ಸುರಪುರ: ಕಥೆಗಳು ಜಗತ್ತಿನಲ್ಲಿ ಲಿಪಿ ಆರಂಭಗೊಳ್ಳುವದಕ್ಕೆ ಮುಂಚೆ ಅವು ಜನಪದದಿಂದ ಹುಟ್ಟಿದ್ದು ಹಾಗೂ ನಮ್ಮ ಜೀವನದ ಅನುಭವಗಳಾಗಿದ್ದವು ಲಿಪಿಗಳು ಬಂದ ನಂತರ ಆ ಅನುಭವಗಳೇ ಅಕ್ಷರಗಳಾಗಿ ನಂತರ ಕಥೆಗಳಾಗಿ ಇಡೀ ಪ್ರಪಂಚವನ್ನೇ ಸುತ್ತುತ್ತಿವೆ ಕಥೆಗಳು ನಮ್ಮ ಬದುಕಿನ ಕನ್ನಡಿಯೇ ಆಗಿವೆ ಎಂದು ಹಿರಿಯ ಸಾಹಿತಿ ಶಂಕ್ರಯ್ಯ ಘಂಟಿ ಕಲಬುರಗಿ ಹೇಳಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಶ್ರೀ ಸಿದ್ದಿ ವಿನಾಯಕ ಮಹಿಳಾ ಮಂಡಳಿ ಬೊಮ್ಮಗುಡ್ಡ ಹಾಗೂ ಅರುಣ್ ಪಬ್ಲಿಕೇಷನ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಕಥೆ ಕಟ್ಟೋಣ ಬನ್ನಿ ಒಂದು ದಿನದ ಕಥಾ ಕಮ್ಮಟ ಹಾಗೂ ಎಮ್.ಎಸ್.ಸಜ್ಜನ್ ವಿರಚಿತ ಆರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ಆಶಯ ನುಡಿಗಳನ್ನಾಡುತ್ತಾ ಮಾತನಾಡಿ ಇಂದಿನ ಹೊಸ ಕಥೆಗಾರರು ತಾವು ರಚಿಸುವ ಕಥೆಗಳು ಸಶಕ್ತವಾಗಬೇಕಾದರೆ ರಂಜನೀಯ ಗುಣಗಳನ್ನು ಹೊಂದಿರಬೇಕು ಅಂದಾಗ ಮಾತ್ರ ಇಡೀ ಲೋಕದ ತುಂಬೆಲ್ಲಾ ತಿರುಗುತ್ತವೆ ಎಂದು ಹೇಳಿದರು, ಕಥೆಗಳು ತುಂಬಾ ವಿಸ್ತಾರತೆಯನ್ನು ಹೊಂದಿದ್ದು ನಮ್ಮ ಹೆಣ್ಣು ಮಕ್ಕಳ ವ್ಯಾನಿಟಿ ಬ್ಯಾಗನಲ್ಲಿರುವ ಕನ್ನಡಿಯ ಬಳಕೆಯಿಂದ ಹಿಡಿದು ಬೆಲ್ಜಿಯಂ ಕನ್ನಡಿ ತಯಾರಿಕೆಯವರೆಗೆ ಸಾಗುತ್ತದೆ ಎಂದು ಹೇಳಿದರು.
ಹಿರಿಯ ಸಾಹಿತಿ ದೇವನೂರು ಮಹಾದೇವ,ಖ್ಯಾತ ನಾಟಕಕಾರ ಷೇಕ್ಸಪಿಯರ್,ಲಿಯೋ ಟಾಲ್‌ಸ್ಟಾಯ್ ಅವರ ಕಥೆಗಳಲ್ಲಿ ಹಾಗೂ ಕಾದಂಬರಿಗಳಲ್ಲಿ ಸಶಕ್ತವಾದ ನಮ್ಮೊಳಗಿನ ಲೋಕವಿದೆ ಎಂದು ಹೇಳಿದ ಅವರು,ಒಳ್ಳೆಯ ಕಥೆಗಾರರಾಗಬೇಕಾದರೆ ಹೊಸತನ್ನು ದಕ್ಕಿಸಿಕೊಳ್ಳಬೇಕು, ಹೊಸ ತಂತ್ರ ಹಾಗೂ ವಿಶ್ಲೇಷಣೆ ಅಳವಡಿಸಿಕೊಂಡಲ್ಲಿ ಸಶಕ್ತ ಹಾಗೂ ಗಟ್ಟಿತನದ ಕಥೆಗಳಾಗುತ್ತವೆ ಎಂದು ಹೇಳಿದರು.
