ಕಲಬುರಗಿ: ಹಿಂದೂ ಧರ್ಮದ ಪ್ರಕಾರ ತಾಯಿ ದುರ್ಗೆಯನ್ನು ನವರಾತ್ರಿಯಲ್ಲಿ ಪೂಜಿಸುವುದರೊಂದಿಗೆ ಕನ್ಯಾ ಪೂಜೆ ಮಾಡುವುದರಿಂದ ಭಕ್ತರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹಿಂದೂ ಸಂಸ್ಕೃತಿಯಲ್ಲಿ ಮಕ್ಕಳನ್ನು ದೇವರೆಂದು ಹೇಳುತ್ತಾರೆ. ಕನ್ಯಾ ಪೂಜೆಯಲ್ಲಿ ಒಂಭತ್ತು ಹೆಣ್ಣು ಮಕ್ಕಳನ್ನು ದೇವಿಯ ಅವತಾರಗಳಂತೆ ಅಲಂಕಾರ ಮಾಡಿ ಪೂಜಿಸಲಾಗುತ್ತದೆ.
ನಗರದ ಜೇವರ್ಗಿ ರಸ್ತೆಯ ದತ್ತ ನಗರದಲ್ಲಿ ಒಂಬತ್ತು ಕನ್ಯೆಯರ ಪಾದಕ್ಕೆ ಪುಷ್ಪವನ್ನಿಟ್ಟು, ಅರಿಶಿಣ-ಕುಂಕುಮವನ್ನು ಹಚ್ಚಿ ಅಕ್ಷತೆ ಹಾಕವುದರ ಮೂಲಕ ಕೃತಿಕಾ ರಾಠೋಡ, ಕೃಪಿತಾ, ಸುದಿಕ್ಷಾ ಹೆಳವರ, ರೀತಿಕಾ ಜಾದವ, ಸಾಹಿತ್ಯ ಜಾದವ, ಸಾನ್ವಿ ರೆಡ್ಡಿ, ಶೃಧ್ದಾ ಪಾಟೀಲ, ಶಿಖಾ ರೆಡ್ಡಿ, ಸುಪ್ರೀತ ಹೆಳವರ ಮತ್ತು ಸಂಚಿತಾ ರಾಠೋಡ ಕನ್ಯೆಯರನ್ನು ಶಿಲ್ಪಾ ಮತ್ತು ಶಿವಾನಂದ ಚವ್ಹಾಣ ದಂಪತಿಗಳು ಅವರ ನಿವಾಸದಲ್ಲಿ ಪೂಜಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವಾನಂದ ಚವ್ಹಾಣ, ಮಲ್ಲನಗೌಡ ಪಾಟೀಲ, ಬಸವರಾಜ ಹೆಳವರ ಯಾಳಗಿ, ಸಂಜೀವರೆಡ್ಡಿ ಪಾಟೀಲ, ಎಚ್.ವಿ ಜಾವದ, ಶಿವಕುಮಾರ, ರಾಜು ರಾಠೋಡ, ಶಂಕರ ಚವ್ಹಾಣ ಮತ್ತು ಇನ್ನಿತರರಿದ್ದರು.