ಕಲಬುರಗಿ: ಕೋವಿಡ್ ಕಾರಣದಿಂದಾಗಿ ಕೆಲ ತಿಂಗಳ ಕಾಲ ಮುಮಂದೂಡಿದ್ದ ತಮ್ಮ ಗ್ರಾಮ ವಾಸ್ತವ್ಯ ಹಾಗೂ ಜನರ ಅಹವಾಲು ಆಲಿಕೆ, ಸಂವಾದ ಸಭೆಯನ್ನು ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಸೆಪ್ಟೆಂಬರ್ ತಿಂಗಳಲ್ಲಿ ಪುನಾರಂಭಿಸಿದ್ದು ಅವರ ಈ ಜನಮುಕಿ ಕೆಲಸಕ್ಕೆ ಹಳ್ಳಿ ಜನರಿಂದ ಮೆಚ್ಚುಗೆಯ ಮಹಾಪುರವೇ ಹರಿದು ಬಂದಿದೆ.
ತಾಲೂಕಿನ ಶಾಸಕರು ಹಾಗೂ ರಾಜ್ಯ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯ್ ಸಿಂಗ್ ತಮ್ಮೂರಿಗೆ ಬಂದು ಸುಖ- ದುಃಖ ಆಲಿಸುವುದು ಜನತೆ ಮೆಚ್ಚಿಕೊಂಡಿದ್ದಾರೆ. ಗಂವ್ಹಾರ್ ತಾಂಡಾದಲ್ಲಿ ಗುರುವಾರ ವಾಸ್ತವ್ಯಕ್ಕಾಗಿ ಆಗಮಿಸಿದ ಡಾ. ಅಜಯ್ ಸಿಂಗ್ ಇವರಿಗೆ ಅಲ್ಲಿನ ಜನರಿಂದ ಅಭೂತಪೂರ್ವ ಸ್ವಾಗತ ಕೊರಲಾಯ್ತು.
ಸಂಜ ಹೊತ್ತು ಗ3ಆಮಕ್ಕೆ ಆಮಿಸಿದ ಡಾ. ಅಜಯ್ ಸಿಂಗ್ ಅಲ್ಲಿನ ದರ್ಗಾ, ಗುಂಡಿ- ಉಗಂಡಾರಗಳನ್ನೆಲ್ಲ ಸುತ್ತಿ ದೇವರ ದರುಶನ ಪಡೆದು, ಊರಿನ ಹಿರಿಯರಿಗೆ ನಮಿಸುವ ಮೂಲಕ ದರ್ಗಾ ಅಂಗಳದಲ್ಲಿ ಹಾಕಲಾಗಿದ್ದ ಸಂವಾದ ಹಾಗೂ ಗ್ರಾಮ ಸಭೆಯ ವೇದಿಕೆಗೆ ಬಂದರು.
ಅಲ್ಲಿ ಕೋವಿಡ್ ವಿರುದ್ಧ ಇರುವ ಲಸಿಕಾಕರಣ ಸಂದೇಶ ಜನಮನದಲ್ಲಿ ಸಾರಲು ತಾವೇ ಖುದ್ದು ಗ್ರಾಮಸ್ಥರಿಗೆ ವೇದಿಕೆಯಲ್ಲೇ ಲಸಿಕೆ ಹಾಕುವ ಮೂಲಕ ಗಮನ ಸೆಳೆದರು. ಸೋಂಕಿನಿಂದ ದೂರ ಇರಬೇಕಾದಲ್ಲಿ ಊರವರೆಲ್ಲರೂ ಲಸಿಕೆ ಹಾಕಿಕೊಳ್ಳಬೇಕು, ಸುತ್ತಲಿನ ಜನರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಎಲ್ಲರೂ ಪ್ರೇರೇಪಿಸಿರಿ ಎಂದು ಮನವಿ ಮಾಡಿದರು.
