ಮಾಚಗುಂಡಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ನೂರಾರು ಜನಕ್ಕೆ ವಾಂತಿ ಭೇದಿ

0
14

ಸುರಪುರ: ತಾಲೂಕಿನ ಮಾಚಗುಂಡಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ನೂರಕ್ಕು ಹೆಚ್ಚು ಜನ ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸೋಮವಾರ ರಾತ್ರಿಯಿಂದ ಅನೇಕ ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು ಕೆಲವರು ರಾತ್ರಿಯೇ ಶಹಾಪುರ ಮತ್ತು ಯಾದಗಿರಿಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಮಂಗಳವಾರ ಬೆಳಿಗ್ಗೆ ಐವತ್ತಕ್ಕೂ ಹೆಚ್ಚು ಜನರು ವಾಂತಿ ಭೇದಿಯಿಂದ ನರಳಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.ನಂತರ ಗ್ರಾಮಕ್ಕೆ ಆಂಬ್ಯುಲೆನ್ಸ್ ಕಳುಹಿಸಿ ವಾಂತಿ ಭೇದಿಗೀಡಾದವರನ್ನು ಕರೆತರಲಾಯಿತು. ತಕ್ಷಣಕ್ಕೆ ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಅವರು ರೋಗಿಗಳಿಂದ ವಿವರಣೆ ಪಡೆದುಕೊಂಡರು.ನಂತರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಪರಿಶೀಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಟಿಹೆಚ್‌ಒ ಅವರು,ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್‌ರ್‌ಗೆ ತೆರೆದ ಬಾವಿಯ ನೀರು ತುಂಬಿಸುವುದು ಕಾರಣವಾಗಿರುವ ಸಾಧ್ಯತೆಯಿದೆ.ಅಲ್ಲದೆ ನೀರು ಸರಬರಾಜಿಗೆ ಅಳವಡಿಸಿರುವ ವಾಲ್‌ಗಳ ಬಳಿಯಲ್ಲಿಯೂ ತುಂಬಾ ಕಸವಿದ್ದು ಎಲ್ಲೆಡೆ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಅಲ್ಲದೆ ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿ ೪೫ ಜನರಿಗೆ ಚಿಕಿತ್ಸೆ ನೀಡಲಾಗಿದೆ,ಅದರಲ್ಲಿ ಕೆಲವು ಮಕ್ಕಳ ಆರೋಗ್ಯ ತುಂಬಾ ಹದಗೆಟ್ಟಿತ್ತು,ಆದರೆ ನಮ್ಮ ವೈದ್ಯರ ತಂಡ ಎಲ್ಲಾ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಪಡಿಸಿರುವುದಾಗಿ ತಿಳಿಸಿದರು.

ಇನ್ನು ಗ್ರಾಮದಲ್ಲಿಯೂ ವೈದ್ಯರ ತಂಡ ಬೀಡು ಬಿಟ್ಟು ಸುಮಾರು ೫೦ ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.ಗ್ರಾಮದಲ್ಲಿ ಕುಡಿಯಲು ಸರಬರಾಜು ಮಾಡಲಾಗಿರುವ ನೀರು ಪರೀಕ್ಷೆಗೆ ಕಳುಹಿಸಲಾಗಿದ್ದು,ವರದಿ ಬಂದ ನಂತರ ನಿಖರ ಕಾರಣ ಗೊತ್ತಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆ ಮತ್ತು ಗ್ರಾಮಕ್ಕೆ ಕರವೇ ತಾಲೂಕು ಅಧ್ಯಕ್ಷ ಹಾಗು ಬಿಜೆಪಿ ಮುಖಂಡ ವೆಂಕಟೇಶ ನಾಯಕ ಬೈರಿಮಡ್ಡಿ ಮತ್ತು ಜಯಕರ್ನಾಟಕ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ,ಚಿ.ಸೌ.ಕನ್ಯಾಕುಮಾರಿ ಚಿತ್ರದ ನಟ ರಾಘವೇಂದ್ರ ಮಾಚಗುಂಡಾಳ,ಆನಂದ ಮಾಚಗುಂಡಾಳ ಸೇರಿದಂತೆ ಅನೇಕರು ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಚಿಕಿತ್ಸೆಗೆ ನೆರವಾದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here