ಸಣ್ಣ ಕಥೆಗಳು ಕಥೆಗಾರರ ಬದುಕು ಹಾಗೂ ಜೀವನ ಮೌಲ್ಯಗಳ ಪ್ರತಿಪಾದನೆಗಳಾಗಿದ್ದು ಕಥೆಗಾರರಿಗೆ ಸ್ವಾತಂತ್ರ್ಯ ಮನೋಭಾವ,ಮುಕ್ತ ಮನಸ್ಸು ಹಾಗೂ ಅಭಿವ್ಯಕ್ತಿ ಲವಲವಿಕೆ ಬೇಕು ಅಂದಾಗ ಮಾತ್ರ ಮಾತ್ರ ದೇವನೂರು ಮಹಾದೇವ ಅವರು ಹೇಳಿರುವಂತೆ ನೆಲಕ್ಕೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಾಗುವದಿಲ್ಲ ಅಲ್ಲದೆ ಕಥೆಗಾರರಲ್ಲಿ ಚಿಂತನೆಗಳು ಅಸಾಮಾನ್ಯ ಎನ್ನಿಸುವ ಅರಿವು ಹೊಂದಿರಬೇಕು, ಇಂದಿನ ಹೊಸ ಕಥೆಗಾರರು ರಚಿಸುವ ಕಥೆಗಳು ಜಗತ್ತಿನ ಕಥೆಗಳಾಗಬೇಕಾದರೆ ಚಿಂತನೆಗಳನ್ನು ಹುಡುಕಿ ಹೆಕ್ಕಿ ತಿದ್ದಿ ತೀಡಿ ಮತ್ತು ಪಳಗಿಸುವ ಮೂಲಕ ತಮ್ಮ ಕಥಾ ಲೋಕಕ್ಕೆ ಹೆಣೆದರೆ ಅವು ಜಗತ್ತಿನ ಕಥೆಗಳಾಗುತ್ತವೆ. ಲೋಕೋ ಭಿನ್ನರುಚಿ ಎಂಬ ಮಾತಿನಂತೆ ಕಥೆಗಾರರು ಹೊಸ ಲೋಕ ಹಾಗೂ ಕನಸಿನಿಂದ ನೋಡಬೇಕು ಹಾಗೂ ಕಥೆಗಳು ನ್ಯಾಯ, ನಿಷ್ಠುರತೆ ಹಾಗೂ ಪ್ರಾಮಾಣಿಕತೆಯನ್ನು ಆಳಬೇಕು ಹಾಗೂ ಜಗತ್ತಿನ ಸಂಕಟಕ್ಕೆ ಉತ್ತರ ಕೊಡುವಂತಾಗಲಿ ಎಂದು ಹೇಳಿದರು.
ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ,ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ನ್ಯಾಯವಾದಿ ಜಯಲಲಿತಾ ಪಾಟೀಲ ಹಾಗೂ ಸಾಹಿತಿ ಎಂ.ಎಸ್.ಸಜ್ಜನ್ ಮಾತನಾಡಿದರು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡ ಸಾಹಿತಿ ಎಂ.ಎಸ್.ಸಜ್ಜನ್ ವಿರಚಿತ ಆರು ಕೃತಿಗಳನ್ನು ಉಪನ್ಯಾಸಕ ಶರಣಗೌಡ ಪಾಟೀಲ ಜೈನಾಪುರ,ಶಿಕ್ಷಕ ಮಹಾಂತೇಶ ಗೋನಾಲ ಹಾಗೂ ಉಪನ್ಯಾಸಕ ಯಂಕನಗೌಡ ಪಾಟೀಲ ಪರಿಚಯಿಸಿದರು.
ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ ಕಾರ್ಯಕ್ರಮ ಉದ್ಘಾಟಿಸಿದರು, ಉಪಾಧ್ಯಕ್ಷ ಮಹೇಶ ಪಾಟೀಲ,ಸಾಹಿತಿ ಎಮ್.ಎಸ್.ಸಜ್ಜನ್,ಅರುಣ್ ಪಬ್ಲಿಕೇಷನ್‌ನ ಬೋರಮ್ಮ ಶರಣಬಸವ ಯಾಳವಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು, ದೇವು ಹೆಬ್ಬಾಳ ನಿರೂಪಿಸಿದರು ದೊಡ್ಡ ಮಲ್ಲಿಕಾರ್ಜುನ ಹುದ್ದಾರ ಸ್ವಾಗತಿಸಿದರು ಶರಣಬಸವ ಯಾಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು ರಾಜಶೇಖರ ದೇಸಾಯಿ ವಂದಿಸಿದರು, ಹಿರಿಯ ಸಾಹಿತಿಗಳಾದ ಶಾಂತಪ್ಪ ಬೂದಿಹಾಳ,ಪ.ಮಾನು ಸಗರ,ನಬಿಲಾಲ್ ಮಕಾನದಾರ್ ಹಾಗೂ ಇತರರಿದ್ದರು.
ಕೃತಿಗಳ ಲೋಕಾರ್ಪಣೆ : ಈ ಸಂದರ್ಭದಲ್ಲಿ ಸಾಹಿತಿ ಎಂ.ಎಸ್.ಸಜ್ಜನ್ ರಾಜನಕೋಳೂರು ವಿರಚಿತ ಅಮರವಾಣಿ,ಬಸವ ವಚನ ಜ್ಯೋತಿ,ವಿಚಾರ ಧಾರೆ,ನಮ್ಮ-ನಿಮ್ಮ ಮಾತು,ರೇಡಿಯೋ ನಾಟಕಗಳು ಹಾಗೂ ಗಾದೆ ಮಾತುಗಳು ಮತ್ತು ನೀತಿ ಮಾತು ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…