ಅಹವಾಲು ಆಲಿಕೆ ಸಭೆಯಲ್ಲಿ ತಮ್ಮ ಅಳಲಿನ ಅರ್ಜಿಯೊಂದಿಗೆ ಬಂದ ವಿಕಲ ಚೇತನರು, ಊರಿನ ಕಡು ಬಡವರು, ವೃದ್ಧರಿಗೆ ಆದ್ಯತೆ ನೀಡಿ ತಾವೇ ಅವರನ್ನು ಖುದ್ದು ಅವರಿದ್ದಲ್ಲಿಗೇ ಹೋಗಿ ಮೈ ಕೈ ತಡವುತ್ತ, ಅಪ್ಯಾಯಮಾನರಾಗಿ ಅವರ ಬಳಿ ಕುಳಿತು ಅವರಿಂದ ಅಹವಾಲು ಆಲಿಸಿದರು.
ವಿಕಲಚೇತನನೋರ್ವ ತನಗೆ ಇರಲು ಸೂರಿಲ್ಲವೆಂದು ಗೋಳಾಡಿದಾಗ ತಕ್ಷಣವೇ ತಾಪಂ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು ಇವರಿಗೆ ವಸತಿ ಯೋಜನೆಯಲ್ಲಿ ಆದ್ಯತೆಯಲ್ಲಿ ಮನೆ ಹಾಕಿಸಿಕೊಡುವಂತೆ ಸೂಚಿಸಿದರು. ಇದಲ್ಲದೆ ಅನೇಕರು ಊರಿನ ರಸ್ತೆ, ಚರಂಡಿ, ತಿಪ್ಪ ಸಮಸ್ಯೆಗಳನ್ನು ಗಮನಕ್ಕೆ ತಂದಾಗ ಸಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತ ಇವೆಲ್ಲದರ ಪರಿಹಾರಕ್ಕೆ ಖಡಕ್ ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಮನೆ ಮನೆಗೂ ನಲ್ಲಿ ನೀರು ಪೂರೈಸುವ ಜಲ ಜೀವನ ಮಿಷನ್ ಯೋಜನೆಗೂ ಡಾ. ಅಜಯ್ ಸಿಂಗ್ ಶಿಲಾನ್ಯಾಸ ನೆರವೇರಿಸಿದರು. ಈ ಊರಲ್ಲಿ ಮನೆ ಮನೆಗೂ ಈ ಯೋಜನೆಯಡಿ ನಲ್ಲಿಯಿಂದ ಶುದ್ಧ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಅದಾಗಲೇ ರೂಪ ತಾಳಿದ್ದು ಶಾಸಕರ ಚಾಲನೆಯಿಂದಾಗಿ ಸದರಿ ಯೋಜನೆ ಈಗ ಕಾರ್ಯಾರಂಭಿಸಲಿದೆ.
ಶಾಸಕರು ಗುರುವಾರ ಊರಿನ ಬಡ ಕೃಷಿ ಕೂಲಿ ಕಾರ್ಮಿಕ ರಾಮು ಜಾಧವ್ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಶಾಸಕರು ಇದೇ ಊರಿನ ದಲಿತ ಸಮುದಾಯದ ಸದಸ್ಯರೊಬ್ಬರ ಮನೆಗೆ ಭೇಟಿ ನೀಡಿ ಉಪಹಾರ ಸೇವನೆ ಮಾಡಿ ಅವರ ಕುಟುಂಬದ ಸುಖಃ ದುಃಖ ಆಲಿಸಲಿದ್ದಾರೆ.
ಕೋವಿಡ್ ಪೂರ್ವದಲ್ಲಿ ಶಾಸಕರು ಜೇರಟಗಿ, ವಡಗೇರಾ, ಕೋನ ಹಿಪ್ಪರಗಾ ಊರಲ್ಲಿ ವಾಸ್ತವ್ಯ ಹೂಡುವ ಮೂಲಕ ಜನರ ನೂರಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದರು. ಇದೀಗ ಗಂವ್ಹಾರ್‍ನಲ್ಲಿ ತಮ್ಮ ಕೋವಿಡ್ ನಂತರದ 4 ನೇ ಗ್ರಾಮ ವಾಸ್ತವ್ಯ ಹೂಡುವ ಮೂಲಕ ಮತ್ತೊಮ್ಮೆ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಜನತೆಗೆ ಇನ್ನೂ ಹತ್ತಿರವಾಗುವತ್ತ, ಹೆಚ್ಚು ಹೆಚ್ಚು ಜನರ ಸಮಸ್ಯಗಳನ್ನು ಆಲಿಸಿ ಪರಿಹಾರ ಹುಡುಕುವತ್ತ ಹೊಸ ಹೆಜ್ಜೆ ಇಡುತ್ತ ತಮ್ಮ ಪ್ರಾಮಾಣಿಕ ಪ್ರಯತ್ನ ಮುಂದುವರಿಸಿದ್ದಾರೆ.
