ಬೆಳಗಾವಿ:’ಪಡಿತರ ಸಮರ್ಪಕ ವಿತರಣೆಗೆ ತೊಡಕಾಗಿರುವ ಸರ್ವರ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು’ ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಸದಸ್ಯರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಅವರಿಗೆ ಮೊನ್ನೆ ಮನವಿ ಸಲ್ಲಿಸಿದರು.
ಕಳೆದ ಸಾಕಷ್ಟು ‘ದಿನಗಳಿಂದಲೂ ಸಮಸ್ಯೆ ಕಾಡುತ್ತಿದೆ. ಇತ್ತೀಚಿನ ಹಲವು ದಿನಗಳಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಇದರಿಂದ ಅಂಗಡಿಕಾರರು ಹಾಗೂ ಪಡಿತರ ಚೀಟಿದಾರರು ತೊಂದರೆ ಅನುಭವಿಸುವಂತಾಗಿದೆ’.
‘ಸೆ.1 ರಿಂದ 15 ವರೆಗೆ ಇ-ಕೆವೈಸಿ (ಪಡಿತರ ಚೀಟಿಯಲ್ಲಿ ಹೆಸರಿರುವ ಸದಸ್ಯರ ಬೆರಳಚ್ಚು ಮೊದಲಾದ ಮಾಹಿತಿ ಸಂಗ್ರಹಿಸುವುದು) ಮಾಡುವ ಪ್ರಕ್ರಿಯೆ ನಡೆಸುವಂತೆ ಸರ್ಕಾರದಿಂದ ಸೂಚಿಸಲಾಗಿತ್ತು. ಆಗಲೂ ಸರ್ವರ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಪಡಿತರ ವಿತರಣೆ ಮಾಡುವ ನೌಕರರು ಹೇಳುತ್ತಲೇ ಬರುತ್ತಿದ್ದಾರೆ. ಹಾಗಾದರೆ ಬಡ ಜನರು, ಕೂಲಿ– ಕಾರ್ಮಿಕರು ಏನು ಮಾಡಬೇಕು. ಅಲ್ಲದೇ ಈ ಪಡಿತರ ವಿತರಿಸುವ ಜನರ ಮರ್ಜುಯನ್ನೂ ಕಾಯಬೇಕು.
ಸೆ.16 ರಿಂದ ತಿಂಗಳ ಕೊನೆವರೆಗೆ ಪಡಿತರ ವಿತರಣೆಗೆ ಅವಕಾಶ ಕೊಡಲಾಗಿದೆ. ಇದರಿಂದಾಗಿ ಬಹಳಷ್ಟು ಮಂದಿ ಬರುತ್ತಿದ್ದಾರೆ. ಆದರೆ, ನಿಗದಿತ ತಂತ್ರಾಂಶದ ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ವಿತರಣೆ ಕಾರ್ಯಕ್ಕೆ ತೊಡಕಾಗಿದೆ. ನಗರದಲ್ಲಿ ಶೇ 30 ರಿಂದ 40 ರಷ್ಟು ಮಂದಿಗೆ ಮಾತ್ರವೇ ಪಡಿತರ ನೀಡಲಾಗಿದೆ. ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲರಿಗೂ ವಿತರಿಸಬೇಕಾದರೆ ಸರ್ವರ್ ಸಮಸ್ಯೆ ಬಗೆಹರಿಸಬೇಕು’ ಎಂದು ಜನರು ಒತ್ತಾಯಿಸುತ್ತಾರೆ.
ಪರದಾಟ: ‘ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಪಡಿತರ ಚೀಟಿದಾರರು, ಪಡಿತರ ಪಡೆಯುವುದಕ್ಕೆ ತಾಂತ್ರಿಕ ಸಮಸ್ಯೆಯಿಂದಾಗಿ ಪರದಾಡುವ ಸ್ಥಿತಿಯೂ ಎದುರಾಗಿದೆ. ಕೆಲಸ, ಕೂಲಿ ಬಿಟ್ಟು ಅಂಗಡಿಗಳ ಬಳಿ ಕಾಯಬೇಕಾಗಿದೆ. ಈ ಕಾರಣಕ್ಕಾಗಿಯೇ ಅವರು ಅಂಗಡಿಯವರ ಮೇಲೆ ಜಗಳ ತೆಗೆಯುವ ಸಾಧ್ಯತೆಯೂ ಇಲ್ಲದಿಲ್ಲ.
