ಬಿಸಿ ಬಿಸಿ ಸುದ್ದಿ

ವಿವೇಕಾನಂದ ವಿದ್ಯ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ನಿಡಗುಂದಾ ಗ್ರಾಮದ ವಿವೇಕಾನಂದ ವಿದ್ಯ ಮಂದಿರದ ಶಾಲೆಗೆ ಡಿಜಿಟಲ್ ಬೋರ್ಡ್ ಒದಗಿಸಲಾಗಿದ್ದು, ಅದನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಅರವಿಂದ ರೆಡ್ಡಿ ಅವರು ಶಾಲೆಯ ವಿದ್ಯಾರ್ಥಿಗಳಿಗೆ ತಿಳಿಸಿದರು.

ಶುಕ್ರವಾರ ಚಿಂಚೋಳಿ ತಾಲೂಕಿನ ನಿಡಗುಂದಾ ಗ್ರಾಮದ ವಿವೇಕಾನಂದ ವಿದ್ಯ ಮಂದಿರದಲ್ಲಿ 74ನೇ ಕಲ್ಯಾಣ ಕರ್ನಾಟಕ ಉತ್ಸಾಹದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಕೊರೋನಾ ವೈರಸ್ ಕಾರಣದಿಂದ ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನಕ್ಕೆ ಮರು ಹೋಗಬೇಕಿದೆ. ಶಿಕ್ಷಕರು   ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಪಾಠ ಮಾಡುವುದರಿಂದ ಕೊರೋನಾ ವೈರಸ್ ಸಂದರ್ಭದಲ್ಲಿ ಪಾಠಗಳನ್ನು ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತುಕೊಂಡು ಆಲಿಸಬಹುದಾಗಿದೆ ಎಂದು ಅವರು ವಿವರಿಸಿದರು. ಈ ರೀತಿಯ ತಂತ್ರಜ್ಞಾನ ಇಂದಿನ ಸಂದರ್ಭಕ್ಕೆ ಅವಶ್ಯಕವಾಗಿದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣಕ್ಕೆ ತಂತ್ರಜ್ಞಾನ ತುಂಬಾ ಉಪಯೋಗಕ್ಕೆ ಬರುತ್ತದೆ ಎಂದು ಅವರು ತಿಳಿಸಿದರು.

ವಿವೇಕಾನಂದ ವಿದ್ಯ ಮಂದಿರ ಶಾಲೆಯ ಮುಖ್ಯ ಗುರುಗಳಾದ ದಂಡಪ್ಪ  ಅವರು ಮಾತನಾಡಿ,   ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಒಂದು ವರ್ಷದ ನಂತರ ಕಲ್ಯಾಣ ಕರ್ನಾಟಕ ಭಾಗ 7 ಜಿಲ್ಲೆಗಳಿಗೆ  ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಗುವುದರ ಮೂಲಕ ಸ್ವಾತಂತ್ರ್ಯ ಸಿಕ್ಕಿದೆ  ಎಂದು ತಿಳಿಸಿದರು. ಭಾರತದ ಉಕ್ಕಿನ ಮನುಷ್ಯ, ಉಪಪ್ರಧಾನಿ,ಮೊದಲ ಗೃಹ ಮಂತ್ರಯಾಗಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಶ್ರಮದಿಂದ ಆಪರೇಷನ್ ಪೋಲೋ ಕಾರ್ಯಾಚರಣೆ ಮೂಲಕ ಸ್ವಾತಂತ್ರ್ಯ ಪಡೆದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಗಮೇಶ್ವರ ಭಾರತೀಯ ಶಿಕ್ಷಣ ಟ್ರಸ್ಟ್‌ ಗೌರವಾಧ್ಯಕ್ಷ ಬಸವರಾಜ್ ನಿಷ್ಠಿ, ಶಂಕರ ಜಡಲ್, ಗೌರಿಶಂಕರ್ ಬೇಡ್ಕಪಳ್ಳಿ,ಶ್ರೀನಿವಾಸ ಸೇರಿಗಾರ, ಶಿವಾನಂದ ಸಿಂಪಿ, ರಾಘವೇಂದ್ರ, ಶರಣಯ್ಯ ಗುತ್ತೇದಾರ, ನಾರಾಯಣ ರೆಡ್ಡಿ ನಾಮಲ್, ಕಾಂತ ತಳವಾರ, ಅಬ್ಬಾಸ್ ಅಲಿ, ಶರಣಮ್ಮ ಕುಂಬಾರ, ಅರ್ಚನಾ ನಾಮಲ್, ರಾಜಾಶ್ರೀ ಗುತ್ತೆದಾರ  ಸೇರಿದಂತೆ ಇನ್ನಿತರರು ಉಪಸ್ಥಿತಿದ್ದರು. ವಿವೇಕಾನಂದ ವಿದ್ಯಮಂದಿರದ ಸಹ ಶಿಕ್ಷಕ ಶ್ರೀ ಕಾಂತ ಅವರು ನಿರೂಪಣೆ ಹಾಗೂ ಸಹ ಶಿಕ್ಷಕಿ ಅನುಸೂಯ ಅವರು ವಂದನಾರ್ಪಣೆ ಮಾಡಿದರು.

ಡಿಜಿಟಲ್ ಬೋಡ್೯ ಮೂಲಕ ಸಿಎಂ ಭಾಷಣ ವೀಕ್ಷಣೆ:- ಇದೇ ಸಂದರ್ಭದಲ್ಲಿ 74ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಧ್ವಜಾರೋಹಣ ಹಾಗೂ ಪರೇಡ್ ಮೈದಾನದ ಕಾರ್ಯಕ್ರಮದ ಭಾಷಣವನ್ನು ನೇರ ಪ್ರಸಾರ ವೀಕ್ಷಣೆ ಮಾಡಲಾಯಿತು.

emedialine

Recent Posts

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

5 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

6 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

6 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

17 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

17 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

17 hours ago