಗ್ಯ ವಿಚಾರಿಸಿ ಅವರಿಗೆ ಎರಡು ಹೊತ್ತಿನ ಊಟ ಮತ್ತು ಹೊದ್ದುಕೊಳ್ಳಲು ಬ್ಲಾಂಕೆಟ್ ನೀಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಪುಣ್ಯಸ್ಮರಣೋತ್ಸವ ವಿಭಿನ್ನವಾಗಿದ್ದು ಬಡವರಿಗೆ, ನಿರ್ಗತಿಕರಿಗೆ ಏನಾದರೂ ಒಳ್ಳೆಯದಾಗಬೇಕು ಸಮಾಜಮುಖಿಯಾಗಿ ಕಾರ್ಯಕ್ರಮಗಳು ನಡೆಯಬೇಕು ಎಂಬ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಮತ್ತು ಪೂಜ್ಯ ಡಾ.ದಾಕ್ಷಾಯಣಿ ಎಸ್. ಅಪ್ಪ ಅವರ ಮಾರ್ಗದರ್ಶನದಲ್ಲಿ ಇಂತಹ ಕಾರ್ಯಕ್ರಮಗಳು ಐದು ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕುಷ್ಠರೋಗಿಗಳಿಗೆ ಸಂಸ್ಥಾನದಿಂದ ಸಹಾಯ ಒದಗಿಸುವುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಲ್ಲಿನ ಅಧಿಕಾರಿಗಳು, ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪುಟ್ಟಮಣಿ ದೇವಿದಾಸ, ಡಾ.ಸೀಮಾ ಪಾಟೀಲ, ಕೃಪಾಸಾಗರ ಗೊಬ್ಬುರ ಬೋಧಕೇತರ ಸಿಬ್ಬಂದಿ ಅಶೋಕ ಮೂಲಗೆ, ಅಪ್ಪಾಸಾಬ ಬಿರಾದಾರ, ಶ್ರೀಮತಿ ಅನುಸೂಯ ಬಡಿಗೇರ, ಶ್ರೀಮತಿ ಪ್ರಭಾವತಿ, ವಿದ್ಯಾರ್ಥಿನಿಯರು ಮತ್ತು ನಾಲ್ಕು ಚಕ್ರದ ಮಾಲಾ ಕಣ್ಣಿ ಮತ್ತು ಮಾಲಾ ಧನ್ನೂರ ಇದ್ದರು.