ಸುರಪುರ: ನಗರದ ಕಬಾಡಗೇರಾ ಓಣಿಯ ಕಾಳಮ್ಮ ದೇವಿ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತಿಯನ್ನು ಆಚರಿಸಲಾಯಿತು,ನೇತೃತ್ವ ವಹಿಸಿದ್ದ ಓಣಿಯ ಹಿರಿಯ ಪ್ರಮುಖರಾದ ಶರಣಯ್ಯಸ್ವಾಮಿ ಮಠಪತಿ ಅವರು ಶ್ರೀ ವೀರಭದ್ರೇಶ್ವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅವರು ವೀರಭದ್ರೇಶ್ವರರ ಮಹಾತ್ಮೆ ಕುರಿತು ಮಾತನಾಡಿ ಪರಮಾತ್ಮನ ಉಗ್ರ ರೂಪವಾಗಿರುವ ವೀರಭದ್ರೇಶ್ವರರು ಅಸಂಖ್ಯಾತ ಭಕ್ತಾದಿಗಳ ಮನೆ ದೇವರಾಗಿ ಪೂಜಿಸಲ್ಪಡುತ್ತಾರೆ ಶಿವಶರಣ ವಚನಗಳಲ್ಲಿ ಕೂಡಾ ವೀರಭದ್ರ ದೇವರ ವರ್ಣನೆ ಇದ್ದು ಜನಮನದ ನಿತ್ಯ ಬದುಕಿನ ಶಕ್ತಿದೇವರಾಗಿ ಜಂಗಮ ಸ್ವರೂಪನಾಗಿದ್ದಾನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಓಣಿಯ ಪ್ರಮುಖರಾದ ರಮೇಶ ಹೂಗಾರ,ರವಿ ಶಹಾಪುರಕರ,ಮಂಜುನಾಥ ಗಚ್ಚಿನಮನಿ,ಪ್ರಕಾಶ ಬಣಗಾರ,,ಮಹೇಶ ಹಳ್ಳದ,ಕಾಳಪ್ಪ ಪೂಜಾರಿ,ಚನ್ನಬಸವ ಪತ್ರಿಮಠ,ವಿಜಯಕುಮಾರ ಹಳಿಸಗರ,ಹರ್ಷವರ್ಧನ ಕಲಕೇರಿ,ಮೌನೇಶ ಪತ್ತಾರ,ಸಂತೋಷ ಬ್ಯಾಕೋಡ,ರಾಕೇಶ ಪತ್ತಾರ,ಅಪ್ಪು ನಾಯಕ ಇತರರಿದ್ದರು.