ಶಹಾಬಾದ: ವೀರಭದ್ರೇಶ್ವರ ಜಯಂತಿ

0
162

ಶಹಾಬಾದ: ಸಮಾಜದ ಸಂಘಟನೆಗೆ ನಮ್ಮ ಮೂಲ ಪರಂಪರೆಯನ್ನು ಅರಿತಿ ಕೆಲಸ ಮಾಡಬೇಕಿದೆ ಎಂದು ಬೇಡ ಜಂಗಮ ಸಮಾಜದ ಗೌರವಾಧ್ಯಕ್ಷ ಮೃತ್ಯುಂಜಯ್ ಹಿರೇಮಠ ಹೇಳಿದರು.

ಅವರು ಮಂಗಳವಾರ ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಸಮಾಜ ಹಾಗೂ ಬೇಡ ಜಂಗಮ ಸಮಾಜದ ವತಿಯಿಂದ ಆಯೋಜಿಸಲಾದ ವೀರಭದ್ರೇಶ್ವರ ಜಯಂತಿ ಕಾಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ನಮ್ಮ ಮೂಲವನ್ನ ಮರೆತರೆ ನಮ್ಮ ತಲೆಯ ಮೇಲೆ ಕಲ್ಲು ಹಾಕಿಕೊಡಂತೆ ಎಂದರು. ಜಗತ್ತಿನ ಯಾವುದೇ ಮೂಲೆಗೆ ಹೋದರು ನಮ್ಮ ಮೂಲ ಬೇರನ್ನು ಮರೆಯಬಾರದು. ವೀರಶೈವ ಮತ್ತು ಲಿಂಗಾಯತ ಒಂದು ನಾಣ್ಯದ ಎರಡು ಮುಖಗಳು. ವೀರಶೈವ ಲಿಂಗಾಯತ ಧರ್ಮ ಮನುಕುಲಕ್ಕೆ ದಾರಿಯನ್ನ ತೋರಿಸುವ ಧರ್ಮವಾಗಿದೆ. ರೇಣುಕಾಚಾರ್ಯರು ಮಾನವಧರ್ಮಕ್ಕೆ ಜಯವಾಗಲಿ ಎಂದು ಹೇಳಿದ್ರೆ, ಬಸವಣ್ಣನವರು ಅರಿವು ಮತ್ತು ಆಚಾರದ ಬಗ್ಗೆ ೧೨ನೇ ಶತಮಾನದಲ್ಲೆ ತಿಳಿಸಿದ್ದಾರೆ.

ಈ ಧರ್ಮಕ್ಕೆ ವಿಶಾಲವಾದ ಮನಭೂಮಿಕೆ ಇದೆ. ಆದ್ದರಿಂದ ವೀರಶೈವ ಲಿಂಗಾಯತ ಧರ್ಮದ ಸಂಘಟನೆಗೆ ಯಾವ ನಾಯಕರನ್ನ ನಂಬಿಕೊಳ್ಳದೆ ಎಲ್ಲರೂ ತಳಮಟ್ಟದಿಂದ ಕೆಲಸ ಮಾಡಿದರೆ ಯಶಸ್ಸು ಕಂಡಿತವಾಗಿ ಸಿಗಲಿದೆ ಎಂದರು.

ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ವೀರಶೈವ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಬಾಯಿ ರಾವೂರ,ಬೇಡ ಜಂಗಮ ಸಮಾಜದ ತಾಲೂಕಾಧ್ಯಕ್ಷ ಶಿವಕುಮಾರ ಹಿರೇಮಠ, ವಿಜಯಕುಮಾರ ಮುಟ್ಟತ್ತಿ, ಗುರಲಿಂಗಯ್ಯ ಹಿರೇಮಠ, ಶಿವಕುಮಾರ ಇಂಗಿನಶೆಟ್ಟಿ, ಅಣ್ಣಪ್ಪ ದಸ್ತಾಪೂರ, ಶಿವಾನಂದ ಪಾಟೀಲ, ಶರಬು ಪಟ್ಟೇದಾರ, ಸದಾನಂದ ಕುಂಬಾರ,ವೀರಯ್ಯ ಹಿರೇಮಠ,ರಾಜಶೇಖರ ಘಂಟಿಮಠ,ಜಗದೀಶ ಮಠಪತಿ,ಬೀಮಾಶಂಕರ ಕುಂಬಾರ ಶಿವಕುಮಾರ ಮುದಿಗೌಡ, ಉಮಾ ದಂಡೋತಿ, ರಾಜು ಕೋಬಾಳ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here