ಜನರಿಗೆ ಅನುಕೂಲ ಆಗಲೆಂದು ನಾವು ಕೋವಿಡ್ ಭೀತಿಯ ನಡುವೆಯೂ ಕೆಲಸ ಮಾಡುತ್ತಿದ್ದೇವೆ. ಈ ನಡುವೆ, ಸರ್ವರ್ ಕೈಕೊಡುತ್ತಿರುವುದು ವಿತರಣೆ ಪ್ರಕ್ರಿಯೆಗೆ ಅಡಚಣೆಯಾಗಿ ಪರಿಣಮಿಸಿದೆ’ ಎಂದು ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜಶೇಖರ ತಳವಾರ ಮಾಹಿತಿ ಹೇಳುತ್ತಾರೆ.
ಬೆಳಗಾವಿ ‘ಜಿಲ್ಲೆಯಲ್ಲಿ 1,730 ನ್ಯಾಯಬೆಲೆ ಅಂಗಡಿಗಳಿವೆ. ನಮಗೆ ಮಾರ್ಚ್, ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಕಮಿಷನ್ ಅನ್ನು ಸರ್ಕಾರ ಈವರೆಗೂ ನೀಡಿಲ್ಲ. ಇದರಿಂದ ನಾವೂ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಸಾಲ ಮಾಡಿ ಅಂಗಡಿ ನಿರ್ವಹಣೆ ಮಾಡಬೇಕಾದ ಸ್ಥಿತಿ ಇದೆ ಎಂದು ಪಡಿತರ ವಿತರಣೆ ಮಾಡುವ ಜನರು ಹೇಳುತ್ತಾರೆ. ಅಂಗಡಿಗಳ ಬಾಡಿಗೆ, ಕೆಲಸದವರಿಗೆ ಸಂಬಳ, ವಿದ್ಯುತ್ ಬಿಲ್ ಮೊದಲಾದವುಗಳಿಗೆ ಹಣ ಹೊಂದಿಸಲು ಪರದಾಡುತ್ತಿದ್ದೇವೆ. ಹೀಗಾಗಿ, ಕೂಡಲೇ ಬಾಕಿ ಕಮಿಷನ್ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ’ ಎಂದೂ ಹೇಳುತ್ತಾರೆ ಅವರು.
‘ಅಂಗಡಿಯೊಂದರ ವ್ಯಾಪ್ತಿಯಲ್ಲಿ ಸರಾಸರಿ 500 ಪಡಿತರ ಚೀಟಿಗಳಿದ್ದರೆ ಹಾಗೂ ಪಡಿತರ ವಿತರಿಸಿದರೆ (ತಿಂಗಳಲ್ಲಿ) ಸರಾಸರಿ ರೂಪಾಯಿ 7,500 ಕಮಿಷನ್ ಬರಬೇಕಾಗುತ್ತದೆ. ಹೆಚ್ಚು ಚೀಟಿಗಳಿದ್ದರೆ ಪ್ರಮಾಣ ಜಾಸ್ತಿಯಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಕಮಿಷನ್ ಬಾಕಿ ಇದ್ದರೆ ನಿರ್ವಹಣೆ ಮಾಡುವುದು ಹೇಗೆ ಎನ್ನುವುದು ಅವರ ಪ್ರಶ್ನೆಯಾಗಿದೆ.
ಅನುದಾನ ಬಿಡುಗಡೆಯಲ್ಲಿ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸುತ್ತಾರೆಯೇ ಈ ಮೂಲಕ ಅನುಕೂಲ ಮಾಡಿಕೊಡಬೇಕು ಮಾಡಿಕೊತ್ತಾರೆಯೇ..!
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…