ಶಾಸಕರ ಗ್ರಾಮ ವಾಸ್ತವ್ಯದ ಸಾರ್ವಜನಿಕ ಸಭೆಯಲ್ಲಿ ತಾಲೂಕಾ ದಂಡಾಧಿಕಾರಿ, ತಹಶೀಲ್ದಾರ್ ವಿನಯ ಪಾಟೀಲ್, ತಾಪಂ ಮುಖ್ಯಾಧಿಕಾರಿ ವಿಲಾಸರಾಜ್, ಜೆಸ್ಕಾಂ ಎಇಇ ಅನೀಲ ಕುಮಾರ್, ಅಬಕಾರಿ ಸಿಪಿಐ ವನಿತಾ ಸಿತಾಳೆ, ಸುಷ್ಮಾ ಪಾಟೀಲ್, ತಾಲೂಕಾ ಆರೋಗ್ಯಾಧಿಕಾರಿ ಸಿದ್ದು ಪಾಟೀಲ್, ಬಿಇಓ ವೆಂಕÀಯ್ಯ ಇನಾಮದಾರ್, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ, ಸಿಡಿಪಿಓ ಸಂಗನಗೌಡ ಪಾಟೀಲ್, ಎಇಇ ಮಲ್ಲೀನಾಥ ಕಾರಬಾರಿ, ಮೊಹ್ಮದ್ ಖಾಸೀಂ, ಗ್ರಾಪಂ ಅಧ್ಯಕ್ಷೆ ಶಿವಕಲಾ ಮಾಲೀಪಾಟೀಲ್, ರುಕುಂ ಪಟೇಲ್, ಶೋಯೇಬ್ ಅನ್ಸಾರಿ, ಸಾರಿಗೆ ಸಂಸ್ಥೆಯ ಅಂಬರೀಷ ಅರಣ್ಯ ಇಲಾಖೆಯ ಬುರಾನುದ್ದೀನ್ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದು ಜನರ ಅಹವಾಲುಗಳನ್ನು ಶಾಸಕರ ಮುಖಾಂತರ ಪಡೆದು ಪರಿಹಾರಕ್ಕೆ ಸಹಕರಿಸಿದರು.
ಪ್ರತಿ ವಾಸ್ತವ್ಯದಲ್ಲಿ ಪತ್ರಕರ್ತರೊಬ್ಬರನ್ನು ಅತಿಥಿಯಾಗಿ ಆಹ್ವಾನಿಸುತ್ತಿರುವ ಡಾ. ಅಜಯ್ ಸಿಂಗ್ ಈ ಬಾರಿ ಪತ್ರಕರ್ತ ಹಣಮಂತರಾವ ಬೈರಾಮಡಗಿ ಅವರನ್ನು ಆಹ್ವಾನಿಸಿ ವೇದಿಕೆಯಲ್ಲಿ ಗೌರವಿಸಿದರು. ಲಂಬಾಣಿ ತಾಂಡಾದಲ್ಲಿರುವ ಮಹಿಳೆಯರು ತಮ್ಮ ಸಾಂಸ್ಕøತಿಕ ಉಡುಪಿನಲ್ಲಿ ಬಂದು ಆರತಿ ಬೆಳಗಿ ಡಾ. ಅಜಯ್ ಸಿಂಗ್ ಅವರಿಗೆ ಭವ್ಯ ಸ್ವಾಗತ ಕೋರಿ ಗಮನ ಸಳೆದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…