ಕಲಬುರಗಿ: ಅಖಿಲ ಭಾರತ ಕೋಲಿ ಸಮಾಜ ನವದೆಹಲಿ ಕರ್ನಾಟಕ ಪ್ರದೇಶದ ಉತ್ತರ ಕರ್ನಾಟಕ ಭಾಗದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ವಿಭಾಗಿಯ ಕೋಲಿ ಸಮಾಜದ ಅಧ್ಯಕ್ಷರನ್ನಾಗಿ ದೇವಲ ಗಾಣಗಾಪುರದ ಗುರುನಾಥ ಭಗವಂತಪ್ಪ ಹೇರೂರ ಅವರನ್ನು ನೇಮಕ ಮಾಡಲಾಯಿತು.
ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಗುರುನಾಥ ಹೇರೂರ ಅವರನ್ನು ಅಖಿಲ ಕರ್ನಾಟಕ ಪ್ರದೇಶ ಕೋಲಿ ಸಮಾಜದ ಅಧ್ಯಕ್ಷರಾಗಿರುವ ದತ್ತಾತ್ರೇಯ ರೆಡ್ಡಿ ಅವರು ನೇಮಕಾತಿ ಆದೇಶವನ್ನು ಹಸ್ತಾಂತರಿಸಿದರು.
ಗುರುನಾಥ ಹೇರೂರ ರವರು ದಿವಂಗತ ವಿಠ್ಠಲ್ ಹೇರೂರು ಅವರ ಸಹೋದರರಾಗಿದ್ದಾರೆ. ಶ್ರೀಯುತ ರಲ್ಲಿ ಕೋಲಿ ಸಮಾಜದ ಬಗ್ಗೆ ಕಳಕಳಿ ಪ್ರೀತಿ ಇದೆ ಸಮಾಜವನ್ನು ಸಂಘಟಿಸುವ ಶಕ್ತಿ ರಕ್ತಗತವಾಗಿ ಬಂದಿರುತ್ತದೆ. ಗುರುನಾಥ್ ಹೇರೂರು ಅವರು ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಕೋಲಿ ಸಮಾಜದವರ ಸಮಸ್ಯೆಗಳನ್ನು ಅರಿತು ಸಮಾಜ ಒಂದು ನಿಟ್ಟಿನಲ್ಲಿ ತೆಗೆದುಕೊಂಡು ಹೋಗುವ ಸಂಘಟನಾತ್ಮಕ ಕೆಲಸ ಮಾಡಲಿ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಡಿವಾಳಪ್ಪ ನರಿಬೋಳ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಅವಟಿ, ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ, ಜಿಲ್ಲಾಧ್ಯಕ್ಷ ಪ್ರಕಾಶ ಜಮಾದಾರ, ಡಾ. ಟಿ ಡಿ ರಾಜ, ಡಾ. ಸರ್ದಾರ ರಾಯಪ್ಪ, ಸಾಬಣ್ಣ ಡಿಗ್ಗಿ, ಸೋಮರಾಯ ನಾಗಾವಿ, ರಾಜಶೇಖರ ತಲಾರಿ ಹಾಗೂ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…